ಟ್ವಿಟರ್ ಗುರುವಾರ ತನ್ನ ಇಬ್ಬರು ಉನ್ನತ ವ್ಯವಸ್ಥಾಪಕರನ್ನು ಕೆಲಸದಿಂದ ವಜಾಗೊಳಿಸಿದೆ. ಇದು ಟೆಸ್ಲಾ ಬಿಲಿಯನೇರ್ ಎಲೋನ್ ಮಸ್ಕ್ ಕಂಪನಿಯ ಯೋಜಿತ ಖರೀದಿಯ ಮಧ್ಯೆ ಇತ್ತೀಚಿನ ಮಹತ್ವದ ನಡೆಯಾಗಿದೆ. ಟ್ವಿಟರ್ ಜನರಲ್ ಮ್ಯಾನೇಜರ್ ಕೇವೊನ್ ಬೇಕ್‌ಪೂರ್ 7 ವರ್ಷಗಳ ನಂತರ ಕಂಪನಿಯಿಂದ ನಿರ್ಗಮಿಸುತ್ತಿದ್ದಾರೆ.
ಗುರುವಾರ ಮಾಡಿದ ಸರಣಿ ಟ್ವೀಟ್‌ಗಳಲ್ಲಿ, ಸಿಇಒ ಪರಾಗ್ ಅಗರವಾಲ್ ಅವರು ತಂಡವನ್ನು ಬೇರೆ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತಾರೆ ಎಂದು ನನಗೆ ತಿಳಿಸಿ, ನನ್ನನ್ನು ತೊರೆಯುವಂತೆ ಕೇಳಿಕೊಂಡರು ಎಂದು ಬೇಕ್‌ಪೂರ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್‌ನ ಆದಾಯ ಮತ್ತು ಉತ್ಪನ್ನದ ಪ್ರಮುಖರಾದ ಬ್ರೂಸ್ ಫಾಲ್ಕ್ರನ್ನು ಸಹ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 2007ರಲ್ಲಿ ತಾಜ್ ಮಹಲ್ ನೋಡಿದ್ದೆ, ಅದು ನಿಜಕ್ಕೂ ವಿಶ್ವದ ಅದ್ಭುತ: ಎಲಾನ್ ಮಸ್ಕ್