ETV Bharat / international

ಕೆನಡಾದಲ್ಲಿ ತೀವ್ರಗೊಂಡ ಕಾಳ್ಗಿಚ್ಚು: ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ - ಕೆನಡಾದಲ್ಲಿ ತೀವ್ರಗೊಂಡ ಕಾಳ್ಗಿಚ್ಚು

ಕೆನಡಾದಲ್ಲಿ ಕಾಳ್ಗಿಚ್ಚಿನ ತೀವ್ರತೆ ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಕಡಿಮೆಯಾಗುವ ಸಾಧ್ಯತೆಗಳಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Wildfires in Canada continue to pose challenges

author img

By ETV Bharat Karnataka Team

Published : Sep 8, 2023, 6:02 PM IST

Updated : Sep 9, 2023, 6:30 AM IST

ಒಟ್ಟಾವಾ : ಕೆನಡಾದಲ್ಲಿ ಕಾಳ್ಗಿಚ್ಚಿನ ಘಟನೆಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಸೆಪ್ಟೆಂಬರ್​ನಲ್ಲಿಯೂ ಬೆಂಕಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲವೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈ ವರ್ಷ ರಾಷ್ಟ್ರದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಘಟನೆಗಳ ಬಗ್ಗೆ ಮಾಹಿತಿ ನೀಡಿದ ಕೆನಡಾದ ಫೆಡರಲ್ ಅಧಿಕಾರಿಗಳು, ದೇಶದಲ್ಲಿ ಈ ವರ್ಷ ಒಟ್ಟಾರೆ 6,174 ಕಾಳ್ಗಿಚ್ಚಿನ ಘಟನೆಗಳು ಸಂಭವಿಸಿದ್ದು, ಎರಡು ಕಾಳ್ಗಿಚ್ಚುಗಳು ಒಂದು ಮಿಲಿಯನ್ ಹೆಕ್ಟೇರ್​ವರೆಗೆ ಹರಡಿವೆ ಎಂದು ತಿಳಿಸಿದ್ದಾರೆ.

ಕೆನಡಿಯನ್ ಇಂಟರ್ಜೆನ್ಸಿ ಫಾರೆಸ್ಟ್ ಫೈರ್ ಸೆಂಟರ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 1,000 ಕಾಳ್ಗಿಚ್ಚು ಕಾಣಿಸಿಕೊಂಡಿವೆ ಮತ್ತು 600ಕ್ಕೂ ಹೆಚ್ಚು ಕಾಳ್ಗಿಚ್ಚುಗಳು ನಿಯಂತ್ರಣ ಮೀರಿ ಸಾಗಿವೆ ಎಂದು ಹೇಳಿದೆ. ಆಲ್ಬರ್ಟಾ ಪ್ರಾಂತ್ಯದ ಪೂರ್ವಾರ್ಧದಿಂದ ಒಂಟಾರಿಯೊವರೆಗೆ ಮಧ್ಯ ಕೆನಡಾದಾದ್ಯಂತ ಕಾಳ್ಗಿಚ್ಚುಗಳ ಕೆನ್ನಾಲಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನ್ಯಾಚುರಲ್ ರಿಸೋರ್ಸಸ್ ಕೆನಡಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಕಳೆದ ತಿಂಗಳು ನೀಡಲಾದ ಮುನ್ಸೂಚನೆಯ ಪ್ರಕಾರ ಕಾಳ್ಗಿಚ್ಚುಗಳು ಸಂಭವಿಸುತ್ತಿವೆ. ದಕ್ಷಿಣ ಬ್ರಿಟಿಷ್ ಕೊಲಂಬಿಯಾ, ಪ್ರೈರೀಸ್, ವಾಯುವ್ಯ ಪ್ರದೇಶಗಳ ಭಾಗ ಮತ್ತು ಪಶ್ಚಿಮ ಒಂಟಾರಿಯೊಗಳಲ್ಲಿ ಗಂಭೀರ ಸ್ವರೂಪದ ಕಾಳ್ಗಿಚ್ಚುಗಳು ಸಂಭವಿಸಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು" ಎಂದು ನ್ಯಾಚುರಲ್ ರಿಸೋರ್ಸಸ್ ಕೆನಡಾದ ಮಹಾನಿರ್ದೇಶಕ ಮೈಕೆಲ್ ಮಾರ್ಟಿನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಇತ್ತೀಚಿನ ತಿಂಗಳುಗಳಲ್ಲಿ, ಉಲ್ಬಣಗೊಂಡ ಕಾಳ್ಗಿಚ್ಚು ದೇಶದ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗುವ ಆತಂಕ ಮೂಡಿಸಿದೆ. ಹಾಗಾಗಿ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಜನರನ್ನು ಸ್ಥಳಾಂತರಿಸುವ ಅನಿವಾರ್ಯತೆ ಉಂಟಾಗಿದೆ.

ಇದನ್ನೂ ಓದಿ: ಸೆ.3 ರಂದು 'ಸನಾತನ ಧರ್ಮ ದಿನ' ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

ಈ ಋತುವಿನಲ್ಲಿ ಮುಖ್ಯವಾಗಿ ಕ್ವಿಬೆಕ್ ಪ್ರಾಂತ್ಯದಾದ್ಯಂತ ಕಾಳ್ಗಿಚ್ಚು ಭುಗಿಲೆದ್ದಿದೆ. ಈ ಘಟನೆಯಲ್ಲಿ 5.3 ಮಿಲಿಯನ್ ಹೆಕ್ಟೇರ್ ಕಾಡು ಸುಟ್ಟುಹೋಗಿದೆ. ವಾಯುವ್ಯ ಪ್ರದೇಶಗಳಲ್ಲಿ 3.6 ಮಿಲಿಯನ್ ಹೆಕ್ಟೇರ್, ಆಲ್ಬರ್ಟಾದಲ್ಲಿ 2.3 ಮಿಲಿಯನ್ ಹೆಕ್ಟೇರ್, ಬಿ.ಸಿ. ಯಲ್ಲಿ 1.9 ಮಿಲಿಯನ್ ಹೆಕ್ಟೇರ್ ಮತ್ತು ನೋವಾ ಸ್ಕಾಟಿಯಾದಲ್ಲಿ 25,000 ಹೆಕ್ಟೇರ್ ಪ್ರದೇಶ ನಾಶವಾಗಿದೆ ಎಂದು ಉಪಗ್ರಹದ ಅಂಕಿ ಅಂಶಗಳನ್ನು ಆಧರಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ಅನೇಕ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬರ ಮತ್ತು ಕಾಳ್ಗಿಚ್ಚು ಈ ತ್ರೈಮಾಸಿಕದಲ್ಲಿ ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

2023ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಗಮನಾರ್ಹ ಪ್ರಮಾಣದಲ್ಲಿ ನಿಧಾನಗೊಂಡಿದೆ. ವಾರ್ಷಿಕ ಉತ್ಪಾದನಾ ಪ್ರಮಾಣದಲ್ಲಿ ಶೇಕಡಾ 0.2 ರಷ್ಟು ಇಳಿಕೆಯಾಗಿದೆ. ಬಳಕೆಯ ಬೆಳವಣಿಗೆಯಲ್ಲಿ ಇಳಿಕೆ, ವಸತಿ ಚಟುವಟಿಕೆಯಲ್ಲಿ ಕುಸಿತ ಮತ್ತು ದೇಶದ ಅನೇಕ ಪ್ರದೇಶಗಳಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಪರಿಣಾಮಗಳಿಂದ ಆರ್ಥಿಕ ಕುಸಿತ ಉಂಟಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಇದನ್ನೂ ಓದಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪ್ರಧಾನಿ ಮೋದಿ ಮಧ್ಯೆ ಸಾಮ್ಯತೆ ಇದೆಯಾ? ಇಲ್ಲಿದೆ ಕುತೂಹಲಕರ ಮಾಹಿತಿ

Last Updated : Sep 9, 2023, 6:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.