ಮಲಕಲ್ (ದಕ್ಷಿಣ ಸುಡಾನ್) : ಆಫ್ರಿಕಾ ಖಂಡದ ದಕ್ಷಿಣ ಸುಡಾನ್ ದೇಶದಲ್ಲಿ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯಲ್ಲಿರುವ ಐವರು ಭಾರತೀಯ ಮಹಿಳಾ ಸೇನಾ ಸಿಬ್ಬಂದಿ ಸೇರಿದಂತೆ ದೇಶದ 1,000ಕ್ಕೂ ಹೆಚ್ಚು ಶಾಂತಿಪಾಲಕರಿಗೆ ದಕ್ಷಿಣ ಸುಡಾನ್ ಯುಎನ್ ಪದಕಗಳನ್ನು ನೀಡಿ ಗೌರವಿಸಿದೆ. ಯುಎನ್‌ಎಂಐಎಸ್‌ಎಸ್ ಈ ಕುರಿತು ಗುರುವಾರ ಟ್ವೀಟ್ ಮಾಡಿ, "ಭಾರತದ 1,171 ಅತ್ಯುತ್ತಮ ಪುತ್ರರು ಮತ್ತು ಪುತ್ರಿಯರು ದಕ್ಷಿಣ ಸುಡಾನ್‌ನ ಅಪ್ಪರ್ ನೈಲ್‌ನಲ್ಲಿ ತಮ್ಮ ಪ್ರಮುಖ UNMISS(ದಕ್ಷಿಣ ಸುಡಾನ್‌ನ ವಿಶ್ವಸಂಸ್ಥೆಯ ಮಿಷನ್) ಕೆಲಸಕ್ಕಾಗಿ UN ಪದಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಅಪ್ಪರ್ ನೈಲ್‌ನಲ್ಲಿ ಭಾರತೀಯ ಶಾಂತಿಪಾಲಕರಿಗೆ ಈ ವರ್ಷದ ಪದಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಉಳಿದೆಲ್ಲ ವರ್ಷಕ್ಕಿಂತ ವಿಶೇಷವೆನಿಸಿದೆ. ಇದೇ ಮೊದಲ ಸಲ, ಪದಾತಿ ದಳ, ಇಂಜಿನಿಯರ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ ಬೃಹತ್ ತುಕಡಿಯ ಮೆರವಣಿಗೆಗೆ ಮೇಜರ್ ಜಾಸ್ಮಿನ್ ಚತ್ತಾ ನೇತೃತ್ವ ವಹಿಸಿದ್ದರು. ಈ ಕುರಿತು ಜಾಸ್ಮಿನ್ ಚತ್ತಾ ಮಾತನಾಡಿ, "ಈ ವಿಶೇಷ ದಿನದಂದು ನನ್ನ ರೆಜಿಮೆಂಟ್(ದಳ) ಪ್ರತಿನಿಧಿಸುವುದು ನನಗೆ ಬಹಳ ಗೌರವವೆನಿಸಿದೆ. ಮಹಿಳೆಯರನ್ನು ನಾಯಕರನ್ನಾಗಿ ಮಾಡುವ ಮೂಲಕ ನಾವು ದಕ್ಷಿಣ ಸುಡಾನ್‌ನ ನಾಗರಿಕರಿಗೆ ಮುಖ್ಯವಾಗಿ ಮಹಿಳೆಯರಿಗೆ ಬಲವಾದ ಸಂದೇಶ ಕಳುಹಿಸುತ್ತಿದ್ದೇವೆ" ಎಂದಿದ್ದಾರೆ.
-
Take a bow, #India 🇮🇳! Exactly 1,171 of your finest sons & daughters have received @UN medals for their vital #UNMISS work in Upper Nile, #SouthSudan. Major Jasmine Chattha and a couple of her female colleagues tell us more about their experiences: https://t.co/DqLZYMrnCm #A4P pic.twitter.com/cG1qQwthJf
— UNMISS (@unmissmedia) January 12, 2023 " class="align-text-top noRightClick twitterSection" data="
">Take a bow, #India 🇮🇳! Exactly 1,171 of your finest sons & daughters have received @UN medals for their vital #UNMISS work in Upper Nile, #SouthSudan. Major Jasmine Chattha and a couple of her female colleagues tell us more about their experiences: https://t.co/DqLZYMrnCm #A4P pic.twitter.com/cG1qQwthJf
— UNMISS (@unmissmedia) January 12, 2023Take a bow, #India 🇮🇳! Exactly 1,171 of your finest sons & daughters have received @UN medals for their vital #UNMISS work in Upper Nile, #SouthSudan. Major Jasmine Chattha and a couple of her female colleagues tell us more about their experiences: https://t.co/DqLZYMrnCm #A4P pic.twitter.com/cG1qQwthJf
— UNMISS (@unmissmedia) January 12, 2023
ಜೊತೆಗೆ, ಕೆಲಸದ ಸಂದರ್ಭದಲ್ಲಿ, ಉದಾಹರಣೆಗೆ ರಸ್ತೆ ಸಮಸ್ಯೆ ಬಗೆಹರಿಸಿದಾಗ ಅಥವಾ ಪ್ರವಾಹ ತಡೆಯಲು ಪ್ರಯತ್ನಿಸಿದಾಗ ತಂಡದ ಮಹಿಳೆಯರು ಜವಾಬ್ದಾರಿಯಿಂದ ಮುನ್ನಡೆಸುತ್ತಿದ್ದಾರೆ. ಆ ಸಮಯದಲ್ಲಿ ನಾವು ಅಲ್ಲಿನ ಸ್ಥಳೀಯ ಜನರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಅವರೇ ನಮ್ಮ ಸಾಮರ್ಥ್ಯ ನೋಡುತ್ತಾರೆ ಎಂದು ಜಾಸ್ಮಿನ್ ಚತ್ತಾ UNMISS ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ಪರ್ ನೈಲ್‌ನಲ್ಲಿರುವ ಭಾರತದ ಶಾಂತಿಪಾಲನಾ ಪಡೆಯಲ್ಲಿ ಬಹುತೇಕ ಪುರುಷರಿದ್ದರು. ಹೀಗಿದ್ದರೂ ಈ ಬಾರಿ ಐವರು ಮಹಿಳಾ ಸೇನಾ ಸಿಬ್ಬಂದಿ ಅತ್ಯುತ್ತಮ ಕೆಲಸಕ್ಕಾಗಿ ಪದಕ ಪಡೆದಿದ್ದಾರೆ. ಈ ಬಗ್ಗೆ ಇಂಜಿನಿಯರ್ ಕ್ಯಾಪ್ಟನ್ ಕರಿಷ್ಮಾ ಕಥಾಯತ್ ಮಾತನಾಡಿ, ನಾನು ಕೂಡ ಮೇಜರ್ ಚತ್ತಾರವರಂತೆ ಮಿಲಿಟರಿ ಕುಟುಂಬದಿಂದ ಬಂದವಳು. ಜನರ ಜೀವನ ಮಟ್ಟ ಸುಧಾರಣೆ ಮಾಡಲು ನಾವು ಇಲ್ಲಿದ್ದೇವೆ. ನಮ್ಮ ಇಂಜಿನಿಯರಿಂಗ್ ಸೇವೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ. ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಮಿಷನ್ (ಯುಎನ್‌ಎಂಐಎಸ್‌ಎಸ್) ನೊಂದಿಗೆ ಸೇವೆ ಸಲ್ಲಿಸುತ್ತಿರುವ ಭಾರತೀಯ ಪಡೆಗಳು ಅಲ್ಲಿಯ ಮೂಲ ಸೌಕರ್ಯಗಳನ್ನು ಸುಧಾರಿಸಲು ಕಾರ್ಯನಿರ್ವಹಿಸುತ್ತಿವೆ. ಕೆಲವೊಮ್ಮೆ ಅಲ್ಲಿ ಸಂಭವಿಸುವ ದಾಳಿ, ಹಿಂಸಾಚಾರದಿಂದ ನಾಗರಿಕರನ್ನು ರಕ್ಷಿಸುವ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ತಾಂತ್ರಿಕ ದೋಷದಿಂದ 5,400 ವಿಮಾನ ಹಾರಾಟದಲ್ಲಿ ವ್ಯತ್ಯಯ: ವ್ಯವಸ್ಥೆ ವಿರುದ್ಧ ಹರಿಹಾಯ್ದ ಪ್ರಯಾಣಿಕರು