ಅಥೆನ್ಸ್ (ಗ್ರೀಸ್) : ಎವಿಯಾ ದ್ವೀಪದಲ್ಲಿ ಮಂಗಳವಾರ ಕಾಳ್ಗಿಚ್ಚನ್ನು ನಿಯಂತ್ರಿಸಲು ಆಗಮಿಸಿದ್ದ ವಿಮಾನವೊಂದು ಪತನಗೊಂಡು ಗ್ರೀಕ್ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನಗೊಂಡಿದೆ.
ಮಂಗಳವಾರ ಪ್ಲಾಟಾನಿಸ್ಟೋಸ್‌ನಲ್ಲಿ ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಂದರ್ಭದಲ್ಲಿ ವಾಟರ್ ಬಾಂಬಿಂಗ್ ವಿಮಾನ ಕೆನಡೈರ್ ಸಿಎಲ್ -215 ಮಧ್ಯಾಹ್ನ 2:52 ಕ್ಕೆ (ಸ್ಥಳೀಯ ಕಾಲಮಾನ) ಪತನಗೊಂಡಿತು ಎಂದು ದೇಶದ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯ ಬಳಿಕ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, 34 ವರ್ಷದ ವಿಮಾನದ ಕ್ಯಾಪ್ಟನ್ ಮತ್ತು 27 ವರ್ಷದ ಸಹ ಪೈಲಟ್ ಇಬ್ಬರೂ ಸುಟ್ಟು ಕರಕಲಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
-
A CL-415 Amphibious-Firefighting Aircraft with the Hellenic Air Force has Crashed today while Fighting a Wildfire on the Greek Island of Evia, the Crash is reported to have resulting in the Immediate Death of the 2 Pilots. pic.twitter.com/Z62f0BLrn3
— OSINTdefender (@sentdefender) July 25, 2023 " class="align-text-top noRightClick twitterSection" data="
">A CL-415 Amphibious-Firefighting Aircraft with the Hellenic Air Force has Crashed today while Fighting a Wildfire on the Greek Island of Evia, the Crash is reported to have resulting in the Immediate Death of the 2 Pilots. pic.twitter.com/Z62f0BLrn3
— OSINTdefender (@sentdefender) July 25, 2023A CL-415 Amphibious-Firefighting Aircraft with the Hellenic Air Force has Crashed today while Fighting a Wildfire on the Greek Island of Evia, the Crash is reported to have resulting in the Immediate Death of the 2 Pilots. pic.twitter.com/Z62f0BLrn3
— OSINTdefender (@sentdefender) July 25, 2023
ಇದನ್ನೂ ಓದಿ : ಜೌಕು ಕಣಿವೆ ಕಾಳ್ಗಿಚ್ಚು : ನೀರು ಮರುಪೂರಣಕ್ಕೆ ಬಂದ ಐಎಎಫ್ ಬಾಂಬಿ ಹೆಲಿಕಾಪ್ಟರ್, ವಿಡಿಯೋ
"ಎವಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ವಿಮಾನ CL-215 ನ ವಾಯುಪಡೆಯ ಅಧಿಕಾರಿ ಮತ್ತು ಪೈಲಟ್ ಕರ್ತವ್ಯದ ವೇಳೆ ಮೃತಪಟ್ಟಿದ್ದು, ಈ ಹಿನ್ನೆಲೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರವಾಸಿ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫು ಸೇರಿದಂತೆ ಮೂರು ಕಡೆ ಭಾರಿ ಕಾಡ್ಗಿಚ್ಚು ಹಬ್ಬಿದೆ. ಈ ಪ್ರದೇಶದಲ್ಲಿ ಗಾಳಿ ಬಲವಾಗಿ ಬೀಸುತ್ತಿರುವುದರಿಂದ ಸುಲಭವಾಗಿ ಬೆಂಕಿ ವ್ಯಾಪಿಸುತ್ತಿದೆ. ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ. ಗ್ರೀಸ್ನಲ್ಲಿ 35,000 ಹೆಕ್ಟೇರ್ (86,500 ಎಕರೆ) ಅರಣ್ಯ ಮತ್ತು ಇತರೆ ಭೂಮಿ ಬೆಂಕಿಗಾಹುತಿಯಾಗಿದೆ. ಸೋಮವಾರ ಸುಮಾರು 2,500 ಜನರನ್ನು ಗ್ರೀಕ್ ದ್ವೀಪವಾದ ಕಾರ್ಫುದಿಂದ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ : ಗ್ರೀಸ್ ಅರಣ್ಯ ಆವರಿಸಿದ ಬೆಂಕಿ ; ಸಾವಿರಾರು ಜನರ ಸ್ಥಳಾಂತರ
ದೇಶಾದ್ಯಂತ ಕಾಳ್ಗಿಚ್ಚು ವ್ಯಾಪ್ತಿಸುತ್ತಿರುವ ಕುರಿತು ನಿನ್ನೆ ಆತಂಕ ವ್ಯಕ್ತಪಡಿಸಿದ್ದ ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ಸೋಟಾಕಿಸ್, ಮೆಡಿಟರೇನಿಯನ್ ರಾಷ್ಟ್ರವು ಹವಾಮಾನ ಬಿಕ್ಕಟ್ಟು ಎಂಬ ಯುದ್ಧ ಎದುರಿಸುತ್ತಿದೆ. ಮುಂದಿನ ಕೆಲವು ವಾರಗಳವರೆಗೆ ನೀವೆಲ್ಲಾ ಜಾಗರೂಕರಾಗಿರಬೇಕು. ಕಳೆದುಕೊಂಡಿದ್ದನ್ನು ನಾವು ಮರುನಿರ್ಮಾಣ ಮಾಡುತ್ತೇವೆ. ಗಾಯಗೊಂಡವರಿಗೆ ಪರಿಹಾರ ನೀಡುವ ಕೆಲಸ ಸಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಉತ್ತರಾಖಂಡದಲ್ಲಿ ತಣಿಯದ ಕಾಳ್ಗಿಚ್ಚು : ಮುಂದುವರಿದ ಕಾರ್ಯಾಚರಣೆ
ಅಲ್ಜೀರಿಯಾದಲ್ಲಿ ಕಾಡ್ಗಿಚ್ಚಿನ ವಿರುದ್ಧ ಹೋರಾಡುತ್ತಿದ್ದ 10 ಸೈನಿಕರು ಸೇರಿದಂತೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಉತ್ತರ ಆಫ್ರಿಕಾ ದೇಶದ ಕೆಲವು ಭಾಗಗಳಲ್ಲಿ ತಾಪಮಾನವು 48 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಸೋಮವಾರ ಕೆಲ ಸಾವುನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಅಲ್ಜೀರಿಯಾದ ಆಂತರಿಕ ಸಚಿವಾಲಯವು 16 ಪ್ರಾಂತ್ಯಗಳಲ್ಲಿ 97 ಬೆಂಕಿ ಅವಘಡ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಲ್ಲಿನ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ : ಉತ್ತರಾಖಂಡ ಕಾಡ್ಗಿಚ್ಚು : 24 ಗಂಟೆಯಲ್ಲಿ ನಾಲ್ವರು ಸಾವು, ಪ್ರಾಣಿಗಳು ಬಲಿ