ETV Bharat / international

ಈಕ್ವೆಡಾರ್​ ಜೈಲಿನಲ್ಲಿ ಭೀಕರ ಸಂಘರ್ಷ: 20 ಮಂದಿ ಸಾವು, ಐವರಿಗೆ ಗಂಭೀರ ಗಾಯ - ಈಕ್ವೆಡಾರ್​ ಜೈಲಿನಲ್ಲಿ ಗ್ಯಾಂಗ್​​ಗಳ ನಡುವೆ ಘರ್ಷಣೆ

ಈಕ್ವೆಡಾರ್ ರಾಜಧಾನಿ ಕ್ವಿಟೋದಿಂದ ಸುಮಾರು 310 ಕಿಲೋಮೀಟರ್ ದೂರದಲ್ಲಿರುವ ತುರಿ ಎಂಬಲ್ಲಿರುವ ಜೈಲಿನಲ್ಲಿ ಗ್ಯಾಂಗ್​ಗಳ ಘರ್ಷಣೆ ನಡೆದಿದೆ.

Ecuador prison riot leaves 20 dead, 5 seriously injured
ಈಕ್ವೆಡಾರ್​ ಜೈಲಿನಲ್ಲಿ ಸಂಘರ್ಷ: 20 ಮಂದಿ ಸಾವು, ಐವರಿಗೆ ಗಂಭೀರ ಗಾಯ
author img

By

Published : Apr 5, 2022, 8:06 AM IST

ಕ್ವಿಟೋ(ಈಕ್ವೆಡಾರ್): ಜೈಲಿನಲ್ಲಿ ಗ್ಯಾಂಗ್‌ವಾರ್‌ ನಡೆದು ಸುಮಾರು 20 ಜನರು ಸಾವನ್ನಪ್ಪಿ, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ರಾಜಧಾನಿ ಕ್ವಿಟೋದಿಂದ ಸುಮಾರು 310 ಕಿಲೋಮೀಟರ್ ದೂರದಲ್ಲಿರುವ ತುರಿ ಎಂಬಲ್ಲಿರುವ ಜೈಲಿನಲ್ಲಿ ಘರ್ಷಣೆ ಸಂಭವಿಸಿದೆ ಎಂದು ಗೃಹ ಸಚಿವ ಪ್ಯಾಟ್ರಿಸಿಯೊ ಕ್ಯಾರಿಲ್ಲೊ ತಿಳಿಸಿದ್ದಾರೆ.

ಬಂದೂಕುಗಳು ಮತ್ತು ಚಾಕುಗಳಿಂದ ಪರಸ್ಪರ ದಾಳಿ ನಡೆದಿದೆ. ಸತ್ತವರಲ್ಲಿ ಐವರ ದೇಹವನ್ನು ವಿರೂಪಗೊಳಿಸಲಾಗಿದೆ. ಆರು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಕನಿಷ್ಠ ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ಯಾಟ್ರಿಸಿಯೊ ಕ್ಯಾರಿಲ್ಲೊ ಹೇಳಿದರು. ರೇಡಿಯೊ ಡೆಮಾಕ್ರಸಿ ಎಂಬ ರೇಡಿಯೋದೊಂದಿಗೆ ಮಾತನಾಡಿದ ಅವರು 'ಕ್ರಿಮಿನಲ್ ಎಕಾನಮಿ' ರಾಜಕೀಯದೊಂದಿಗೆ ಲಿಂಕ್ ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮಾಧ್ಯಮಗಳು ಕೆಲವು ಘಟನೆಗಳನ್ನು ಪ್ರಸಾರ ಮಾಡಿದ್ದು, ವಿಡಿಯೋಗಳಲ್ಲಿ ಗುಂಡೇಟು ಮತ್ತು ಕಿರುಚಾಟಗಳು ಕೇಳಿಬಂದಿವೆ. ಗಲಭೆ ನಿಯಂತ್ರಿಸಲು ಸುಮಾರು 1,000 ಪೊಲೀಸರು ಮತ್ತು ಮಿಲಿಟರಿ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎಂದು ಕ್ಯಾರಿಲ್ಲೊ ಹೇಳಿದರು. 2020ರಿಂದ ಈವರೆಗೆ ಈಕ್ವೆಡಾರ್ ಜೈಲುಗಳಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 316 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಕಳೆದ ತಿಂಗಳು ಮಾಹಿತಿ ನೀಡಿದೆ. ಸೆಪ್ಟೆಂಬರ್ ನಡೆದ ಗಲಭೆಯಲ್ಲಿ 119 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಉಗ್ರರ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.