ಬೀಜಿಂಗ್, ಚೀನಾ: ಚೀನಾದ ಸಂಶೋಧಕರು ದೇಶದ ಗಗನಯಾತ್ರಿಗಳಿಗಾಗಿ ಅತಿ ತೆಳುವಾದ ಡೈಪರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ, ಗಗನಯಾತ್ರಿಗಳಿಗೆ ಲಿಫ್ಟ್-ಆಫ್, ಲ್ಯಾಂಡಿಂಗ್, ಬಾಹ್ಯಾಕಾಶ ನಡಿಗೆಗಳು ಮತ್ತು ಬಾಹ್ಯ ಚಟುವಟಿಕೆಗಳ ಸಮಯದಲ್ಲಿ ಡೈಪರ್‌ಗಳ ಅಗತ್ಯವಿರುತ್ತದೆ.
ಪ್ರಸ್ತುತ ಬಳಸಲಾಗುವ ಉತ್ಪನ್ನವು 26ಎಂಎಂ (1 ಇಂಚು) ದಪ್ಪದ ಕಾರಣದಿಂದಾಗಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಅತಿ ತೆಳುವಾದ ಡೈಪರ್‌ಗಳ ಅಭಿವೃದ್ಧಿಗೆ ಚೀನಾ ಕೈ ಹಾಕಿದೆ.
ಪ್ರಸ್ತುತ ಬಾಹ್ಯಾಕಾಶ ನ್ಯಾಪಿಗಳು ತುಂಬಾ ದಪ್ಪವಾಗಿರುತ್ತದೆ. ಕೆಳಭಾಗದಲ್ಲಿ ಬಲವಾದ ಒತ್ತಡವನ್ನು ಉಂಟುಮಾಡುತ್ತದೆ. ಗಗನಯಾತ್ರಿಗಳು ಹೆಚ್ಚಾಗಿ ಕೆಲಸದ ಹೊರೆಗಳನ್ನು ಹೊತ್ತಿರುತ್ತಾರೆ. ಹೆಚ್ಚು ಕೆಲಸದ ಸಮಯವನ್ನು ಬಾಹ್ಯಕಾಶದಲ್ಲೇ ಎದುರಿಸುತ್ತಾರೆ. ಹೆಚ್ಚು ಆರಾಮದಾಯಕ ಮತ್ತು ಸುಲಭವಾಗಿ ಧರಿಸಲು ಹೊಸ ಉತ್ಪನ್ನ ಸಂಶೋಧಿಸುವುದು ನಿರ್ಣಾಯಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಚೀನಾದ ಗಗನಯಾತ್ರಿಗಳಿಗೆ ನೈರ್ಮಲ್ಯ ಉತ್ಪನ್ನಗಳನ್ನು ಪೂರೈಸುವ ಕಂಪನಿಯಾದ ಗುವಾಂಗ್‌ಡಾಂಗ್ ಯಿನ್‌ಯಿನ್ ಕೋ ಸಹಭಾಗಿತ್ವದಲ್ಲಿ ಅಧ್ಯಯನ ನಡೆಸುತ್ತಿರುವ ಸಹ-ಲೇಖಕ ವಾಂಗ್ ಟಿಯಾನ್‌ಹುಯಿ ಪ್ರಕಾರ, ಚೀನಾದ ಗಗನಯಾತ್ರಿಗಳು ಕಕ್ಷೆಯಲ್ಲಿ ತೆಳುವಾದ ನೇಪಿಗಳನ್ನು ಧರಿಸುತ್ತಾರೆ. ಹೊಸ ಸ್ಪೇಸ್ ನ್ಯಾಪಿಯು ಪ್ರಸ್ತುತ ಉತ್ಪನ್ನಕ್ಕಿಂತ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ತೆಳುವಾಗಿರುತ್ತದೆ. ಅಂದರೆ 7 ಮಿಮಿ ದಪ್ಪ ಹೊಂದಿರುತ್ತದೆ. ಇದು 1 ಕೆಜಿಗಿಂತ ಹೆಚ್ಚು ಮೂತ್ರ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ವಾಂಗ್ ಹೇಳಿದ್ದಾರೆ.
ಓದಿ: ಚಂದ್ರನನ್ನೇ ವಶಪಡಿಸಿಕೊಳ್ಳಲು ಡ್ರ್ಯಾಗನ್ ಪ್ಲಾನ್.. ಫಲಿಸುವುದೇ ಚೀನಾ ತಂತ್ರ?
ಈ ಡೈಪರ್ ಹೆಚ್ಚು ತೆಳುವಾಗಿದ್ದು, ಆರಾಮದಾಯಕ ಮತ್ತು ಉತ್ತಮ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಉತ್ಪನ್ನವನ್ನು ಚೀನಾದ ಬಾಹ್ಯಾಕಾಶ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಆದರೆ, ಅವರು ಅದನ್ನು ಯಾವಾಗ ಬಳಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಪ್ರಸ್ತುತ NASA ಗಗನಯಾತ್ರಿಗಳು ಗರಿಷ್ಠ ಹೀರಿಕೊಳ್ಳುವ ಉಡುಪನ್ನು (maximum absorbency garment) ಬಳಸುತ್ತಾರೆ.
ಅದನ್ನು ಶಾರ್ಟ್ಸ್‌ನಂತೆ ಎಳೆಯಲಾಗುತ್ತದೆ. ಇದು 2 ಲೀಟರ್ ವರೆಗೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, MAG ಧರಿಸಲು ಅನಾನುಕೂಲವಾಗಿದೆ ಮತ್ತು ಅದನ್ನು ತುಂಬಾ ದೊಡ್ಡದಾಗಿದೆ. ಗಗನಯಾತ್ರಿಗಳು ಸೌಕರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. 1 ಕೆಜಿ ದ್ರವವನ್ನು ಹೀರಿಕೊಳ್ಳುವ ಸಾಮರ್ಥ್ಯವು ಏರೋಸ್ಪೇಸ್ ಅಗತ್ಯಗಳಿಗೆ ಸಾಕಾಗುತ್ತದೆ. ಇಲ್ಲಿಯವರೆಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಕಂಪನಿಯ ಸಂಶೋಧನಾ ತಂಡದ ಮುಖ್ಯಸ್ಥ ವಾಂಗ್ ಹೇಳಿದ್ದಾರೆ.
ಚೀನಾ ಮುಂದಿನ 10 ವರ್ಷಗಳ ಕಾಲ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯನ್ನು ಹೊಂದಿದ್ದು, ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸುವುದು ಮತ್ತು ಪ್ರತಿ ವರ್ಷ ಎರಡು ಮಾನವಸಹಿತ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ.