ETV Bharat / international

ಬ್ಯಾಕ್ಟೀರಿಯಾ ಸೋಂಕಿನಿಂದ ಬಳಲುತ್ತಿರುವ ಅಮೆರಿಕದ ಖ್ಯಾತ ಗಾಯಕಿ ಮಡೋನಾ

ಅಮೆರಿಕದ ಖ್ಯಾತ ಗಾಯಕಿ ಮಡೋನಾ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

author img

By

Published : Jun 29, 2023, 9:47 AM IST

madonna
ಗಾಯಕಿ ಮಡೋನಾ

ವಾಷಿಂಗ್ಟನ್ ಡಿಸಿ (ಅಮೆರಿಕ) : ಯುಎಸ್​ನ ಖ್ಯಾತ ಗಾಯಕಿ ಮತ್ತು ಗೀತ ರಚನೆಗಾರ್ತಿ ಮಡೋನಾ ಅವರು "ಗಂಭೀರ ಬ್ಯಾಕ್ಟೀರಿಯಾದ ಸೋಂಕಿನಿಂದ" ಬಳಲುತ್ತಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಗೈ ಓಸಿಯಾರಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಮಡೋನಾ ಅವರಿಗೆ ಕಳೆದ ಶನಿವಾರ ಬ್ಯಾಕ್ಟೀರಿಯಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಆದರೂ ಸಂಪೂರ್ಣ ಚೇತರಿಕೆಯಾಗಲಿ ಎಂದು ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಈ ಹಿನ್ನೆಲೆ ನಾವು ಪ್ರವಾಸಕ್ಕೆ ಸಂಬಂಧಿಸಿದ ಎಲ್ಲ ಕಮಿಟ್‌ಮೆಂಟ್‌ಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ. ಹೊಸ ಪ್ರವಾಸ ಪ್ರಾರಂಭವಾಗುವ ದಿನಾಂಕ ಮತ್ತು ಮರು ನಿಗದಿಪಡಿಸಿದ ಪ್ರದರ್ಶನಗಳು ಸೇರಿದಂತೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಸ್ಸಾಂನ ಪ್ರಸಿದ್ಧ ಕಾಮಾಖ್ಯ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಕಂಗನಾ ರಣಾವತ್​​

ಗಾಯಕಿ ಮಡೋನಾ ತನ್ನ ಸಂಗೀತ ವೃತ್ತಿ ಜೀವನದ 40 ನೇ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಈ ವರ್ಷದ ಆರಂಭದಲ್ಲಿ ಸೆಲೆಬ್ರೇಶನ್ ಪ್ರವಾಸ ಘೋಷಿಸಿದ್ದರು. ಅಮೆರಿಕದ ಸುದ್ದಿಸಂಸ್ಥೆಯೊಂದು ನೀಡಿದ ಮಾಹಿತಿ ಪ್ರಕಾರ, ಸೆಲೆಬ್ರೇಶನ್ ಟೂರ್ ಎಂಬ ಶೀರ್ಷಿಕೆಯ ಮಡೋನಾ ಅವರ ಮುಂದಿನ ಪ್ರವಾಸವು ಜುಲೈ 15 ರಿಂದ ಕೆನಡಾದ ವ್ಯಾಂಕೋವರ್‌ನಲ್ಲಿ ಪ್ರಾರಂಭವಾಗಲಿದೆ, ನಂತರ ಜುಲೈ 18 ರಂದು ಸಿಯಾಟಲ್‌ನಲ್ಲಿ ಎರಡು ದಿನ ನಡೆಯಲಿದೆ. ಬಳಿಕ, ಯುರೋಪ್‌ಗೆ ತೆರಳುವ ಮೊದಲು ಅಕ್ಟೋಬರ್ ಆರಂಭದವರೆಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಾದ್ಯಂತ ಪ್ರವಾಸವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಖ್ಯಾತ ಅಮೆರಿಕನ್ ಗಾಯಕಿ ಮಡೋನಾಗಿಲ್ವಂತೆ ಕೊರೊನಾ ಭಯ.. ಯಾಕಂದ್ರೇ,,

1958 ರಲ್ಲಿ ಕ್ಯಾಥೋಲಿಕ್​ನಲ್ಲಿ ಜನಿಸಿದ ಈ ವಿದ್ಯಾವಂತ ಕಲಾವಿದೆ, 1977 ರಲ್ಲಿ ಕೇವಲ 35 ಡಾಲರ್‌ಗಳೊಂದಿಗೆ ನ್ಯೂಯಾರ್ಕ್‌ಗೆ ತೆರಳಿ ಬದುಕು ಕಟ್ಟಿಕೊಂಡಿದ್ದಾರೆ. 1982ರಲ್ಲಿ ಬಿಡುಗಡೆಯಾ್ ' ಎವೆರಿಬಡಿ ' ಬಳಿಕ ಲಕ್ಕಿ ಸ್ಟಾರ್, ಬಾರ್ಡರ್‌ಲೈನ್ ಮತ್ತು ಹಾಲಿಡೇ ಸಾಂಗ್​ಗಳು ಅವರನ್ನು ಸ್ಟಾರ್ ಹಾದಿಯತ್ತ ಕರೆದೊಯ್ದವು.

ಇದನ್ನೂ ಓದಿ : 72 Hoorain Trailer: ಉಗ್ರವಾದ ಕುರಿತ ಸಿನಿಮಾ ಟ್ರೇಲರ್​ಗೆ ಸಿಗದ ಸಿಬಿಎಫ್​ಸಿ ಸಮ್ಮತಿ!

1984 ರಲ್ಲಿ ಬಿಡುಗಡೆಯಾದ ಲೈಕ್ ಎ ವರ್ಜಿನ್ ಆಲ್ಬಂ ಸಾಂಗ್ ಮಡೋನಾ ಅವರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವಂತೆ ಮಾಡಿತು. 2020 ರಲ್ಲಿ ಮಡೋನಾ ತನ್ನ ಮೇಡಮ್​ ಎಕ್ಸ್ ಪ್ರವಾಸದಲ್ಲಿ ಉಂಟಾದ ಗಾಯದ ನಂತರ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾದರು. ಲೈಕ್ ಎ ವರ್ಜಿನ್ ಸೇರಿದಂತೆ 7 ಬಾರಿ ಪ್ರಸಿದ್ಧ ಗ್ರ್ಯಾಮಿ ಪ್ರಶಸ್ತಿ ವಿಜೇತರೂ ಆಗಿರುವ ಮಡೋನಾ, ಅಮೆರಿಕದ ಖ್ಯಾತ ಸಂಗೀತ ಗಾಯಕರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ : ಕೊರೊನಾ ಸೋಂಕು ಇದ್ದರೂ ಪಾರ್ಟಿಯಲ್ಲಿ ಭಾಗಿಯಾದ ಪಾಪ್ ಕ್ವೀನ್‌​ ಮಡೋನಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.