ETV Bharat / international

ಬ್ರೆಜಿಲ್‌ನಲ್ಲಿ ಭಾರಿ ಮಳೆ: ಭೂಕುಸಿತ, ಪ್ರವಾಹಕ್ಕೆ 19 ಮಂದಿ ಬಲಿ - ಭೂಕುಸಿತ

ಬ್ರೆಜಿಲ್​​ನಲ್ಲಿ ಭಾರಿ ಮಳೆ- ಭೂಕುಸಿತ, ಪ್ರವಾಹಕ್ಕೆ ಸಿಲುಕಿ 19 ಮಂದಿ ದುರ್ಮರಣ.

Representative image
ಪ್ರಾತಿನಿಧಿಕ ಚಿತ್ರ
author img

By

Published : Feb 20, 2023, 6:47 AM IST

ಸಾವೋ ಪಾಲೊ(ಬ್ರೆಜಿಲ್): ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಉತ್ತರ ಸಾವೋ ಪಾಲೊ ರಾಜ್ಯದ ಹಲವಾರು ನಗರಗಳಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಬ್ರೆಜಿಲ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರು, ಗಾಯಗೊಂಡವರು ಮತ್ತು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಸಾವೋ ಸೆಬಾಸ್ಟಿಯಾವೊ ಮತ್ತು ಬರ್ಟಿಯೊಗಾ ನಗರಗಳ್ಲಿ ಆಚರಿಸಬೇಕಾದ ಕಾರ್ನಿವಲ್ ಹಬ್ಬವನ್ನು ರದ್ದುಗೊಳಿಸಲಾಗಿದೆ.

"ಪ್ರತಿಕೂಲ ಹವಮಾನದ ಕಾರಣ ನಮ್ಮ ರಕ್ಷಣಾ ತಂಡಗಳು ಹಲವಾರು ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ" ಎಂದು ಸಾವೋ ಸೆಬಾಸ್ಟಿಯಾವೊ ಮೇಯರ್ ಫೆಲಿಪೆ ಅಗಸ್ಟೊ ಹೇಳಿದ್ದಾರೆ. ಅವರು ತಮ್ಮ ನಗರದಲ್ಲಿನ ಭೀಕರ ವಿನಾಶದ ಹಲವಾರು ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಪ್ರವಾಹಕ್ಕೆ ಸಿಲುಕಿದ ಮಗುವನ್ನು ಬೀದಿಯಲ್ಲಿ ಸಾಲಾಗಿ ನಿಂತಿದ್ದ ಸ್ಥಳೀಯರು ರಕ್ಷಿಸಿರುವುದನ್ನು ಕಾಣಬಹುದಾಗಿದೆ.

ಕಳೆದ ಒಂದು ದಿನದಲ್ಲಿ ಈ ಪ್ರದೇಶದಲ್ಲಿ 600 ಮಿಲಿ ಮೀಟರ್​ಗೂ ಅಧಿಕ ಮಳೆಯಾಗಿದೆ. ಇದು ಬ್ರೆಜಿಲ್‌ ಇತಿಹಾಸದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸುರಿದ ಭಾರಿ ಮಳೆಯಾಗಿದೆ ಎಂದು ಸಾವೋ ಪಾಲೊ ರಾಜ್ಯ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೇ ಅವಧಿಯಲ್ಲಿ ಬರ್ಟಿಯೋಗ ನಗರದಲ್ಲಿ 687 ಮಿಲಿ ಮೀಟರ್ ಮಳೆಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮನೆಗಳು ಜಲಾವೃತ: ಗವರ್ನರ್ ಟಾರ್ಸಿಸಿಯೊ ಡಿ ಫ್ರೀಟಾಸ್ ಅವರು ಸೇನೆಯ ನೆರವು ಕೋರಿದ್ದಾರೆ. ಇಂದು ಎರಡು ವಿಮಾನಗಳು ಮತ್ತು ರಕ್ಷಣಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ಉಬಾಟುಬಾ, ಸಾವೊ ಸೆಬಾಸ್ಟಿಯಾವೊ, ಇಲ್ಹಬೆಲಾ, ಕ್ಯಾರಗ್ವಾಟಟುಬಾ ಮತ್ತು ಬರ್ಟಿಯೋಗಾ ನಗರಗಳಿಗೆ ಸಾರ್ವಜನಿಕ ವಿಪತ್ತು ತಂಡ ತೆರಳಲಿವೆ ಎಂದು ತಿಳಿಸಿದ್ದಾರೆ. ಭಾರಿ ಮಳೆ ಹಾಗೂ ಪ್ರವಾಹದಿಂದ ಮನೆಗಳು ಜಲಾವೃತವಾಗಿದ್ದು, ಮೇಲ್ಛಾವಣಿ ಮಾತ್ರ ಗೋಚರಿಸುತ್ತಿವೆ. ನಿವಾಸಿಗಳು ಸಣ್ಣ ದೋಣಿಗಳ ಮೂಲಕ ವಸ್ತುಗಳನ್ನು ಮತ್ತು ಜನರನ್ನು ಸುಕ್ಷಿತ ಪ್ರದೇಶಕ್ಕೆ ಸಾಗಿಸುತ್ತಿದ್ದಾರೆ. ರಿಯೊ ಡಿ ಜನೈರೊವನ್ನು ಬಂದರು ನಗರವಾದ ಸ್ಯಾಂಟೋಸ್‌ಗೆ ಸಂಪರ್ಕಿಸುವ ರಸ್ತೆಯು ಭೂಕುಸಿತ ಮತ್ತು ಪ್ರವಾಹದಿಂದ ನಿರ್ಬಂಧಿಸಲ್ಪಟ್ಟಿದೆ.

ಇದನ್ನೂ ಓದಿ: ಭಾರಿ ಮಳೆ: ಭೂಕುಸಿತಕ್ಕೆ 12 ಮಂದಿ ಬಲಿ

ಕಣಿವೆ ಪ್ರದೇಶಗಳಲ್ಲಿ ಭಾರಿ ಹಿಮಪಾತ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ತ್ರಾಲ್ ಉಪಜಿಲ್ಲೆಗಳು ಸೇರಿದಂತೆ ಬಹುತೇಕ ತಗ್ಗು ಪ್ರದೇಶ ಮತ್ತು ಎತ್ತರದ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಹಿಮಪಾತವಾಗಿತ್ತು. ಹಿಮಪಾತದಿಂದಾಗಿ ಉಂಟಾಗುವ ಪರಿಸ್ಥಿತಿಯನ್ನು ನಿಯತ್ರಿಸಲು ಆಡಳಿತ ತ್ರಾಲ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿತ್ತು. ಫೆ. 9 ಮತ್ತು 11ರ ನಡುವೆ ಬಯಲು ಪ್ರದೇಶದಲ್ಲಿ ಲಘು ಹಿಮಪಾತ ಹಾಗೂ ಎತ್ತರದ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿತ್ತು. ಹವಾಮಾನ ವೈಪರೀತ್ಯವಾಗುತ್ತಿರುವ ಹಿನ್ನೆಲೆ ಜನರು ಎತ್ತರದ ಪ್ರದೇಶಗಳಲ್ಲಿ ಪ್ರಯಾಣಿಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: ಜಮ್ಮು ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ಭಾರಿ ಹಿಮಪಾತ: ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.