ಲಂಡನ್: ಕೋವಿಡ್ ಸೋಂಕು ನಿಯಂತ್ರಣಕ್ಕೆ ಕಂಡು ಹಿಡಿದಿರುವ ಮಾಡೆರ್ನಾದ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಯುಕೆ ಅನುಮೋದಿಸಿದೆ.
ದೇಶವು ಇತ್ತೀಚೆಗೆ ರೂಪಾಂತರಿ ಕೊರೊನಾ ಸಾಂಕ್ರಾಮಿಕದ ಪರಿಣಾಮವನ್ನು ಹೆಚ್ಚಾಗಿ ಎದುರಿಸುತ್ತಿದ್ದು, ಮೂರನೇ ಲಾಕ್ಡೌನ್ಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ.
ಈ ಮೊದಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ವಿಶ್ವವಿದ್ಯಾಲಯದ ಲಸಿಕೆಗೆ ಅನುಮೋದನೆ ನೀಡಿದ ನಂತರ ಮೂರನೆಯ ಲಸಿಕೆಯಾಗಿ ಮಾಡೆರ್ನಾಗೆ ಅನುಮತಿ ನೀಡಲಾಗಿದೆ.