ETV Bharat / international

ಯುಕೆಯಲ್ಲಿ ವ್ಯವಹಾರ ವಿಸ್ತರಣೆಗೆ ಮುಂದಾದ ಸೆರಂ ಇನ್ಸ್ಟಿಟ್ಯೂಟ್‌ - ವ್ಯವಹಾರ ವಿಸ್ತರಣೆಗೆ ಮುಂದಾದ ಸೆರಂ

ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೆರಂ ಇನ್ಸ್​​ಟ್ಯೂಟ್​ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದ್ದು, ಯುಕೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಲಿದೆ.

Serum Institute of India leads cross-sector Indian investments into UK
ಯುಕೆಯಲ್ಲಿ ವ್ಯವಹಾರ ವಿಸ್ತರಣೆಗೆ ಮುಂದಾದ ಸೆರಂ
author img

By

Published : May 4, 2021, 10:28 AM IST

ಲಂಡನ್: ಲಸಿಕೆ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಹೊಸ ಮಾರಾಟ ಕಚೇರಿ ಪ್ರಾರಂಭಿಸುವ ಸಲುವಾಗಿ ಸೆರಂ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾ ಯುಕೆಯಲ್ಲಿ 240 ಮಿಲಿಯನ್ ಜಿಬಿಪಿ(ಗ್ರೇಟ್‌ ಬ್ರಿಟನ್ ಪೌಂಡ್) ಹೂಡಿಕೆ ಮಾಡಲು ಮುಂದಾಗಿದೆ.

ಬ್ರಿಟನ್​ನಲ್ಲಿ 6,500 ರಷ್ಟು ಉದ್ಯೋಗ ಸೃಷ್ಟಿಸಲು ಸೆರಂ ಇನ್ಸ್​ಟ್ಯೂಟ್ ಯೋಜನೆಯ ಭಾಗವಾಗಿ ಯುಕೆ ಸರ್ಕಾರ ಕೂಡ 1 ಬಿಲಿಯನ್ ಜಿಬಿಪಿ ಹೂಡಿಕೆ ಮಾಡಲಿದೆ. ​

ಯುಕೆಯಲ್ಲಿ ಆರೋಗ್ಯ, ಬಯೋಟೆಕ್ ಮತ್ತು ಸಾಫ್ಟ್‌ವೇರ್ ಸೇವೆಗಳಂತಹ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಭಾರತದ ಸುಮಾರು 20 ರಷ್ಟು ಕಂಪನಿಗಳ ಪಟ್ಟಿಯಲ್ಲಿ ಪುಣೆ ಮೂಲದ ಸೆರಂ ಇನ್ಸ್​ಟ್ಯೂಟ್​ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಮೂಗಿನ ಮೂಲಕ ನೀಡಲಾಗುವ ಕೋವಿಡ್ ಲಸಿಕೆಯ ಮೊಲದ ಹಂತದ ಪ್ರಯೋಗವನ್ನು ಸೆರಂ ಈಗಾಗಲೇ ಯುಕೆಯಲ್ಲಿ ಪ್ರಾರಂಭಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತದ ಕೊರೊನಾ ಹೋರಾಟಕ್ಕೆ ಇಸ್ರೇಲ್​ ಸಹಾಯಹಸ್ತ

ಸೆರಂ ಇನ್ಸ್​ಟ್ಯೂಟ್​ನ ಹೊಸ ಮಾರಾಟ ಕಚೇರಿಯು 1 ಬಿಲಿಯನ್ ಯುಎಎಸ್​ ಡಾಲರ್ ವ್ಯವಹಾರ ಮಾಡುವ ನಿರೀಕ್ಷೆಯಿದೆ. ಈ ಪೈಕಿ 200 ಮಿಲಿಯನ್ ಜಿಬಿಪಿ ಯುಕೆಯಲ್ಲಿ ಹೂಡಿಕೆ ಮಾಡಲಿದೆ ಎಂದು ಎಸ್‌ಐಐನ ಯೋಜನೆಗಳನ್ನು ಉಲ್ಲೇಖಿಸಿ ಯುಕೆ ಸರ್ಕಾರದ ಮೂಲಗಳು ಹೇಳಿದೆ.

ಸೆರಂ ಇನ್ಸ್​ಟ್ಯೂಟ್​ ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಲಸಿಕೆ ಉತ್ಪಾದನೆಯಲ್ಲಿ ಯುಕೆ ಸಹಾಯ ಮಾಡಲಿದೆ. ಇದು ಕೋವಿಡ್​ ಸೇರಿದಂತೆ ಮಾರಕ ಕಾಯಿಲೆಗಳನ್ನು ನಿಯಂತ್ರಿಸಲು ಯುಕೆ ಮತ್ತು ಜಗತ್ತಿದೆ ಸಹಾಯ ಮಾಡಲಿದೆ. ಕೊಡಜೆನಿಕ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸೆರಂ ಈಗಾಗಲೇ ಮೂಗಿನಲ್ಲಿ ಹಾಕುವ ಕೋವಿಡ್​ ಲಸಿಕೆಯ ಮೊದಲ ಹಂತದ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಯುಕೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.