ಸ್ಯಾನ್ ಜುವಾನ್, ಪೋರ್ಟೊ ರಿಕೊ: ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ವಿಶ್ವ ಸುಂದರಿ-2021 ಆಗಿ ಹೊರಹೊಮ್ಮಿದ್ದಾರೆ. ಇಂಡೋ-ಅಮೆರಿಕನ್ ಆಗಿರುವ ಶ್ರೀ ಸೈನಿ ಅವರು ಮೊದಲ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಪಶ್ಚಿಮ ಆಫ್ರಿಕಾದ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಸ್ಯಾನ್ ಜುವಾನ್ನಲ್ಲಿ ವಿಶ್ವಸುಂದರಿ ನಡೆದಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2020 ಆಗಿದ್ದ ಮಾನಸಾ ವಾರಣಾಸಿ ಅವರು ಮಿಸ್ ವರ್ಲ್ಡ್-2021ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಟಾಪ್ 13 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಅವರು ಟಾಪ್ 6 ಫೈನಲಿಸ್ಟ್ ಪಟ್ಟಿಯಲ್ಲಿ ಸ್ಥಾನಗಳಿಸಲು ಸಾಧ್ಯವಾಗಿರಲಿಲ್ಲ.
ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ, ಕೊನೆಯ ಬಾರಿಗೆ 2017ರಲ್ಲಿ ರೂಪದರ್ಶಿ ಮತ್ತು ನಟಿ ಮಾನುಷಿ ಚಿಲ್ಲರ್ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದರು.
- " class="align-text-top noRightClick twitterSection" data="
">
ಪ್ರಸ್ತುತ ನಡೆದ ಕಾರ್ಯಕ್ರಮದಲ್ಲಿ ಜಮೈಕಾದ 2019ರ ವಿಶ್ವ ಸುಂದರಿ ಟೋನಿ-ಆನ್ ಸಿಂಗ್ ಅವರು 'ದಿ ಪ್ರೇಯರ್' ಎಂಬ ಹಾಡನ್ನು ಹಾಡಿ, ರಷ್ಯಾ - ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಶಾಂತಿ ನೆಲೆಸುವಂತೆ ಒಗ್ಗಟ್ಟು ವ್ಯಕ್ತಪಡಿಸಿದ್ದು, ವಿಶೇಷವಾಗಿತ್ತು.
ಇದನ್ನೂ ಓದಿ: ಮಾ.31ಕ್ಕೆ 'ಶರ್ಮಾಜಿ ನಮ್‌ಕೀನ್' ಬಿಡುಗಡೆ: ತಂದೆ ನೆನೆದು ಭಾವುಕರಾದ ನಟ ರಣಬೀರ್ ಕಪೂರ್