ETV Bharat / international

ಬ್ರಿಟನ್​​​​ನಲ್ಲೂ ತೀವ್ರಗೊಂಡ ಪ್ರತಿಭಟನೆ ಕಾವು : ಸಾಮ್ರಾಜ್ಯಶಾಹಿ ಪ್ರತಿಮೆ ತೆರವಿಗೆ ಆಗ್ರಹ

author img

By

Published : Jun 10, 2020, 1:43 PM IST

ಯುಎಸ್​​ನ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನದಿಂದ ಪ್ರೇರೇಪಿತಗೊಂಡ ಯುವ ವಿದ್ಯಾರ್ಥಿಗಳು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನಲ್ಲಿ ಕಲ್ಲಿನಿಂದ ಕೆತ್ತಿರುವ ಸಾಮ್ರಾಜ್ಯಶಾಹಿ ವಿಕ್ಟೋರಿಯನ್ ಸೆಸಿಲ್ ರೋಡ್ಸ್​​ನ ಪ್ರತಿಮೆ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

Oxford anti-racism demo; London to review statues
ಬ್ರಿಟನ್​ಗೂ ವ್ಯಾಪಿಸಿದ ವರ್ಣಭೇಧ ನೀತಿ ಪ್ರತಿಭಟನೆ

ಲಂಡನ್(ಯುಕೆ) : ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್​ ಹತ್ಯೆಯ ನಂತರ ವರ್ಣಬೇಧ ನೀತಿಯ ವಿರುದ್ಧ ಹುಟ್ಟಿಕೊಂಡ ಹೋರಾಟ ಇದೀಗ ಬ್ರಿಟನ್​ಗೂ ವ್ಯಾಪಿಸಿದೆ. ಸಾಮ್ರಾಜ್ಯಶಾಹಿ ಪ್ರತಿಮೆ ತೆಗೆದು ಹಾಕಬೇಕೆಂದು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

ಯುಎಸ್​​ನ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನದಿಂದ ಪ್ರೇರೇಪಿತಗೊಂಡ ಯುವ ವಿದ್ಯಾರ್ಥಿಗಳು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನಲ್ಲಿ ಕಲ್ಲಿನಿಂದ ಕೆತ್ತಿರುವ ಸಾಮ್ರಾಜ್ಯಶಾಹಿ ವಿಕ್ಟೋರಿಯನ್ ಸೆಸಿಲ್ ರೋಡ್ಸ್​​ನ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟಿಷ್ ಇತಿಹಾಸಕಾರ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೀಟರ್ ಫ್ರಾಂಕೋಪನ್, ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಯನ್ನು ತೆರವುಗೊಳಿಸುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಬ್ರಿಟನ್ ಇತರ ದೇಶಗಳಿಂದ ಪಡೆದ ಸಂಪತ್ತಿನ ಮೇಲೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕಾರರು ಲಂಡನ್​ನ ಡಾಕ್ಲ್ಯಾಂಡ್​​ನಲ್ಲಿದ್ದ 18 ನೇ ಶತಮಾನದ ಗುಲಾಮ ಮಾಲೀಕ ರಾಬರ್ಟ್ ಮಿಲ್ಲಿಗನ್ ಪ್ರತಿಮೆಯನ್ನು ಮಂಗಳವಾರ ತೆರವುಗೊಳಿಸಿದ್ದರು. ಪ್ರತಿಭಟನಾಕಾರರು ಇನ್ನೂ ಹೆಚ್ಚಿನ ಸಾಮ್ರಾಜ್ಯಶಾಹಿಗಳ ಪ್ರತಿಮೆಗಳನ್ನು ಬ್ರಿಟನ್​ನ ಬೀದಿಗಳಿಂದ ತೆಗೆದು ಹಾಕಬಹುದು ಎಂದು ಲಂಡನ್​ ಮೇಯರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.