ಮೆಲ್ಬರ್ನ್ (ಆಸ್ಟ್ರೇಲಿಯಾ): ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ದಶಕದ ಏಕದಿನ ಕ್ರಿಕೆಟ್ ತಂಡದ ನಾಯಕನ ಗೌರವಕ್ಕೆ ಪಾತ್ರರಾದರೆ, ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದಾರೆ.
2010ರಿಂದ 2019ರವರೆಗಿನ ಆಟಗಾರರ ಪ್ರದರ್ಶನವನ್ನಾದರಿಸಿ ಏಕದಿನ ಹಾಗು ಟೆಸ್ಟ್ ತಂಡಗಳನ್ನು ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಏಕದಿನ ತಂಡದಲ್ಲಿ ಮೂವರು ಭಾರತೀಯ ಆಟಗಾರರಿದ್ದಾರೆ. ಧೋನಿ ಹೊರತಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಇನ್ನು ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
-
Wicket-keeper batsman MS Dhoni has been named captain of Cricket Australia's (CA) ODI team of the decade.
— ANI Digital (@ani_digital) December 24, 2019 " class="align-text-top noRightClick twitterSection" data="
Read @ANI story | https://t.co/uNPLtjS1B7 pic.twitter.com/vwo99wfzPF
">Wicket-keeper batsman MS Dhoni has been named captain of Cricket Australia's (CA) ODI team of the decade.
— ANI Digital (@ani_digital) December 24, 2019
Read @ANI story | https://t.co/uNPLtjS1B7 pic.twitter.com/vwo99wfzPFWicket-keeper batsman MS Dhoni has been named captain of Cricket Australia's (CA) ODI team of the decade.
— ANI Digital (@ani_digital) December 24, 2019
Read @ANI story | https://t.co/uNPLtjS1B7 pic.twitter.com/vwo99wfzPF
ಧೋನಿಯನ್ನು ಹೊಗಳಿರುವ ಸಿಎ, ಇತ್ತೀಚೆಗೆ ಧೋನಿಯವರ ಆಟದ ಕ್ಷಮತೆ ಕುಗ್ಗಿತ್ತಾದರೂ ಭಾರತದ ಏಕದಿನ ಕ್ರಿಕೆಟ್ನ ಸುವರ್ಣ ಅವಧಿಯಲ್ಲಿ ತಂಡಕ್ಕೆ ಪ್ರಬಲ ಶಕ್ತಿಯಾಗಿದ್ದರು. 2011ರ ವಿಶ್ವಕಪ್ನಲ್ಲಿ ಭಾರತವನ್ನು ಗೆಲ್ಲಿಸಿ ಜಗತ್ತಿಗೆ ತಮ್ಮ ಶ್ರೇಷ್ಠತೆಯನ್ನು ತೋರಿಸಿಕೊಟ್ಟು, ಭಾರತದ ಫೈನಲ್ ಫಿನಿಶರ್ ಆದರು ಎಂದು ಹೇಳಿದೆ.
38 ವರ್ಷದ ಧೋನಿ, ಕ್ರಿಕೆಟ್ ವೃತ್ತಿ ಜೀವನದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಡಿಸೆಂಬರ್ 23, 2004ರಂದು ಎಂ.ಎಸ್.ಡಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಐಸಿಸಿಯ ಎಲ್ಲಾ ಮೂರು ಕ್ರಿಕೆಟ್ ಟ್ರೋಫಿಗಳನ್ನು ಗೆದ್ದುಕೊಟ್ಟ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಸಿಎ ದಶಕದ ಏಕದಿನ ತಂಡ:
ಸಿಎ ದಶಕದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ, ಹಾಶಿಮ್ ಆಮ್ಲಾ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಶಾಕೀಬ್ ಅಲ್ ಹಸನ್, ಜೋಸ್ ಬಟ್ಲರ್, ಎಂಎಸ್ ಧೋನಿ (ಕ್ಯಾಪ್ಟನ್), ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಲಸಿತ್ ಮಾಲಿಂಗ, ರಶೀದ್ ಖಾನ್ ಹೆಸರು ಪ್ರಕಟವಾಗಿದೆ. ಜಸ್ಪ್ರಿತ್ ಬುಮ್ರಾ ಹಾಗೂ ಶಿಖರ್ ಧವನ್ ಹೆಸರು ODI ತಂಡದ ಪಟ್ಟಿಯಲ್ಲಿಲ್ಲವಾದರೂ, ಗೌರವಾನ್ವಿತರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಲಾಗಿದೆ.
ಸಿಎ ದಶಕದ ಟೆಸ್ಟ್ ತಂಡ:
ಇನ್ನು ತಮ್ಮ ದಶಕದ ಟೆಸ್ಟ್ ತಂಡವನ್ನು ಘೋಷಿಸಿರುವ ಸಿಎ, ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಉಳಿದಂತೆ ಅಲಾಸ್ಟೇರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ನಾಥನ್ ಲಿಯಾನ್, ಮತ್ತು ಜೇಮ್ಸ್ ಆಂಡರ್ಸನ್ ತಂಡದಲ್ಲಿದ್ದಾರೆ.