ETV Bharat / international

ಕೋವಿಡ್ ಪತ್ತೆಯಾಗುವ ಮೊದಲೇ ಚಿಕಿತ್ಸೆ ಕೋರಿದ್ದರಂತೆ ಚೀನಾದ ಸಂಶೋಧಕರು!

ಮೊದಲ ಕೋವಿಡ್ ಪ್ರಕರಣ ವರದಿಯಾಗುವ ಮೊದಲೇ ಚೀನಾದ ಸಂಶೋಧಕರು ಕೋವಿಡ್​ಗೆ ಚಿಕಿತ್ಸೆ ಕೋರಿದ್ದರು ಎಂಬ ವರದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೋವಿಡ್​ಗೆ ಸಂಬಂಧಿಸಿದಂತೆ ಚೀನಾದ ಮೇಲಿನ ಆರೋಪಕ್ಕೆ ಬಲ ಸಿಕ್ಕಂತಾಗಿದೆ.

author img

By

Published : May 24, 2021, 2:21 PM IST

Wuhan Instiute of Virology
ವುಹಾನ್ ಇನ್ಸ್​ಟ್ಯೂಟ್​ ಆಫ್ ವೈರಾಲಜಿ

ವುಹಾನ್: ಚೀನಾದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳು ಮೊದಲೇ ವುಹಾನ್ ಇನ್ಸ್​ಟ್ಯೂಟ್​ ಆಫ್ ವೈರಾಲಜಿ (ಡಬ್ಲ್ಯುಐವಿ) ಯ ಮೂವರು ಸಂಶೋಧಕರು ಕೋವಿಡ್​​ಗೆ ಚಿಕಿತ್ಸೆ ಕೋರಿದ್ದರು ಎಂದು ಅಮೆರಿದ ದಿ ವಾಲ್‌​ಸ್ಟ್ರೀಟ್​ ಜರ್ನಲ್ ವರದಿ ಮಾಡಿದೆ.

ಈ ಮೂವರು ಸಂಶೋಧಕರಿಗೆ ಯಾವಾಗ ಅನಾರೋಗ್ಯ ಉಂಟಾಗಿತ್ತು, ಅವರು ಯಾವಾಗ ಚಿಕಿತ್ಸೆ ಕೋರಿದರು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್ ಹೇಳಿದೆ. ಈ ವರದಿಯೂ ಕೋವಿಡ್ ವೈರಸ್ ​ಡಬ್ಲ್ಯುಐವಿಯಿಂದಲೇ ಹರಡಿದೆಯೇ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ಕೇಬಲ್​ ಕಾರ್​ ದುರಂತ: ಸುಂದರ ಲೋಕ ನೋಡುತ್ತಲೇ ಇಹಲೋಕ ತ್ಯಜಿಸಿದ 14 ಜನ!

ವಿಶ್ವ ಆರೋಗ್ಯ ಸಂಸ್ಥೆಯ ಸಭೆ ನಡೆದ ದಿನದಂದು ಸಂಜೆ ಈ ವರದಿ ಪ್ರಕಟಗೊಂಡಿದೆ. ಈ ವಿಚಾರವು ಜಗತ್ತಿನ ಗಮನ ಸೆಳೆದಿದ್ದು, ಕೋವಿಡ್ ವೈರಸ್​ನ ಹುಟ್ಟಿನ ಬಗ್ಗೆ ಹೊಸತೊಂದು ಹುಡುಕಾಟಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ, ಕೋವಿಡ್ ವೈರಸ್​ ಚೀನಾ ನಿರ್ಮಿತ ಎಂಬ ಹಲವು ರಾಷ್ಟ್ರಗಳ ಆರೋಪಕ್ಕೆ ಪುಷ್ಠಿ ನೀಡಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.