ಇಸ್ಲಾಮಾಬಾದ್: ನಯಾ ಪಾಕಿಸ್ತಾನ್ ಘೋಷವಾಕ್ಯ ಹೇಳುತ್ತಲೇ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಿದ ಇಮ್ರಾನ್ ಖಾನ್, ಆಗಾಗ್ಗೆ ತಮ್ಮ ಅಲ್ಪಬುದ್ಧಿಯ ಹೇಳಿಕೆಯಿಂದ ನಗೆಪಾಟಲಿಗೀಡಾಗುತ್ತಿರುತ್ತಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಇಮ್ರಾನ್ ಖಾನ್ ಆಡಿದ ಮಾತು ಸದ್ಯ ನೆಟ್ಟಿಗರ ಪಾಲಿಗೆ ಹಾಸ್ಯದ ವಸ್ತುವಾಗಿದೆ.
-
Trees produce oxygen at night: Einstein Khan. pic.twitter.com/Kqb3ODLySY
— Naila Inayat नायला इनायत (@nailainayat) November 27, 2019 " class="align-text-top noRightClick twitterSection" data="
">Trees produce oxygen at night: Einstein Khan. pic.twitter.com/Kqb3ODLySY
— Naila Inayat नायला इनायत (@nailainayat) November 27, 2019Trees produce oxygen at night: Einstein Khan. pic.twitter.com/Kqb3ODLySY
— Naila Inayat नायला इनायत (@nailainayat) November 27, 2019
ಮರಗಳು ಪ್ರತಿಕ್ಷಣ ಆಮ್ಲಜನಕವನ್ನು ಹೊರಸೂಸುತ್ತವೆ. ಆದರೆ, ಇಮ್ರಾನ್ ಖಾನ್ ಪ್ರಕಾರ ಮರಗಳು ರಾತ್ರಿ ಮಾತ್ರವೇ ಆಮ್ಲಜನಕ ಬಿಡುಗಡೆ ಮಾಡುತ್ತದಂತೆ. ಈ ವಿಡಿಯೋವನ್ನು ಪಾಕ್ ಪತ್ರಕರ್ತೆ ನೈಲಾ ಇನಾಯತ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇಮ್ರಾನ್ ಖಾನ್ ಭಾಷಣದ ಈ ತುಣುಕನ್ನು ವಿಧ - ವಿಧವಾಗಿ ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ. ಇತಿಹಾಸ ಹಾಗೂ ಭೂಗೋಳದ ಬಗ್ಗೆ ತಮ್ಮ ಜ್ಞಾನ ತೋರಿಸಿದ ಇಮ್ರಾನ್ ಸದ್ಯ ಪರಿಸರ ವಿಜ್ಞಾನದ ಬಗ್ಗೆ ಮಾತನಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇನ್ನೊಂದೆಡೆ ಇಂತಹ ಮಾತುಗಳನ್ನಾಡಿದ ಪಾಕ್ ಪ್ರಧಾನಿಗೆ ನೋಬೆಲ್ ನೀಡಿ ಎಂದೂ ಹಾಸ್ಯ ಮಾಡಿದ್ದಾರೆ.