ETV Bharat / international

ಕೋವಿಡ್​ ಮೂಲದ ಬಗ್ಗೆ ಬಹಿರಂಗಪಡಿಸದೇ ಬೀಜಿಂಗ್ ಜಗತ್ತನ್ನು ಸಂದಿಗ್ಧತೆಗೆ ದೂಡಿದೆ: ವಿಜ್ಞಾನಿ ಲಿಪ್ಕಿನ್

ಚೀನಾದ ಬೇಜವಾಬ್ದಾರಿ ನಡೆಯಿಂದ ಇಂದು ಇಡೀ ವಿಶ್ವ ಸಂಕಷ್ಟ ಎದುರಿಸುತ್ತಿದೆ ಎಂದು ವಿಶ್ವದ ವಿಜ್ಞಾನಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

author img

By

Published : Sep 6, 2021, 8:13 AM IST

ಕೋವಿಡ್
ಕೋವಿಡ್

(ಬೀಜಿಂಗ್) ಚೀನಾ: ಜಗತ್ತಿಗೆ ಬಹಿರಂಗಗೊಳ್ಳುವ ಎರಡು ವಾರಗಳಿಗೂ ಮುನ್ನ ನಾನು ಕೋವಿಡ್​ ಬಗ್ಗೆ ಕೇಳಿದ್ದೆ ಎಂದು ವಿಶ್ವದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರೊಬ್ಬರು ತಿಳಿಸಿದ್ದಾರೆ.

ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್​​​ ಇಡೀ ದೇಶವನ್ನೇ ನಲುಗಿಸಿತು ಎಂದು ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಇಯಾನ್ ಲಿಪ್ಕಿನ್ ಹೇಳಿದ್ದಾರೆ. ಚೀನಾದಲ್ಲಿ 2019 ರ ಡಿಸೆಂಬರ್​ನಲ್ಲಿ ಕೋವಿಡ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಒಂದೇ ವಾರದಲ್ಲಿ ಏಕಾಏಕಿ ಎಲ್ಲೆಡೆ ವ್ಯಾಪಿಸಿತು. ವುಹಾನ್​ನಲ್ಲಿ ಒಂದೇ ವಾರದಲ್ಲಿ 11 ಮಿಲಿಯನ್​​ ಜನರಿಗೆ ಈ ವೈರಸ್ ವಕ್ಕರಿಸಿತ್ತು.

ಚೀನಾ ಈ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಡದೇ, ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆ ಕೋವಿಡ್​​ ವೇಗವಾಗಿ ಹರಡಿತು. ಚೀನಾದಲ್ಲಿ ಕೋವಿಡ್​ನಿಂದ ಹಾನಿಗೊಳಗಾದವರ ಬಗ್ಗೆ ಬೀಜಿಂಗ್ ಅಂಕಿ - ಅಂಶಗಳನ್ನು ಮುಚ್ಚಿಟ್ಟಿದೆ. ವೈದ್ಯರು ಮೌನವಾಗಿದ್ದರೆ, ಪ್ರಶ್ನಿಸಿದ ಪತ್ರಕರ್ತರನ್ನು ಜೈಲಿಗಟ್ಟಲಾಗಿದೆ. ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ನೀಡದಿದ್ದಕ್ಕೆ ಪ್ರಶ್ನಿಸಿದ ಇತರ ರಾಷ್ಟ್ರಗಳನ್ನೂ ಚೀನಾ ಶತ್ರುಗಳಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 20 ವರ್ಷಗಳಿಂದ ಚೀನಾದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ವಿಜ್ಞಾನಿ ಇಯಾನ್ ಲಿಪ್ಕಿನ್, 2019 ರ ಡಿಸೆಂಬರ್ 15 ರಂದು ಈ ವೈರಸ್​ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು. ಆಗಲೇ ಚೀನಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೆ, ಇಂಥ ಸಂದಿಗ್ಧ ಕಾಲ ಎದುರಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆಗಸ್ಟ್ ತಿಂಗಳ ವ್ಯಾಕ್ಸಿನೇಷನ್ ಪ್ರಮಾಣ G7 ರಾಷ್ಟ್ರಗಳಿಗಿಂತಲೂ ಹೆಚ್ಚು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.