ETV Bharat / international

ಒಮನ್​ ಸುಲ್ತಾನ ನಿಧನ... ಉತ್ತರಾಧಿಕಾರಿ ಆಯ್ಕೆಗೆ ಕಸರತ್ತು!

ಒಮನ್​ ದೇಶದ ಸುಲ್ತಾನ್​ ಖಾಬೂಸ್​ ಅಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ ಮರಣ ಹೊಂದಿದ್ದಾರೆ.

author img

By

Published : Jan 11, 2020, 8:15 AM IST

Updated : Jan 11, 2020, 9:19 AM IST

Oman Sulthan Qaboos
ಸುಲ್ತಾನ್​ ಖಾಬೂಸ್​ ಅಲಿ

ಮಸ್ಕತ್​(ಒಮನ್​​): ಆಗ್ನೇಯ ಕರಾವಳಿ ಭಾಗದ ಒಮನ್​ ದೇಶದ ಸುಲ್ತಾನ್ ಖಾಬೂಸ್​ ಬಿನ್​​​ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.

ಖಾಬೂಸ್​ಗೆ 79 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 1970ರಿಂದ 2020ರವರೆಗೆ ಓಮನ್​ನ ಆಡಳಿತಗಾರನಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲಲಿದೆ.

1970ರಲ್ಲಿ ಗದ್ದುಗೆಗೇರಿದ ಖಾಬೂಸ್​ ಒಮನ್​ ದೇಶವನ್ನ ಅದ್ಬುತವಾದ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿದರು, ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಒತ್ತು ನೀಡಿ ದೇಶದ ಶೈಕ್ಷಣಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದವರು.

ಒಮನ್​ ದೇಶದ ಕಾನೂನಿನ ಪ್ರಕಾರ ಉತ್ತಾರಾಧಿಕಾರಿಯ ಸಿಂಹಾಸನ ತೆರವುಗೊಂಡ ಮೂರು ದಿನದೊಳಗಾಗಿ ಇನ್ನೋರ್ವನನ್ನು ನೇಮಿಸಬೇಕು ಆದರೆ ಖಬೂಸ್​​ಗೆ ಮಕ್ಕಳಿಲ್ಲದ ಕಾರಣ ಮರಣಕ್ಕೂ ಮುನ್ನ ಯಾವುದೇ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ.

ಆದ್ದರಿಂದ ಈ ದೇಶದ ಮಿಲಿಟರಿ ಮತ್ತು ಭದ್ರತಾ ಪಡೆ ಹಾಗೂ ನ್ಯಾಯಾಲಯದ ಮುಖ್ಯಸ್ಥರು ಸಮಾಲೋಚನಾ ಸಭೆ ನಡೆಸಿ ಸುಲ್ತಾನ್​ ಈ ಮೊದಲು ಯಾವ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಪತ್ರವೊಂದರಲ್ಲಿ ಉಲ್ಲೇಖಿಸಿರುತ್ತಾರೆ ಎಂಬುದನ್ನು ಪರಿಶೀಲಿಸಿ ಅವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸುತ್ತಾರೆ.

ಕಳೆದ ಡಿಸೆಂಬರ್​ನಲ್ಲಷ್ಟೆ ಚಿಕಿತ್ಸೆಗೆಂದು ಬೆಲ್ಜಿಯಂಗೆ ತೆರಳಿದ್ದ ಇವರು ಯಾವುದೇ ಚಿಕಿತ್ಸೆ ಫಲಕಾರಿಯಾಗದ ಕಾರಣ ನಿನ್ನೆ ರಾತ್ರಿ ಅಸುನೀಗಿದ್ದಾರೆ. ಸುಲ್ತಾನ್​ ಸಾವಿನ ಹಿನ್ನೆಲೆ ದೇಶದಲ್ಲಿ ಮೂರು ದಿನಗಳ ಕಾಳ ಶೋಕಾಚರಣೆ ಘೋಷಿಸಲಾಗಿದೆ.

Intro:Body:

International

Conclusion:
Last Updated : Jan 11, 2020, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.