ಕಠ್ಮಂಡು (ನೇಪಾಳ) : ಇಂದು ಭಾರತದಿಂದ ಮತ್ತೆ ಒಂದು ಲಕ್ಷ ಕೊರೊನಾ ಲಸಿಕೆಯ ಡೋಸ್ಗಳು ನೇಪಾಳಕ್ಕೆ ಬರಲಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಇಂದು ಕಠ್ಮಂಡು ಬಂದಿಳಿಯುವ ನಿರೀಕ್ಷೆಯಿದೆ. ನೇಪಾಳದ ವಾತಾವರಣಲ್ಲಿ ಹೊಗೆ ಸಾಂದ್ರತೆ ಹೆಚ್ಚಿರುವುದರಿಂದ ಲಸಿಕೆ ತಲುಪುವಲ್ಲಿ ಹವಾಮಾನ ಪರಿಸ್ಥಿತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನೇಪಾಳದ ಅಧಿಕಾರಿಗಳು ಹೇಳಿದ್ದಾರೆ.
ವಿವಿಧ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ವಿಶ್ವಸಂಸ್ಥೆಯ 'ಕೋವ್ಯಾಕ್ಸ್' ಮಹತ್ಕಾರ್ಯದಲ್ಲಿ ಭಾರತದ ಕೊಡುಗೆ ಅಪಾರವಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ನೇಪಾಳಕ್ಕೆ 3,48,000 ಮೇಡ್-ಇನ್-ಇಂಡಿಯಾ ಕೋವಿಡ್ ಲಸಿಕೆಗಳ ಡೋಸ್ಗಳನ್ನು ಕಳುಹಿಸಲಾಗಿತ್ತು.
ಹೆಚ್ಚಿನ ಓದಿಗೆ: ಕೋವಿಡ್ ಲಸಿಕೆ : ಭಾರತ - ಚೀನಾವನ್ನು ಎದುರುನೋಡುತ್ತಿರುವ ನೇಪಾಳ
ನೇಪಾಳ ಸರ್ಕಾರದ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನವನ್ನು ಬೆಂಬಲಿಸುವ ನಿಟ್ಟಿನಲ್ಲಿ 2021ರ ಮೇ ಅಂತ್ಯದ ವೇಳೆಗೆ 1.92 ಮಿಲಿಯನ್ ಡೋಸ್ಗಳನ್ನು ಕೋವ್ಯಾಕ್ಸ್ ಕಾರ್ಯಕ್ರಮದಡಿ ನೇಪಾಳ ಪಡೆಯಲಿದೆ.