ಲಾಹೋರ್(ಪಾಕಿಸ್ತಾನ) : ಭಾರತೀಯ ಚಿತ್ರರಂಗದಲ್ಲಿ ಪಾಕ್‌ನ ನಟ-ನಟಿಯರು, ಸಿಂಗರ್ಸ್‌ಗಳಿಗೆ ಬ್ಯಾನ್ ಮಾಡಲಾಗಿದೆ. ಈಗ ಪಾಕ್‌ನಲ್ಲೂ ಬಾಲಿವುಡ್ ಚಿತ್ರಗಳನ್ನ ಬ್ಯಾನ್ ಮಾಡ್ಬೇಕು ಎಂಬ ಕೂಗೆದ್ದಿದೆ. ಈ ಬಗ್ಗೆ ಲಾಹೋರ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ.
ಶೇಖ್ ಮೊಹ್ಮದ್ ಲತೀಫ್ ಎಂಬುವರು ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. ಪ್ರಧಾನಿಯಾಗಿದ್ದ ನವಾಜ್ ಷರೀಫ್, ಭಾರತೀಯ ಸಿನಿಮಾಗಳೂ ಸೇರಿ ಎಲ್ಲ ಅಂತಾರಾಷ್ಟ್ರೀಯ ಚಿತ್ರಗಳನ್ನೂ ಪಾಕ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಜನವರಿ ೩೧, ೨೦೧೭ರಲ್ಲಿ ಪಿಎಂ ಷರೀಫ್ ಈ ಬಗ್ಗೆ ಹೊರಡಿಸಿದ್ದ ಆದೇಶ ಕಾನೂನುಬಾಹಿರ ಅಂತ ಲತೀಫ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 44ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಭಾರತೀಯ ಚಿತ್ರರಂಗದ ಕಾರ್ಮಿಕರ ಅಸೋಸಿಯೇಷನ್, ಪಾಕ್ ನಟ-ನಟಿಯರು ಹಾಗೂ ಕಲಾವಿದರನ್ನ ಸಂಪೂರ್ಣ ಭಾರತೀಯ ಚಿತ್ರರಂಗದಿಂದಲೇ ಬ್ಯಾನ್ ಮಾಡಿತ್ತು. ಈಗ ಇದಕ್ಕೆ ಪ್ರತಿಯಾಗಿ ಲಾಹೋರ್ ಹೈಕೋರ್ಟ್‌ನಲ್ಲಿ ಭಾರತೀಯ ಚಿತ್ರರಂಗದ ಸಿನಿಮಾ ಪ್ರದರ್ಶನ, ವ್ಯಾಪಾರ ವಿನಿಮಯ ಮಾಡಿಕೊಳ್ಳೋದನ್ನ ನಿಷೇಧಿಸಬೇಕೆಂದು ಈ ಅರ್ಜಿ ಸಲ್ಲಿಕೆಯಾಗಿದೆ.
೨೦೧೬ರಲ್ಲಿ ಪಾಕ್ ಸರ್ಕಾರ ರೂಪಿಸಿದ ಆಮದು ನೀತಿ ಆದೇಶದನ್ವಯ ಭಾರತೀಯ ಎಲ್ಲ ಚಿತ್ರಗಳು ಹಾಗೂ ಅದಕ್ಕೆ ಸಂಬಂಧಿಸದ ವ್ಯವಹಾರ ಬ್ಯಾನ್ ಮಾಡಲಾಗಿತ್ತು ಅಂತಾ ಪಾಕ್‌ನ Dawn ಪತ್ರಿಕೆ ವರದಿ ಮಾಡಿದೆ. ಜನವರಿ ೩೧, ೨೦೧೭ರಲ್ಲಿ ಆಗಿನ ಪಿಎಂ ನವಾಜ್ ಷರೀಫ್ ಸರ್ಕಾರದ ಮಾಹಿತಿ ಮತ್ತು ಪ್ರಸರಣ ಇಲಾಖೆ, ಭಾರತೀಯ ಚಿತ್ರಗಳೂ ಸೇರಿ ಎಲ್ಲ ದೇಶದ ಸಿನಿಮಾಗಳಿಗೂ ಪಾಕ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಆದೇಶಿಸಿತ್ತು. ಇದರಿಂದ ಅವು ಪೋಷಾಕು ಹಾಕಿಕೊಂಡು ಪಾಕ್ ಚಿತ್ರರಂಗವಣ್ಣೇ ಮುಳುಗಿಸುತ್ತಿವೆ ಅಂತಾ ಅರ್ಜಿಯಲ್ಲಿ ಲತೀಫ್ ತಮ್ಮ ಆತಂಕವನ್ನ ದಾಖಲಿಸಿದ್ದಾರೆ.
ಭಾರತೀಯ ಚಾನೆಲ್‌ಗಳಲ್ಲಿನ ಕಂಟೆಟ್ ಕೂಡ ಪ್ರಸಾರವಾಗದಂತೆ ತಡೆಯಲು, ಪಾಕ್ ಸರ್ಕಾರಕ್ಕೆ ಲಾಹೋರ್ ಸುಪ್ರೀಂಕೋರ್ಟ್ ಕಠಿಣ ಕ್ರಮಕೈಗೊಳ್ಳುವಂತೆ ಇತ್ತೀಚೆಗೆ ನಿರ್ದೇಶನ ನೀಡಿದೆ.
ಪಾಕ್ ಸರ್ಕಾರ ಜನವರಿ ೨೦೧೭ರಲ್ಲಿ ಹೊರಡಿಸಿದ್ದ ಕಾನೂನು ಬಾಹಿರ ನೋಟಿಫಿಕೇಷನ್ ರದ್ದುಪಡಿಸಿ, ಭಾರತೀಯ ಚಿತ್ರಗಳು ಮತ್ತು ಇತರ ಕ್ರಿಯೇಟಿವ್ ಕಂಟೆಟ್‌ಗಳನ್ನೂ ರದ್ದುಪಡಿಸುವಂತೆ ಪಾಕ್ ಸರ್ಕಾರಕ್ಕೆ ಕಠಿಣ ಸೂಚನೆ ನೀಡಬೇಕು ಅಂತಾ ಅರ್ಜಿದಾರ ಲತೀಫ್ ಮನವಿ ಮಾಡಿಕೊಂಡಿದ್ದಾರೆ.