ಬೀಜಿಂಗ್: ಬಾಹ್ಯಕಾಶಕ್ಕೆ ಕಳುಹಿಸುವ ಹೊಸ ಉಪಗ್ರಹದ ಪ್ರಯೋಗವನ್ನು ಚೀನಾ ಯಶಸ್ವಿಯಾಗಿ ಪೂರೈಸಿದೆ ಎಂದು ಆ ದೇಶದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. Shiyan-11 satellite - ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಕುಯಿಝೌ-1ಎ ಉಪಗ್ರಹ ಉಡಾವಣೆ ವಾಹಕದ ಮೂಲಕ ಶಿಯಾನ್-11 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
ಉಪಗ್ರಹವು ಅದರ ಪೂರ್ವನಿರ್ಧರಿತ ಕಕ್ಷೆ ಪ್ರವೇಶಿಸಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ವರದಿ ಮಾಡಿದೆ. ಶಿಯಾನ್-11 ಅನ್ನು ಪರೀಕ್ಷೆಗಾಗಿ ನಿರ್ಮಿಸಲಾಗಿದೆ. ಆದರೆ, ಉಪಗ್ರಹದ ಇತ್ತೀಚಿನ ಕಾರ್ಯಾಚರಣೆಯ ಉದ್ದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದೆ.
ಶಿಜಿಯಾನ್ ಎಂಬ ಚೀನಾದ ಉಪಗ್ರಹಗಳ ಮತ್ತೊಂದು ಸರಣಿಯನ್ನು ತಂತ್ರಜ್ಞಾನ ಪರಿಶೀಲನೆಗಾಗಿ ಬಳಸಲಾಗುತ್ತದೆ. ಇತ್ತೀಚಿನ ಶಿಜಿಯಾನ್ ಉಪಗ್ರಹ, ಶಿಜಿಯಾನ್ -21 ಅನ್ನು ಅಕ್ಟೋಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಆದರೆ, ಹಿಂದಿನ ಶಿಯಾನ್ ಉಪಗ್ರಹ, ಶಿಯಾನ್ -10, ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಯಾದ ನಂತರ ಉದ್ದೇಶಿಸಿದಂತೆ ಕೆಲಸ ಮಾಡಲಿಲ್ಲ.
Quaizhou-1Aಅನ್ನು ವೇಗ, ಸಣ್ಣ ಗಾತ್ರದ ರಾಕೆಟ್ ಸರಣಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಚೀನಾ ಏರೋಸ್ಪೇಸ್ ಸೈನ್ಸ್ ಮತ್ತು ಇಂಡಸ್ಟ್ರಿ ಕಾರ್ಪೊರೇಷನ್ ವಿನ್ಯಾಸಗೊಳಿಸಿದೆ ಎಂದು ಹೇಳಾಗಿದೆ.
ಇದನ್ನೂ ಓದಿ: S-400 ಖರೀದಿ ವಿಚಾರದಲ್ಲಿ ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ: ಅಮೆರಿಕ ಸ್ಪಷ್ಟನೆ