ETV Bharat / international

ಡೇಟಾ ಭದ್ರತೆಗಾಗಿ ಟಿಕ್‌ಟಾಕ್ ನಿಷೇಧಿಸಲು ಮುಂದಾದ ಆಸ್ಟ್ರೇಲಿಯಾ - ಆಸ್ಟ್ರೇಲಿಯಾದ ಸಿಡ್ನಿ

ಬಳಕೆದಾರರು ಡೇಟಾವನ್ನು ಸಂಗ್ರಹಿಸಲು ಚೀನಾ ಟಿಕ್​ಟಾಕ್ ಅಪ್ಲಿಕೇಶನ್ ಅನ್ನು ಬಳಸುತ್ತಿರಬಹುದು ಎಂಬ ಗುಮಾನಿ ಮೇರೆಗೆ ಭಾರತ ಮತ್ತು ಯುಎಸ್ ನಂತರ ಆಸ್ಟ್ರೇಲಿಯಾ ಕೂಡ ಟಿಕ್​ಟಾಕ್​ ಅನ್ನು ನಿಷೇಧಿಸಲು ಮುಂದಾಗಿದೆ.

Australia to ban TikTok over data security threat
ಡೇಟಾ ಭದ್ರತಾ ಸಲುವಾಗಿ ಟಿಕ್‌ಟಾಕ್ ನಿಷೇಧಿಸಲಿದೆ ಆಸ್ಟ್ರೇಲಿಯಾ
author img

By

Published : Jul 9, 2020, 4:53 PM IST

ಸಿಡ್ನಿ(ಆಸ್ಟ್ರೇಲಿಯಾ): ಬಳಕೆದಾರರು ಡೇಟಾವನ್ನು ಸಂಗ್ರಹಿಸಲು ಚೀನಾ ಟಿಕ್​ಟಾಕ್ ಅಪ್ಲಿಕೇಶನ್ ಅನ್ನು ಬಳಸುತ್ತಿರಬಹುದು ಎಂಬ ಗುಮಾನಿ ಮೇರೆಗೆ ಭಾರತ ಮತ್ತು ಅಮೆರಿಕ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡ ಟಿಕ್​ಟಾಕ್​ ಅನ್ನು ನಿಷೇಧಿಸಲು ಸಜ್ಜಾಗಿದೆ.

ಡೇಟಾ ಕಳ್ಳತನ ಆರೋಪವನ್ನು ಟಿಕ್‌ಟಾಕ್ ನಿರಾಕರಿಸುತ್ತಲೇ ಇದ್ದರೂ, ಈ ಕ್ರಮವು ಚೀನಾ ನಿಜವಾಗಿಯೂ ಟಿಕ್‌ಟಾಕ್‌ನಿಂದ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿರಬಹುದೆ ಎಂಬ ಶಂಕೆಯನ್ನು ಹುಟ್ಟುಹಾಕಿದೆ.

ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ ತನ್ನ ಡೇಟಾವನ್ನು ಯುಎಸ್ ಮತ್ತು ಸಿಂಗಾಪುರದ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದೆ. ಆದರೆ ಚೀನಾ ಸರ್ಕಾರಕ್ಕೆ ಆ ಡೇಟಾವನ್ನು ಸಂಗ್ರಹಿಸುವುದು ಕಷ್ಟದ ಕೆಲಸವಲ್ಲವೆಂದು 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.

ಜನವರಿಯಲ್ಲಿ ಕಂಪನಿ ನೀಡಿದ್ದ ಹೇಳಿಕೆ: ಯಾವುದೇ ಡೇಟಾ ಶೇಖರಣಾ ವ್ಯವಸ್ಥೆ ಅಥವಾ ಇಂಟರ್​ನೆಟ್ ಅಥವಾ ಇತರೆ ಯಾವುದೇ ಸಾರ್ವಜನಿಕ ನೆಟ್‌ವರ್ಕ್ ಮೂಲಕ ದತ್ತಾಂಶವನ್ನು ರವಾನಿಸುವುದು 100 ಪ್ರತಿಶತ ಸುರಕ್ಷಿತವೆಂದು ನಾವು ಖಾತರಿಪಡಿಸುವುದಿಲ್ಲ.

ಇದಲ್ಲದೆ, ಟಿಕ್‌ಟಾಕ್ ಬಳಕೆದಾರರು ತಮ್ಮ ವಿಷಯವನ್ನು ತಮ್ಮ ಸಾಧನದಿಂದ ಅಳಿಸಲು ನಿರ್ಧರಿಸಿದರೆ ಅಥವಾ ಒಂದು ನಿರ್ದಿಷ್ಟ ದೇಶದ ಸರ್ಕಾರವು ಸಹ ಅಪ್ಲಿಕೇಶನ್‌ನಲ್ಲಿ ನಿಷೇಧವನ್ನು ಹೇರಿದರೆ, ಡೇಟಾವನ್ನು ಹಿಂದಿನ ಬಾರಿ ಅಳಿಸಲಾಗುವುದಿಲ್ಲ. ಏಕೆಂದರೆ ಮಾಹಿತಿಯನ್ನು ಒಮ್ಮೆ ವರ್ಗಾಯಿಸಿದರೆ ಕಂಪನಿಯ ಸಹಾಯವಿಲ್ಲದೆ ಹಿಂತೆಗೆದುಕೊಳ್ಳುವುದು ಅಸಾಧ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.