ETV Bharat / international

'ಭಾರತಕ್ಕೆ ನುಸುಳಿ ಬಾಂಗ್ಲಾಗೆ ವಾಪಾಸಾಗುತ್ತಿದ್ದ ಸಾವಿರಕ್ಕೂ ಹೆಚ್ಚು ಜನರ ಬಂಧನ' - ಬಾಂಗ್ಲಾ ನುಸುಳುಕೋರರು ವಶಕ್ಕೆ

2019ರಲ್ಲಿ ಭಾರತಕ್ಕೆ ಭೇಟಿ ನೀಡಿ ಬಾಂಗ್ಲಾಕ್ಕೆ ಮರಳುತ್ತಿದ್ದ ಒಂದು ಸಾವಿರಕ್ಕೂ ಹೆಚ್ಚು ನುಸುಳುಕೋರರನ್ನ ಬಾಂಗ್ಲಾದೇಶ ವಶಕ್ಕೆ ಪಡೆದುಕೊಂಡಿದೆ.

445 trespassers trying to return to Banglades,ಬಾಂಗ್ಲಾ ನುಸುಳುಕೋರರು ವಶಕ್ಕೆ
ಶಫೀನುಲ್ ಇಸ್ಲಾಂ
author img

By

Published : Jan 3, 2020, 9:46 AM IST

ಢಾಕಾ(ಬಾಂಗ್ಲಾದೇಶ) : ಕಳೆದ 2 ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದ 445 ಬಾಂಗ್ಲಾದೇಶಿಗರು ತವರಿಗೆ ಮರಳುತ್ತಿರುವಾಗ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಬಾರ್ಡರ್​ ಗಾರ್ಡ್​ ಮಹಾನಿರ್ದೇಶಕ ಶಫೀನುಲ್ ಇಸ್ಲಾಂ ತಿಳಿಸಿದ್ದಾರೆ.

2019 ರಲ್ಲಿ ಅಕ್ರಮವಾಗಿ ಭಾರತಕ್ಕೆ ಭೇಟಿ ನೀಡಿದ ನಂತರ ಬಾಂಗ್ಲಾದೇಶಕ್ಕೆ ಮರಳಲು ಪ್ರಯತ್ನಿಸುತ್ತಿರುವಾಗ ಒಟ್ಟು 1,002 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗಡಿ ಹತ್ಯೆಗಳ ಕುರಿತು ಮಾತನಾಡುತ್ತಾ, ಡಿಸೆಂಬರ್ 25 ರಿಂದ 30 ರವರೆಗೆ ನವದೆಹಲಿಯಲ್ಲಿ ಆರು ದಿನಗಳ ಕಾಲ ನಡೆದ 49ನೇ ಡಿಜಿ ಮಟ್ಟದ ಬಿಜಿಬಿ-ಬಿಎಸ್ಎಫ್ ಸಭೆಯಲ್ಲಿ ಗಡಿ ಹತ್ಯೆಗಳ ವಿಷಯದ ಕುರಿತು ಚರ್ಚಿಸಲಾಗಿದೆ. ಹತ್ಯೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದು, 2019ರಲ್ಲೆ ಅತಿಹೆಚ್ಚು ಪಕರಣಗಳು ನಡೆದಿವೆ ಎಂದಿದ್ದಾರೆ.

ಭಾರತದೊಂದಿಗಿನ ಗಡಿ ಸಮನ್ವಯ ಸಮಾವೇಶದಲ್ಲಿ ಎನ್‌ಆರ್‌ಸಿ ಮತ್ತು ಎಸಿಸಿ ಕುರಿತು ಚರ್ಚಿಸಿರುವ ಬಗ್ಗೆ ಪಶ್ನೆಯೊಂದಕ್ಕೆ ಉತ್ತರಿಸಿ, ಇದು ಭಾರತದ ಆಂತರಿಕ ವಿಚಾರ ಎಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಶಫೀನುಲ್ ಇಸ್ಲಾಂ, ಭಾರತಕ್ಕೆ ಬರುವ ಅಕ್ರಮ ನುಸುಳುಕೋರರನ್ನ ತಡೆಯುವಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.

Intro:Body:Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.