ETV Bharat / international

ನಾಪತ್ತೆಯಾಗಿದ್ದ ಭಾರತೀಯ ಅಧಿಕಾರಿಗಳಿಬ್ಬರು ಪ್ರತ್ಯಕ್ಷ... ಪಾಕ್​ನಿಂದ ಬಂತು​ ಈ ಉತ್ತರ! - ಇಬ್ಬರು ಭಾರತೀಯ ಅಧಿಕಾರಿ ನಾಪತ್ತೆ

ಇಂದು ಬೆಳಗ್ಗೆ ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಇಬ್ಬರು ಭಾರತೀಯ ಅಧಿಕಾರಿಗಳನ್ನ ಇದೀಗ ಅಲ್ಲಿನ ಪೊಲೀಸರು ರಿಲೀಸ್​ ಮಾಡಿದ್ದು, ಅಪಘಾತದಲ್ಲಿ ಸಿಕ್ಕಿಬಿದ್ದ ಕಾರಣ ಅರೆಸ್ಟ್​ ಮಾಡಲಾಗಿತ್ತು ಎಂಬ ಹೇಳಿಕೆ ನೀಡಿದ್ದಾರೆ.

Indian High Commission
Indian High Commission
author img

By

Published : Jun 15, 2020, 9:15 PM IST

ಇಸ್ಲಾಮಾಬಾದ್​​: ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ನ ರಾಯಭಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಭಾರತೀಯ ಅಧಿಕಾರಿಗಳು ಪತ್ತೆಯಾಗಿದ್ದು, ಅವರನ್ನ ಅಲ್ಲಿನ ಸ್ಥಳೀಯ ಪೊಲೀಸರು ರಿಲೀಸ್​​ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಇಬ್ಬರು ಅಧಿಕಾರಿಗಳ ಬಂಧನ.. ತಕ್ಷಣ ಬಿಡುಗಡೆಗೆ ಭಾರತ ಒತ್ತಾಯ

ಜೂನ್​ 15ರಂದು ಈ ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿರು ಎಂದು ವರದಿಯಾಗಿತ್ತು. ಇದಾದ ಬಳಿಕ ಪಾಕ್​ಗೆ ಇದರ ಬಗ್ಗೆ ಮಾಹಿತಿ ನೀಡಲಾಗಿತ್ತು. ಜತೆಗೆ ಸಮನ್ಸ್​ ಕೂಡಾ ಜಾರಿ ಮಾಡಲಾಗಿತ್ತು. ಇದೀಗ ಇವರನ್ನ ರಿಲೀಸ್​ ಮಾಡಿರುವ ಪಾಕ್,​ ಇಬ್ಬರು ಅಧಿಕಾರಿಗಳು ಅಪಘಾತದ ವೇಳೆ ನಮ್ಮ ಕೈಗೆ ಸಿಕ್ಕಿಬಿದ್ದಿದ್ದರು ಎಂದು ಹೇಳಿದೆ. ಇವರ ಮೈಮೇಲೆ ಸಣ್ಣಪುಟ್ಟ ಗಾಯಗಳು ಕಾಣಿಸಿಕೊಂಡಿವೆ.

ಹಿಟ್​​ ಅಂಡ್​ ರನ್​ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಅವರನ್ನ ಬಂಧಿಸಲಾಗಿತ್ತು ಎಂದು ಪಾಕ್​ ಹೇಳಿಕೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿನ ಪಾಕ್​ ರಾಯಭಾರ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳನ್ನ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ವಜಾಗೊಳಿಸಿ ತವರಿಗೆ ವಾಪಸ್​ ಕಳಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.