ETV Bharat / international

ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾಗೆ ಜಾಮೀನು ನಿರಾಕರಣೆ

author img

By

Published : Dec 14, 2020, 7:48 PM IST

2008ರಲ್ಲಿ ನಡೆದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾಗೆ ಜಾಮೀನು ನೀಡಲು ಅಮೆರಿಕ ನ್ಯಾಯಾಲಯ ನಿರಾಕರಿಸಿದೆ.

Tahawwur Rana
ತಹವ್ವೂರ್ ರಾಣಾ

ವಾಷಿಂಗ್ಟನ್ (ಅಮೆರಿಕ): 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯ ವಜಾಗೊಳಿಸಿದೆ.

ಭಾರತ ಸರ್ಕಾರವು ತಹವ್ವೂರ್ ರಾಣಾನನ್ನು ದೇಶ ಭ್ರಷ್ಟ ಎಂದು ಘೋಷಿಸಿದ್ದು, ಅವನನ್ನು ಹಸ್ತಾಂತರ ಮಾಡಬೇಕೆಂದು ಕೆಲವು ವರ್ಷಗಳಿಂದ ಅಮೆರಿಕಕ್ಕೆ ಮನವಿ ಮಾಡಿತ್ತು. ಮತ್ತೊಂದೆಡೆ ತಹವ್ವೂರ್ ರಾಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು.

ಜಾಮೀನು ಅರ್ಜಿಯಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಉಲ್ಲೇಖಿಸಲಾಗಿದ್ದು, ಅಮೆರಿಕದ ಜೈಲಿನಲ್ಲಿದ್ದಾಗಲೇ ಎರಡು ಬಾರಿ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ. ಇದರ ಜೊತೆಗೆ ತಾನು ಅಮೆರಿಕ ಸರ್ಕಾರದ ವಿರುದ್ಧ ಯಾವುದೇ ಕೃತ್ಯಗಳನ್ನು ಎಸಗಲಿಲ್ಲ. ಇದರಿಂದ ಜಾಮೀನು ನೀಡಬೇಕೆಂದು ತಹವ್ವೂರ್ ರಾಣಾ ಮನವಿ ಮಾಡಿಕೊಂಡಿದ್ದನು. ಆದರೆ ಅಮೆರಿಕದ ಲಾಸ್ ಏಂಜಲೀಸ್ ಜಿಲ್ಲಾ ನ್ಯಾಯಾಲಯ ತಹವ್ವೂರ್ ರಾಣಾಗೆ ಜಾಮೀನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಬಿಡುಗಡೆಗೆ ಅಮೆರಿಕ ಸರ್ಕಾರ ಆಕ್ಷೇಪ

ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾದ 59 ವರ್ಷದ ತಹವ್ವೂರ್ ರಾಣಾನನ್ನು ಲಾಸ್ ಏಂಜಲೀಸ್​ನಲ್ಲಿ ಜೂನ್ 10ರಂದು ಬಂಧಿಸಲಾಗಿತ್ತು. ಈ ವೇಳೆ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ ಮನವಿ ಸಲ್ಲಿಸಿತ್ತು.

ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರಣೆಯನ್ನು ಅಮೆರಿಕದ ನ್ಯಾಯಾಲಯ ಫೆಬ್ರವರಿ 12ಕ್ಕೆ ನಿಗದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.