ETV Bharat / international

ಕ್ಯಾಪಿಟಲ್ ಗಲಭೆ: ತಮ್ಮ ಭಾಷಣ ಸಮರ್ಥಿಸಿಕೊಂಡ ಟ್ರಂಪ್​

ಬೆಂಬಲಿಗರಿಗೆ ನೀಡಿದ ಹೇಳಿಕೆಯನ್ನು ಸಮರ್ಥಿಸುತ್ತಾ ಇದು ಸಂಪೂರ್ಣವಾಗಿ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಅವರು ನನ್ನ ಭಾಷಣ ಮತ್ತು ನನ್ನ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ.

author img

By

Published : Jan 13, 2021, 6:00 AM IST

Trump defends his "totally appropriate" speech before Capitol riots
ತಮ್ಮ ಪ್ರಚೋದಿತ ಭಾಷಣವನ್ನು ಸಮರ್ಥಿಸಿಕೊಂಡ ಟ್ರಂಪ್​

ವಾಷಿಂಗ್ಟನ್:ಅಮೆರಿಕದ ಕ್ಯಾಪಿಟಲ್‌ನಲ್ಲಿ ತಮ್ಮ ಬೆಂಬಲಿಗರು ಮಾಡಿದ ಕಾರ್ಯವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಬೆಂಬಲಿಗರಿಗೆ ನೀಡಿದ ಹೇಳಿಕೆಯನ್ನು ಸಮರ್ಥಿಸುತ್ತಾ ಇದು ಸಂಪೂರ್ಣವಾಗಿ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಅವರು ನನ್ನ ಭಾಷಣ ಮತ್ತು ನನ್ನ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ. ಇದು ಸಂಪೂರ್ಣವಾಗಿ ಸೂಕ್ತ ಎಂದು ಮೆಕ್ಸಿಕೋದ ಗಡಿಗೆ ಭೇಟಿ ನೀಡಲು ನಿರ್ಗಮಿಸುವ ಮೊದಲು ಟ್ರಂಪ್ ಈ ರೀತಿ ಹೇಳಿದ್ದಾರೆ.

ಕಳೆದ ವಾರ ಕ್ಯಾಪಿಟಲ್ ದುರಂತಕ್ಕೆ ಸಾಕ್ಷಿಯಾಯಿತು. ಅಲ್ಲಿ ಹಲವಾರು ರೀತಿಯ ಹಿಂಸಾತ್ಮಕ ಚಟುವಟಿಕೆಗಳು ನಡೆದವು. ಟ್ರಂಪ್ ಅವರ ಬೆಂಬಲಿಗರು ಎಲೆಕ್ಟರಲ್ ಕಾಲೇಜಿನ ಮತಗಳ ವಿರುದ್ಧ ಆಕ್ರೋಶಗೊಂಡು ಅಲ್ಲಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಟ್ರಂಪ್​ ಬೆಂಬಲಿಗರು ಮುಖಾಮುಖಿಯಾಗಬೇಕಾಯಿತು.

ನವೆಂಬರ್​ನಲ್ಲಿ ನಡೆದ ಮತದಾನದಲ್ಲಿ ಬಿಡೆನ್ ಅವರ ವಿಜಯವನ್ನು ಕಾಂಗ್ರೆಸ್ ಪ್ರಮಾಣೀಕರಿಸುತ್ತಿದ್ದರಿಂದ ಚುನಾವಣಾ ಫಲಿತಾಂಶಗಳ ವಿರುದ್ಧ ಹೋರಾಡಲು ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದರು. ಈ ಕಾರಣಕ್ಕಾಗಿಯೇ ಕ್ಯಾಪಿಟಲ್​ನಲ್ಲಿ ಹಿಂದೆಂದೂ ಆಗದ ಘಟನೆಗಳು ಜರುಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.