ETV Bharat / international

ಯುಎಸ್​ನಲ್ಲಿ 2ನೇ ಕೋವಿಡ್ ಲಸಿಕೆಗೆ ಅನುಮೋದನೆ: ಸೋಮವಾರ ಲಸಿಕೆ ಪಡೆಯಲಿರುವ ಬೈಡನ್

ಈ ತಿಂಗಳ ಆರಂಭದಲ್ಲಿ ತುರ್ತು ಬಳಕೆಗಾಗಿ ಫೈಜರ್ ಇಂಕ್‌ನ ಕೋವಿಡ್ ಲಸಿಕೆಯ ಬಳಕೆಗೆ ಎಫ್‌ಡಿಎಯಿಂದ ಅನುಮೋದನೆ ಸಿಕ್ಕಿತ್ತು. ಇದೀಗ ಮಾಡರ್ನಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮೋದನೆ ನೀಡಿದೆ.

ಯುಎಸ್​ನಲ್ಲಿ 2ನೇ ಕೋವಿಡ್ ಲಸಿಕೆಗೆ ಅನುಮೋದನೆ
ಯುಎಸ್​ನಲ್ಲಿ 2ನೇ ಕೋವಿಡ್ ಲಸಿಕೆಗೆ ಅನುಮೋದನೆ
author img

By

Published : Dec 19, 2020, 12:21 PM IST

ವಾಷಿಂಗ್ಟನ್: ಮಾಡರ್ನಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮೋದನೆ ನೀಡಿದೆ. ಈ ತಿಂಗಳ ಆರಂಭದಲ್ಲಿ ತುರ್ತು ಬಳಕೆಗಾಗಿ ಫೈಜರ್ ಇಂಕ್‌ನ ಕೋವಿಡ್ ಲಸಿಕೆಯ ಬಳಕೆಗೆ ಎಫ್‌ಡಿಎಯಿಂದ ಅನುಮೋದನೆ ಸಿಕ್ಕಿತ್ತು. ಮಾಡರ್ನಾ, ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಎರಡನೇ ಕೋವಿಡ್-19 ಲಸಿಕೆಯಾಗಿದೆ.

ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಮಾಡರ್ನಾ ಲಸಿಕೆಗೆ ಮತ್ತು ಅದರ ಮೆಸೆಂಜರ್‌ ಆರ್‌ಎನ್‌ಎ ತಂತ್ರಜ್ಞಾನಕ್ಕೆ ಅಧಿಕೃತ ಅನುಮೋದನೆ ದೊರೆತಂತಾಗಿದೆ. ಈ ವಾರಾಂತ್ಯದ ವೇಳೆಗೆ 59 ಲಕ್ಷ ಡೋಸ್ ಲಸಿಕೆ ವಿತರಿಸಲು ಅಮೆರಿಕದ ಆಡಳಿತದೊಂದಿಗೆ ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಓದಿ: 10 ತಿಂಗಳಿಂದ ಈವರೆಗೂ.. ಭಾರತದಲ್ಲಿ ಅಬ್ಬರಿಸಿ ತಣ್ಣಗಾಗುತ್ತಿರುವ ಮಹಾಮಾರಿ

ಟ್ವೀಟ್ ಮೂಲಕ ಟ್ರಂಪ್ ಅಭಿನಂದನೆ: ಮಾಡರ್ನಾ ಲಸಿಕೆ ಈಗ ಲಭ್ಯವಿದೆ, ಅಭಿನಂದನೆಗಳು ಎಂದು ಯುಎಸ್ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

  • Congratulations, the Moderna vaccine is now available!

    — Donald J. Trump (@realDonaldTrump) December 19, 2020 " class="align-text-top noRightClick twitterSection" data=" ">

ಶೇ. 95ರಷ್ಟು ಪರಿಣಾಮಕಾರಿ: ಅಂತಿಮ ಹಂತದಲ್ಲಿ 30,000 ಸ್ವಯಂಸೇವಕರ ಮೇಲೆ ನಡೆಸಿದ ಪ್ರಯೋಗದ ಆಧಾರದ ಮೇಲೆ ಈ ಲಸಿಕೆಯ ತುರ್ತು ಬಳಕೆಗೆ ಎಫ್‌ಡಿಎ ಅನುಮೋದನೆ ನೀಡಿದೆ. ಈ ಪ್ರಯೋಗದಲ್ಲಿ ಶೇ 95ರಷ್ಟು ಪರಿಣಾಮಕಾರಿಯಾಗಿತ್ತು ಮತ್ತು ಲಸಿಕೆಯ ಬಳಕೆಯ ನಂತರ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಿರಲಿಲ್ಲ.

ಸೋಮವಾರ ಲಸಿಕೆ ಪಡೆಯಲಿರುವ ಬೈಡನ್: ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಸೋಮವಾರ ಲಸಿಕೆಯನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಜನರಿಗೆ ಭರವಸೆ ನೀಡಲು ಯುಎಸ್ ಉಪಾಧ್ಯಕ್ಷ ಮೈಕ್ ಪೆನ್ಸ್ ಶುಕ್ರವಾರ ಫೈಜರ್-ಬಯೋಟೆಕ್ ಶಾಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.