ETV Bharat / international

ಎರಡು ಹಡಗುಗಳಲ್ಲಿ ಬರೋಬ್ಬರಿ 4 ಟನ್​ ಮಾದಕ ವಸ್ತು ಜಪ್ತಿ - ಎಲ್​ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ

ಫೆಸಿಪಿಕ್​ ಸಾಗರದ ಕರಾವಳಿಗೆ ಎಲ್ ಸಾಲ್ವಡಾರ್ ರಾಷ್ಟ್ರ ಹೊಂದಿಕೊಂಡಿದ್ದು, ಎರಡು ಸೆಮಿ ಸಬ್​ಮರ್ಸಿಬಲ್ ಹಡಗುಗಳಲ್ಲಿ ಸಾಗಣೆ ಮಾಡಲಾಗುತ್ತಿದ್ದ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಲ್​ ಸಾಲ್ವಡಾರ್​ ಸರ್ಕಾರ ಹೇಳಿದೆ.

El Salvador nabs 4.1 tons of cocaine in 2 semi-submersibles
ಎರಡು ಹಡಗುಗಳಲ್ಲಿ ಬರೋಬ್ಬರಿ 4 ಟನ್​ ಮಾದಕ ವಸ್ತು ಜಪ್ತಿ
author img

By

Published : Jan 1, 2022, 4:59 AM IST

ಎಲ್​ ಸಾಲ್ವಡಾರ್: ಮಧ್ಯ ಅಮೆರಿಕದ ಪುಟ್ಟ ರಾಷ್ಟ್ರವಾದ ಎಲ್​ ಸಾಲ್ವಡಾರ್​ನ ಕರಾವಳಿ ತೀರದಲ್ಲಿ ಬರೋಬ್ಬರಿ 4.1 ಟನ್​ನಷ್ಟು ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

ಫೆಸಿಪಿಕ್​ ಸಾಗರದ ಕರಾವಳಿಗೆ ಎಲ್ ಸಾಲ್ವಡಾರ್ ರಾಷ್ಟ್ರ ಹೊಂದಿಕೊಂಡಿದ್ದು, ಎರಡು ಸೆಮಿ ಸಬ್​ಮರ್ಸಿಬಲ್ ಹಡಗುಗಳಲ್ಲಿ ಸಾಗಣೆ ಮಾಡಲಾಗುತ್ತಿದ್ದ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಲ್​ ಸಾಲ್ವಡಾರ್​ ಸರ್ಕಾರ ಹೇಳಿದೆ.

ಈಗ ಜಪ್ತಿಯಾಗಿರುವ ಮಾದಕ ವಸ್ತುವಿನ ಮೌಲ್ಯ ಸುಮಾರು 104 ಮಿಲಿಯನ್ ಅಮೆರಿಕನ್ ಡಾಲರ್​ಗಳಾಗಿದೆ ಎಂದು ಎಲ್​ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಮಾಹಿತಿ ಅಂದಾಜಿಸಿದ್ದಾರೆ. ಬುಕೆಲೆ ಆಡಳಿತ ವಹಿಸಿಕೊಂಡಾಗಿನಿಂದ ಅಂದರೆ 2019ರ ಜೂನ್​ನಿಂದ ಇದೇ ದೊಡ್ಡ ಕಾರ್ಯಾಚರಣೆ ಎಂದು ತಿಳಿದುಬಂದಿದೆ.

ಮಾದಕ ವಸ್ತು ಜಪ್ತಿ ಮಾಡಿರುವುದು ಮಾತ್ರವಲ್ಲದೇ, ಕೊಲಂಬಿಯಾದ ಐವರು ಪ್ರಜೆಗಳು, ಈಕ್ವೆಡಾರ್​ನ ಇಬ್ಬರು ಪ್ರಜೆಗಳನ್ನು ಎಲ್​ ಸಾಲ್ವಡಾರ್​ನ ನೌಕಾಪಡೆ ಬಂಧಿಸಿದೆ. ಅಮೆರಿಕ ಮತ್ತು ಮೆಕ್ಸಿಕೋ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಗಾಗ ವಾಯು ಮಾರ್ಗದ ಮೂಲಕ ಅಥವಾ ಜಲಮಾರ್ಗದ ಮೂಲದ ಮಾದಕ ವಸ್ತು ಸಾಗಣೆಯಾಗುತ್ತಿರುತ್ತದೆ ಎಂದು ತಿಳಿದುಬಂದಿದೆ.

ಇನ್ನು ಸೆಮಿ ಸಬ್​ ಮರ್ಸಿಬಲ್ ಬೋಟ್​ಗಳ ವಿಚಾರಕ್ಕೆ ಬರುವುದಾದರೆ, ಅವುಗಳು ನೀರಿನ ಮೇಲೆ ತೇಲುವ ಬೋಟ್​ಗಳಂತೆ ಕಂಡರೂ ಒಂದಷ್ಟು ಭಾಗ ನೀರಿನಲ್ಲಿ ಮುಳುಗಿರುತ್ತದೆ. ನೀರಿನಲ್ಲಿ ಮುಳಗಿರುವ ಭಾಗದಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ನಡೆಸಲಾಗುತ್ತದೆ. ಈಗ ಅಂಥದ್ದೇ ಬೋಟ್ ಮೂಲಕ ಕೊಕೇನ್ ಕಳ್ಳಸಾಗಣೆ ನಡೆಸಲಾಗುತ್ತಿತ್ತು.

ಇದನ್ನೂ ಓದಿ: ಕೊರೊನಾ ಆಯ್ತು ಇದೀಗ ಫ್ಲೊರೊನಾ ವೈರಸ್‌ ಪತ್ತೆ; ಏಲ್ಲಿ ಅಂತೀರಾ..?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.