ಗುವಾಕ್ವಿಲ್: ಸೌತ್ ಅಮೆರಿಕದ ಈಕ್ವೆಡಾರ್‌ನ ಅತಿದೊಡ್ಡ ಜೈಲಿನೊಳಗೆ ಗ್ಯಾಂಗ್‌ಗಳ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, 68 ಕೈದಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಕ್ವೆಡಾರ್‌ನ ಅತಿದೊಡ್ಡ ಜೈಲಿನೊಳಗೆ ಗ್ಯಾಂಗ್‌ಗಳ ನಡುವಿನ ಸುದೀರ್ಘ ಗುಂಡಿನ ಚಕಮಕಿಯಲ್ಲಿ (gun battle) ಬಲಿಯಾದವರ ಸಂಬಂಧಿಕರು (Relatives) ಭಾನುವಾರ ಕರಾವಳಿ ನಗರವಾದ ಗುವಾಕ್ವಿಲ್‌ನಲ್ಲಿರುವ ಶವಾಗಾರದ ಹೊರಗೆ ಕಾಯುತ್ತಿದ್ದರು.
ಶವಾಗಾರದ (Coffins) ಪಾದಚಾರಿ ಮಾರ್ಗದ ಮೇಲೆ ಶವಪೆಟ್ಟಿಗೆಗಳನ್ನಿಟ್ಟಿರುವುದು ಕಂಡು ಬಂದಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾನೂನು ರೀತಿ (law enforcement) ಆಯಾ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಶನಿವಾರ ನಡೆದ ಗ್ಯಾಂಗ್ವಾರ್ನಲ್ಲಿ (Gang war) ಕನಿಷ್ಠ 68 ಕೈದಿಗಳು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಲಿಟೋರಲ್ ಪೆನಿಟೆನ್ಷಿಯರಿಯಲ್ಲಿ ನಿಯಂತ್ರಣ ಮರಳಿ ಪಡೆಯಲು ಈ ದಾಳಿ ನಡೆದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಡ್ರಗ್ ಕಾರ್ಟೆಲ್‌ಗಳೊಂದಿಗೆ ಸಂಬಂಧ ಹೊಂದಿರುವ ಜೈಲು ಗ್ಯಾಂಗ್‌ಗಳ ನಡುವೆ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಸ್ಫೋಟ ಸಹ ಸಂಭವಿಸಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಲದಲ್ಲಿ ಈ ಘಟನೆಯ ಕೆಲ ವಿಡಿಯೋಗಳು ವೈರಲ್ ಆಗ್ತಿದ್ದು, ಕೆಲ ದೇಹಗಳು ಸುಟ್ಟು ಕರಕಲಾಗಿದ್ದು, ಕೆಲ ದೇಹಗಳು ಜೈಲಿನ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿವೆ.
ಈ ಗುಂಡಿನ ಕಾಳಗ ಸುಮಾರು ಎಂಟು ಗಂಟೆಗಳ ಕಾಲ ನಡೆದಿದೆ. ಬಳಿಕ ಮಧ್ಯಾಹ್ನ ಸಹ ಜೈಲಿನ ಕೆಲ ಭಾಗದಲ್ಲಿ ಮತ್ತೆ ಘರ್ಷಣೆಗಳು ನಡೆದಿದ್ದಾವೆ ಎಂದು ಅಲ್ಲಿನ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.