ಚಿಕಾಗೋ: ಚಿಕಾಗೋದ ಅಪಾರ್ಟ್ಮೆಂಟ್ವೊಂದರ 17 ನೇ ಮಹಡಿಯ ಕಿಟಕಿಯಿಂದ ಮೂರು ವರ್ಷದ ಬಾಲಕನೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಾಮರ್ ರೋಚ್ ಜೂನಿಯರ್ ಮೃತ ಬಾಲಕ. ಮನೆಯ ಕಿಟಕಿಗೆ ಹಾಕಿದ ಪರದೆಯನ್ನು ಹೊರಗೆ ತಳ್ಳಿ ಆಟವಾಡುತ್ತಿರುವಾಗ ಬುಧವಾರ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಆತನನ್ನು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಾಮರ್ ರೋಚ್ ಮೃತಪಟ್ಟಿದ್ದಾನೆ ಎಂದು ಚಿಕಾಗೋ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಪೌಷ್ಟಿಕತೆ, ರಕ್ತಹೀನತೆ.. ರಾಜ್ಯದ 14 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ
ಬಾಲಕನ ಸಾವಿನ ಕುರಿತು ಚಿಕಾಗೋ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.