ETV Bharat / entertainment

ಸಮಂತಾ ನಟನೆಯ 'ಯಶೋದಾ' ಫಸ್ಟ್​ಲುಕ್​ ಬಿಡುಗಡೆ: ಮಾತಿಲ್ಲ ಕಥೆಯಿಲ್ಲ.. ಫುಲ್​ ಕ್ಯುರಿಯಾಸಿಟಿ! - ಸಮಂತಾ ನಟನೆಯ 'ಯಶೋದಾ'ದ ಫಸ್ಟ್​ಲುಕ್​ ಬಿಡುಗಡೆ

ಸಮಂತಾ ಅವರ ಮುಂಬರುವ ವೈಜ್ಞಾನಿಕ ಥ್ರಿಲ್ಲರ್ 'ಯಶೋದಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

d  ಸಮಂತಾ ನಟನೆಯ 'ಯಶೋದಾ'ದ ಫಸ್ಟ್​ಲುಕ್​ ಬಿಡುಗಡೆ

author img

By

Published : May 5, 2022, 3:47 PM IST

ಹೈದರಾಬಾದ್: ಸಮಂತಾ ಅವರ ಮುಂಬರುವ ಥ್ರಿಲ್ಲರ್ 'ಯಶೋದಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚಿತ್ರದ ಫಸ್ಟ್​ ಲುಕ್​ನಲ್ಲಿ ಕಂಡು ಬರುವಂತೆ ಆಕೆ ಹೊಸ ಪ್ರಪಂಚವನ್ನು ನೋಡಲು ಕಾತುರಳಾಗಿರುವಂತೆ ಹಾಗೂ ಆಕೆ ವಾಸ್ತವವಾಗಿ ಜಟಿಲದಲ್ಲಿ ಸಿಕ್ಕಿಬಿದ್ದಿರುವುದರ ಬಗ್ಗೆ ತೋರಿಸಲಾಗಿದೆ.

ಆಕೆ ಐಷಾರಾಮಿ ಕೋಣೆಯಲ್ಲಿ ಒಬ್ಬಳೇ ಇದ್ದು, ಅಲ್ಲಿ ಅವಳ ಎಲ್ಲ ಅಗತ್ಯಗಳನ್ನು ಪೂರೈಸಲಾಗಿದೆ. ಆದರೆ ಹೊರ ಜಗತ್ತಿನ ಯಾವ ಸಂಪರ್ಕವೂ ಆಕೆಗೆ ಇಲ್ಲ ಎಂಬುದನ್ನು ಈ ದೃಶ್ಯದಲ್ಲಿ ತೋರಿಸಲಾಗಿದ್ದು, ಇದರಲ್ಲಿ ಒಂದೇ ಒಂದು ಮಾತಿಲ್ಲದಿದ್ದರೂ ಭಾರೀ ಸದ್ದು ಮಾಡುತ್ತಿದೆ.

ಸಮಂತಾ ಅವರ ಮೊದಲ ಪಾನ್​​ - ಇಂಡಿಯಾ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಇತರರು ನಟಿಸಿದ್ದಾರೆ. ಹರೀಶ್ ನಾರಾಯಣ್ ಮತ್ತು ಹರಿ ಶಂಕರ್ ನಿರ್ದೇಶನದ 'ಯಶೋದಾ' ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಆಗಸ್ಟ್ 12 ರಂದು ಬಿಡುಗಡೆಯಾಗಲಿರುವ ಯಶೋದಾ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: 16 ಮಕ್ಕಳನ್ನು ಸಂಪೂರ್ಣ ಬೆತ್ತಲು ಮಾಡಿ ಮನಬಂದಂತೆ ಥಳಿಸಿದ ಯುವಕರು: ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಪೋಷಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.