ETV Bharat / entertainment

ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ - ಈಟಿವಿ ಭಾರತ ಕನ್ನಡ

ನಿಖಿಲ್​ ಕುಮಾರಸ್ವಾಮಿ ಶೂಟಿಂಗ್​ ಸೆಟ್​ಗೆ ನಟ ಯುವ ರಾಜ್​ಕುಮಾರ್​ ಸರ್​ಪ್ರೈಸ್​ ಭೇಟಿ ನೀಡಿದ್ದಾರೆ.

Yuva Rajkumar surprise visit to nikhil kumaraswamy shooting set
ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ
author img

By ETV Bharat Karnataka Team

Published : Oct 7, 2023, 6:28 PM IST

ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ನಿಖಿಲ್​ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಅದಕ್ಕೂ ಮುನ್ನ ಈಗಾಗಲೇ ಅನೌನ್ಸ್​ ಮಾಡಿರುವ ಸಿನಿಮಾದ ಶೂಟಿಂಗ್​ ಕಂಪ್ಲೀಟ್​ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ರಾಜಕೀಯ, ಮತ್ತೊಂದೆಡೆ ಸಿನಿಮಾ ಎರಡನ್ನೂ ಬ್ಯಾಲೆನ್ಸ್​ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

'ರೈಡರ್​' ಚಿತ್ರದ ಬಳಿಕ ಸದ್ಯ ಪ್ರತಿಷ್ಠಿತ ಲೈಕಾ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ಲಕ್ಷ್ಮಣ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್ ಇತ್ತೀಚೆಗೆ ಆರಂಭವಾಗಿದೆ. ಐದು ತಿಂಗಳಲ್ಲಿ ಈ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಚಿತ್ರತಂಡ, ಬಿರುಸಿನಿಂದ ಶೂಟಿಂಗ್ ಕೆಲಸವನ್ನು ಕೈಗೊಂಡಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ದೊಡ್ಮನೆ ಕುಡಿ ಯುವ ರಾಜ್​ಕುಮಾರ್​ ಸರ್​ಪ್ರೈಸ್​ ಭೇಟಿ ನೀಡಿದ್ದಾರೆ.

Yuva Rajkumar surprise visit to nikhil kumaraswamy shooting set
ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ

ಇನ್ನೂ ಹೆಸರಿಡಿದ ಚಿತ್ರದ ಶೂಟಿಂಗ್​ ಬೆಂಗಳೂರಿನ ಸಪೋಟ ಗಾರ್ಡನ್​ನಲ್ಲಿ ನಡೆಯುತ್ತಿದೆ. ಇಲ್ಲಿಗೆ ನಟ ಯುವ ರಾಜ್​ಕುಮಾರ್​ ಜೊತೆ ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಭೇಟಿ ನೀಡಿದ್ದಾರೆ. ಸೆಟ್​ನಲ್ಲಿ ನಿಖಿಲ್​, ಯುವ, ಸಂತೋಷ್​ ಹಾಗೂ ಚಿತ್ರತಂಡದವರು ಕುಳಿತು ಮಾತುಕತೆ ನಡೆಸಿದ್ದಾರೆ. ಇನ್ನೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ 'ಯುವ' ಸಿನಿಮಾದಲ್ಲಿ ಯುವ ರಾಜ್​ಕುಮಾರ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಲೈಕಾ ಪ್ರೊಡಕ್ಷನ್ಸ್​ ಜೊತೆ ನಿಖಿಲ್​ ಕುಮಾರಸ್ವಾಮಿ ಸಿನಿಮಾ: ಮೊಮ್ಮಗನಿಗೆ ದೇವೇಗೌಡರ ಸಾಥ್​

ಒಟ್ಟಾರೆ ಈ ಇಬ್ಬರು ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟು ಹಾಕಿರುವುದಂತೂ ಸುಳ್ಳಲ್ಲ. ಇದಕ್ಕೂ ಮುನ್ನ ನಿಖಿಲ್​ ಕುಮಾರಸ್ವಾಮಿ ಸಿನಿಮಾ ಶೂಟಿಂಗ್​ ಸೆಟ್​ಗೆ ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​ ಹಾಗೂ ಧ್ರುವ ಸರ್ಜಾ ಭೇಟಿ ನೀಡಿದ್ದರು.

ಅದರಲ್ಲೂ ನಿಖಿಲ್ ಹಾಗೂ ಧ್ರುವಾ ಸರ್ಜಾ ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆಯೇ ಎನ್ನಬಹುದು. ಆದರೆ, ಇತ್ತೀಚೆಗೆ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿದ್ದರು. ಇದು ಅವರ ಅಭಿಮಾನಿ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ನಿಖಿಲ್​ ಭೇಟಿ ಮಾಡಿದ ಧ್ರುವ ಕೆಲ ಸಮಯ ಮಾತುಕತೆ ನಡೆಸಿದ್ದರು.

ಚಿತ್ರತಂಡ: ನಿಖಿಲ್​ ಕುಮಾರಸ್ವಾಮಿ ಮುಂದಿನ ಚಿತ್ರವನ್ನು ಪ್ರತಿಷ್ಠಿತ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನಷ್ಟೇ ಸಿನಿಮಾಗೆ ಟೈಟಲ್​ ಫಿಕ್ಸ್​ ಆಗಬೇಕಿದೆ. ಚಿತ್ರವನ್ನು ಲಕ್ಷ್ಮಣ್​ ನಿರ್ದೇಶನ ಮಾಡುತ್ತಿದ್ದಾರೆ. ನಿಖಿಲ್​ ಕುಮಾರಸ್ವಾಮಿಗೆ ನಾಯಕಿಯಾಗಿ ಯುಕ್ತಿ ತರೇಜಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ನಿಖಿಲ್​ ಕುಮಾರ್​ಸ್ವಾಮಿ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.