ETV Bharat / entertainment

ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ ನಡುವೆ ಬಿರುಕು ವದಂತಿ: ಸಿನಿಮಾ ಪ್ರಚಾರದ ಭಾಗವಾಗಿ ಟ್ವೀಟ್ ಮಾಡಿದ್ರಾ ಉದ್ಯಮಿ?! - ರಾಜ್​ ಕುಂದ್ರಾ ಟ್ವೀಟ್

ನಾವು ಬೇರ್ಪಟ್ಟಿರುವುದಾಗಿ ನಟಿ ಶಿಲ್ಪಾ ಶಿಟ್ಟಿ ಅವರ ಪತಿ ರಾಜ್​ ಕುಂದ್ರಾ ಟ್ವೀಟ್​ ಮಾಡಿದ್ದಾರೆ.

Raj Kundra Shilpa Shetty
ರಾಜ್​ ಕುಂದ್ರಾ ಶಿಲ್ಪಾ ಶೆಟ್ಟಿ ದಂಪತಿ
author img

By ETV Bharat Karnataka Team

Published : Oct 20, 2023, 12:54 PM IST

Updated : Oct 20, 2023, 1:05 PM IST

ಬಾಲಿವುಡ್​ ನಟಿ ಶಿಲ್ಪಾ ಶಿಟ್ಟಿ ಅವರ ಪತಿ, ಉದ್ಯಮಿ ರಾಜ್​ ಕುಂದ್ರಾ ತಮ್ಮ ಜೀವನಾಧಾರಿತ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಂಪ್ಲೀಟ್​ ಫೇಸ್​ ಮಾಸ್ಕ್ ಧರಿಸಿ ಓಡಾಡುತ್ತಿದ್ದ ಉದ್ಯಮಿ ರಾಜ್​ ಕುಂದ್ರಾ ಇದೀಗ ಮಾಸ್ಕ್ ಇಲ್ಲದೇ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಯುಟಿ 69 ಚಿತ್ರದ ಟ್ರೇಲರ್​​ ಅನ್ನು ಅನಾವರಣಗೊಳಿಸಿದ್ದಾರೆ. ಇದೀಗ ಗೊಂದಲ ಮೂಡಿಸುವಂತಹ ಟ್ವೀಟ್​ ಮಾಡಿ, ಜನರ ಗಮನ ಸೆಳೆದಿದ್ದಾರೆ. ಆದರೆ ಇದು ಸಿನಿಮಾ ಪ್ರಚಾರದ ಭಾಗ ಆಗಿರಬಹುದೆಂಬುದನ್ನು ಅಲ್ಲಗೆಳೆಯುವಂತಿಲ್ಲ.

  • We have separated and kindly request you to give us time during this difficult period 🙏💔

    — Raj Kundra (@onlyrajkundra) October 19, 2023 " class="align-text-top noRightClick twitterSection" data=" ">

ಉದ್ಯಮಿ ಪತಿ ರಾಜ್ ಕುಂದ್ರಾ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ. ನಿರ್ದಿಷ್ಟ ವಿವರಗಳನ್ನು ನೀಡದಿದ್ದರೂ, ಅವರ ಟ್ವೀಟ್​ ಪ್ರತ್ಯೇಕತೆಯನ್ನೇ ಸೂಚಿಸಿದೆ. ಈ ಸವಾಲಿನ ಸಂದರ್ಭ ಖಾಸಗಿತನಕ್ಕೂ ವಿನಂತಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಪತಿ ಮಾಡಿರುವ ಈ ಪೋಸ್ಟ್ ಅನೇಕರ ಮನಸ್ಸಲ್ಲಿ ಗೊಂದಲ ಸೃಷ್ಟಿಸಿದೆ. ಜೋಡಿಯ ದಾಂಪತ್ಯ ಜೀವನ ನಿಜವಾಗಿಯೂ ಅಂತ್ಯಗೊಂಡಿದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಇದು ಸಿನಿಮಾ ಪ್ರಚಾರದ ಭಾಗವಾಗಿರಬಹುದು ಎಂದು ಊಹಿಸಿದ್ದಾರೆ.

ಇದೇ ಸಂದೇಶವನ್ನು ರಾಜ್ ಕುಂದ್ರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿಯೂ ಹಂಚಿಕೊಂಡಿದ್ದಾರೆ. ಉದ್ಯಮಿಯ ಪೋಸ್ಟ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಕೆಲವರು "ಪ್ರತ್ಯೇಕ" ಎಂದರೆ ''ವಿಚ್ಛೇದನವೇ''? ಎಂದು ಪ್ರಶ್ನಿಸಿದ್ದಾರೆ. ಇತರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಂದಿಷ್ಟು ಜನರು ಇದು ಅವರ ಮುಂಬರುವ ಸಿನಿಮಾ 'ಯುಟಿ69'ರ ಪ್ರಚಾರದ ಭಾಗ ಎಂದು ಊಹಿಸಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್​!

ಅಲ್ಲದೇ, ರಾಜ್ ಕುಂದ್ರಾ ತಮ್ಮ ಫೇಸ್​ ಮಾಸ್ಕ್​​ನಿಂದ 'ಬೇರ್ಪಟ್ಟಿದ್ದಾರೆ' ಹೊರತು 'ಶಿಲ್ಪಾ' ಅವರಿಂದಲ್ಲ ಎಂದು ಕೆಲವರು ಕಾಮೆಂಟ್​​ ಮಾಡಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ರಾಜ್ ಕುಂದ್ರಾ ತಮ್ಮ ಚೊಚ್ಚಲ ಚಿತ್ರ ಯುಟಿ69ನ ಟ್ರೇಲರ್​ ಅನಾವರಣಗೊಳಿಸಿದ ಬೆನ್ನಲ್ಲೇ ಈ ಟ್ವೀಟ್​ ಮಾಡಿದ್ದಾರೆ. ಚಿತ್ರದಲ್ಲಿ ರಾಜ್​ ಕುಂದ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಅವರ ಕಾನೂನು ಹೋರಾಟ, ಜೈಲುವಾಸದ ಅನುಭವಗಳ ಸುತ್ತ ಕೇಂದ್ರೀಕೃತವಾಗಿದೆ.

ಇದನ್ನೂ ಓದಿ: ಫೇಸ್​ ಮಾಸ್ಕ್​​ಗೆ ಗುಡ್​ ಬೈ: ಸಾರ್ವಜನಿಕರಿಗೆ ದರ್ಶನ ಕೊಟ್ಟ ರಾಜ್​​ ಕುಂದ್ರಾ.. ಶಿಲ್ಪಾ ಶೆಟ್ಟಿ ಪತಿಯ ವಿಡಿಯೋ ವೈರಲ್​

2021ರ ಜುಲೈನಲ್ಲಿ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸರಿಸುಮಾರು ಎರಡು ತಿಂಗಳಿದ್ದರು. ಕಾನೂನು ಹೋರಾಟ ಎದುರಿಸಿದ ಬಳಿಕ, ರಾಜ್​​ ಅವರಿಗೆ ಜಾಮೀನು ಸಿಕ್ಕಿತು. ಅದಾಗ್ಯೂ, ರಾಜ್ ಅವರು ತಮ್ಮ ತಪ್ಪಿಲ್ಲದಿದ್ದರೂ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುದಾಗಿ ಹೇಳಿಕೊಂಡು ಬಂದಿದ್ದಾರೆ. ಅವರ ಕಾನೂನು ಹೋರಾಟದ ಅನುಭವಗಳ ಮೇಲೆಯೇ 'ಯುಟಿ69' ಚಿತ್ರ ನಿರ್ಮಾಣಗೊಂಡಿದೆ. ನವೆಂಬರ್ 3 ರಂದು ಚಿತ್ರಮಂದಿರಗಲ್ಲಿ 'ಯುಟಿ69' ಬಿಡುಗಡೆ ಆಗಲಿದೆ.

Last Updated : Oct 20, 2023, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.