'ಸ್ಟ್ರಾಂಗ್ ಮಹಿಳೆಯರು ತಮ್ಮ ದೇಹದಲ್ಲಿ ರೊಮ್ಯಾಂಟಿಕ್ ಅಂಶ ಹೊಂದಿರುವುದಿಲ್ಲ ಅಂತೇನಿಲ್ಲವಲ್ಲ' ಎಂದು ಹಿರಿಯ ನಟಿ ಶಬಾನಾ ಅಜ್ಮಿ ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿ ಶಬಾನಾ ಅಜ್ಮಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾದಲ್ಲಿ ಸಹ ನಟ ಧರ್ಮೇಂದ್ರ ಅವರ ಜೊತೆ ಶಬಾನಾ ಕಿಸ್ಸಿಂಗ್ ಸೀನ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಚುಂಬನದ ದೃಶ್ಯ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಈ ವಿಚಾರವಾಗಿ ಸ್ವತಃ ಶಬಾನಾ ಅಜ್ಮಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ 72ರ ಹರೆಯದ ಶಬಾನಾ ಅಜ್ಮಿ, ಪ್ರೇಕ್ಷಕರು ವಿಶೇಷವಾಗಿ ಯುವಜನರು ಈ ಚುಂಬನದ ದೃಶ್ಯದ ಬಗ್ಗೆ ಹೆಚ್ಚು ಚರ್ಚಿಸಿದ್ದು, ನನಗೆ ಬಹಳ ಸಂತೋಷವಾಗಿದೆ. ಓಹ್, ವಾವ್, ನಾವು ನಿಮ್ಮನ್ನು ಈ ರೀತಿಯ ಪಾತ್ರದಲ್ಲಿ ಊಹಿಸಿರಲಿಲ್ಲ, ನೀವು ಇದನ್ನು ಚೆನ್ನಾಗಿ ನಿಭಾಯಿಸಿದ್ದೀರಿ ಎಂದೆಲ್ಲಾ ಕಾಮೆಂಟ್ಗಳು ಬರುತ್ತಿವೆ ಎಂದು ತಿಳಿಸಿದರು.
ಬಹುಶಃ ಚುಂಬನದ ದೃಶ್ಯ ಅನಿರೀಕ್ಷಿತವಾದ್ದರಿಂದ ಇದು ಹೆಚ್ಚು ಚರ್ಚೆ ಹುಟ್ಟುಹಾಕಿತು. ನೀವು ಇದಕ್ಕೆ ಸಿದ್ಧರಿರಲಿಲ್ಲ. ಕಿಸ್ಸಿಂಗ್ ಸೀನ್ ಅನ್ನು ನಿರೀಕ್ಷಿಸಿರಲಿಲ್ಲ. ಆದ್ರೆ ಇದೇಕೆ ಅಷ್ಟೊಂದು ಆಶ್ಚರ್ಯಕರ ವಿಷಯವಾಯಿತು ಎಂದು ನನಗನಿಸುತ್ತಿದೆ. ಸ್ಟ್ರಾಂಗ್ ವುಮನ್ ಇಮೇಜ್ ಹೊಂದಿರುವ ನಟಿ ಏಕೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಬಾರದು. ಸ್ಟ್ರಾಂಗ್ ವುಮನ್ ತಮ್ಮ ದೇಹದಲ್ಲಿ ರೊಮ್ಯಾಂಟಿಕ್ ಅಂಶ ಹೊಂದಿರುವುದಿಲ್ಲ ಅಂತೇನಿಲ್ಲವಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಬಿಟೌನ್ ಸ್ಟಾರ್ಸ್ - ಸಲ್ಲು, ಸಿದ್ ಕಿಯಾರಾ, ವಿಕ್ಕಿ ಫೋಟೋ ವೈರಲ್!
ವೀಕ್ಷಕರು ಹೆಚ್ಚು ಆಶ್ಚರ್ಯಕ್ಕೊಳಗಾದ ಕಾರಣ ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಆದ್ರೆ ಜನರು ಇದನ್ನು ಇಷ್ಟಪಟ್ಟಿದ್ದಾರೆ, ಆನಂದಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಯುವಪೀಳಿಗೆ ಇದನ್ನು ಸ್ವೀಕರಿಸಿದ್ದಾರೆ, ಚಪ್ಪಾಳೆ ಕೊಡುತ್ತಿದ್ದಾರೆ ಎಂದು ಅಜ್ಮಿ ತಿಳಿಸಿದರು. ಇನ್ನು, ಕರಣ್ ಜೋಹರ್ ಜೊತೆ ಮೊದಲ ಬಾರಿಗೆ ಕೆಲಸ ಮಾಡಿದ್ದು, ಅವರೂ ಕೂಡ ಈ ಬಗ್ಗೆ ನಂಬಿಕೆ ಇಡಿ ಎಂದು ತಿಳಿಸುತ್ತಿದ್ದರು. ಚಿತ್ರದ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರಿಂದ ಕೂಡ ಬೆಂಬಲ ಸಿಕ್ಕಿತು ಎಂದು ತಿಳಿಸಿದರು.
ಇದನ್ನೂ ಓದಿ: ಆಕರ್ಷಕ ಭಂಗಿಯಲ್ಲಿ ಕಂಗನಾ ರಣಾವತ್: ಚಂದ್ರಮುಖಿ 2ರ ಫಸ್ಟ್ ಲುಕ್ಗೆ ಮನಸೋತ ಅಭಿಮಾನಿಗಳು
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮತ್ತು ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನಂಬಿಕೆ ಇಡಿ, ಏನಾಗುವುದಿಲ್ಲ ಎಂದು ನನಗೆ ಭರವಸೆ ಕೊಡುತ್ತಿದ್ದರು. ಹಾಗಾಗಿ ನಾನು ಅವರಲ್ಲಿ 'ಸರಿ, ನಾನು ನಿಮಗೆ ಶರಣಾಗುತ್ತೇನೆ' ಎಂದು ತಿಳಿಸಿದ್ದೆ. ಒಂದು ವೇಳೆ ವೀಕ್ಷಕರು ನನ್ನ ಮೇಲೆ ಕಲ್ಲೆಸೆದರೆ, ನಾನು ಅವನ್ನು ಹೆಕ್ಕಿ ನಿಮ್ಮ ಮೇಲೆ ಎಸೆಯುತ್ತೇನೆ ಎಂದು ತಿಳಿಸಿದ್ದೆ ಎಂದು ಶೂಟಿಂಗ್ ಸೆಟ್ನ ನೆನಪುಗಳನ್ನು ಮೆಲುಕು ಹಾಕಿದರು.