ETV Bharat / entertainment

ರಶ್ಮಿಕಾ ಮಂದಣ್ಣ - ಶೆಹನಾಜ್ ಗಿಲ್ ಹ್ಯಾಪಿ ಟೈಮ್​​​: ಬ್ಯೂಟಿಫುಲ್​ ವಿಡಿಯೋ ವೈರಲ್​​ - ಜಿಯೋ ವರ್ಲ್ಡ್ ಪ್ಲಾಜಾ

Rashmika Mandanna with Shehnaaz Gill: ರಶ್ಮಿಕಾ ಮಂದಣ್ಣ ಮತ್ತು ಶೆಹನಾಜ್ ಗಿಲ್ ಬಹಳ ಉತ್ತಮ ಸಮಯ ಕಳೆದಿದ್ದಾರೆ.

Rashmika Mandanna with Shehnaaz Gill
ಶೆಹನಾಜ್ ಗಿಲ್ ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Nov 1, 2023, 8:11 PM IST

ರಿಲಯನ್ಸ್​ ಇಂಡಸ್ಟ್ರೀಸ್ ಸಂಸ್ಥೆ ದೇಶದ ಅತಿ ದೊಡ್ಡ, ಐಷಾರಾಮಿ ಮಾಲ್​​ ಅನ್ನು ಉದ್ಘಾಟಿಸಿದೆ. ಇಂದಿನಿಂದ ಜನರಿಗೆ ಮಾಲ್​​ ಮುಕ್ತವಾಗಿದೆ. ನಿನ್ನೆ ಸಂಜೆ ನಡೆದ 'ಜಿಯೋ ವರ್ಲ್ಡ್ ಪ್ಲಾಜಾ' ಈವೆಂಟ್​ನಲ್ಲಿ ಬಣ್ಣದ ಲೋಕದ ಖ್ಯಾತನಾಮರು ಸಾಕ್ಷಿ ಆಗಿದ್ದರು. ಮಂಗಳವಾರ ರಾತ್ರಿ 'ಜಿಯೋ ವರ್ಲ್ಡ್ ಪ್ಲಾಜಾ' ಗ್ಲಾಮರ್​​ಗೆ ಸಾಕ್ಷಿಯಾಯಿತು. ಬಾಲಿವುಡ್​​ ತಾರೆಯರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಶೆಹನಾಜ್ ಗಿಲ್ ಬಹಳ ಆತ್ಮೀಯರಾಗಿ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ. ಇಬ್ಬರೂ ತಾರೆಯರು ಬಹಳ ಖುಷಿಯಲ್ಲಿದ್ದು, ಏನನ್ನೋ ಮಾತನಾಡುತ್ತಿದ್ದಾರೆ. ಜೊತೆಗೆ ಸಿಹಿ ಅಪ್ಪುಗೆಯನ್ನೂ ಹಂಚಿಕೊಂಡಿದ್ದಾರೆ.

'ಜಿಯೋ ವರ್ಲ್ಡ್ ಪ್ಲಾಜಾ' ಈವೆಂಟ್‌ನಲ್ಲಿ, ಶೆಹನಾಜ್ ಗಿಲ್​​ - ರಶ್ಮಿಕಾ ಮಂದಣ್ಣ ಕೈ ಕೈ ಕುಲುಕಿಸಿದರು. ಸಿಹಿ ಅಪ್ಪುಗೆ ಹಂಚಿಕೊಂಡರು. ಸಿಹಿ ಕ್ಷಣವನ್ನು ತಮ್ಮದಾಗಿಸಿಕೊಂಡರು. ಇಬ್ಬರೂ ಜನಪ್ರಿಯ ವ್ಯಕ್ತಿಗಳೇ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದವರೇ. ಇಬ್ಬರ ಮೊಗದಲ್ಲೂ ಮಿಲಿಯನ್​ ಡಾಲರ್​ ಸ್ಮೈಲ್​ ಕಾಣಬಹುದು. ರಾಯಲ್ ಈವೆಂಟ್‌ನಿಂದ ಫೋಟೋ, ವಿಡಿಯೋಗಳು ವೈರಲ್​​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಪಾಪರಾಜಿಯೊಬ್ಬರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಂದರಿಯರ ಸುಂದರ ಕ್ಷಣವನ್ನು ಹಂಚಿಕೊಂಡಿದ್ದಾರೆ. ಶೆಹನಾಜ್ ಮತ್ತು ರಶ್ಮಿಕಾ ಪರಸ್ಪರ ಮಾತನಾಡಿಸಿರುವ ವಿಡಿಯೋ ಬಹಳ ಆಕರ್ಷಣೀಯವಾಗಿದೆ. ಅಭಿಮಾನಿಳಿಗಂತೂ ಬಹಳಾನೇ ಹಿಡಿಸಿದೆ. ಈ ಇಬ್ಬರೂ ಸುಂದರಿಯರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ? ಏಕಿಷ್ಟು ನಗುತ್ತಿದ್ದಾರೆ? ಏನಿರಬಹುದು? ಎಂಬುದನ್ನು ತಿಳಿಯಲು ಅಸಭಿಮಾನಿಗಳು ಬಯಸಿದ್ದಾರೆ. ಸಖತ್​ ಸದ್ದು ಮಾಡುತ್ತಿರುವ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು, "ಏನಿದು ಗಾಸಿಪ್?!" ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ "ಒಂದೇ ಫ್ರೇಮ್​ನಲ್ಲಿ ಎರಡು ಸುಂದರ ಆತ್ಮಗಳು" ಎಂದು ಬರೆದಿದ್ದಾರೆ.

'ಜಿಯೋ ವರ್ಲ್ಡ್ ಪ್ಲಾಜಾ' ಈವೆಂಟ್​ಗಾಗಿ ಬಾಲಿವುಡ್​ ನಟಿ ಶೆಹನಾಜ್ ಗಿಲ್​​ ರೆಡ್​ ಗೌನ್ ಅನ್ನು ಆಯ್ಕೆ ಮಾಡಿಕೊಂಡರು. ಪಂಜಾಬ್​ನ ಕತ್ರಿನಾ ಕೈಫ್​ ಖ್ಯಾತಿಯ ಗಿಲ್​​ ಆಕರ್ಷಕ ಉಡುಗೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಬಾಲಿವುಡ್​ನಲ್ಲಿ ಬೆಳೆಯುತ್ತಿರುವ, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಶ್ರಮ ವಹಿಸುತ್ತಿರುವ ಬಿಗ್​ ಬಾಸ್​ ಖ್ಯಾತಿಯ ಶೆಹನಾಜ್​​ ಈವೆಂಟ್​ನಲ್ಲಿ ಬಹಳ ಆತ್ಮವಿಶ್ವಾಸದಿಂದ ಗುರುತಿಸಿಕೊಂಡಿದ್ದು, ಅಭಿಮಾನಿಗಳು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ಟೈಗರ್ 3 ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಹಿತಿ: ಮುಂಜಾನೆ 7ಕ್ಕೆ ಸಿನಿಮಾ ಪ್ರದರ್ಶನ ಪ್ರಾರಂಭ

ಮತ್ತೊಂದೆಡೆ ಬಹುಭಾಷಾ ನಟಿ, ರಶ್ಮಿಕಾ ಮಂದಣ್ಣ ಗೋಲ್ಡನ್​ ಶೈನಿಂಗ್​​ ಫ್ರಾಕ್​ ಧರಿಸಿ ಎಂದಿನಂತೆ ಕಂಗೊಳಿಸಿದ್ದಾರೆ. ನಟಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನ ಮತ್ತೊಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ರಣ್​ಬೀರ್​ ಜೊತೆ ತೆರೆ ಹಂಚಿಕೊಂಡಿದ್ದು, ಸಿನಿಮಾ ಡಿಸೆಂಬರ್​ 1ರಂದು ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಸಿನಿಮಾ ಪ್ರಚಾರ ಪ್ರಾರಂಭಿಸಿದೆ.

ಇದನ್ನೂ ಓದಿ: ನಾಳೆ ಶಾರುಖ್ ಖಾನ್ ಬರ್ತ್​ಡೇ: ಡಂಕಿ ಟೀಸರ್ ರಿಲೀಸ್​​​ಗೆ ಸಿದ್ಧತೆ

ಶೆಹನಾಜ್ ಮತ್ತು ರಶ್ಮಿಕಾ ಜೊತೆಗೆ, ವಿಜಯ್ ವರ್ಮಾ, ತಮನ್ನಾ ಭಾಟಿಯಾ, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್, ಕರೀನಾ ಕಪೂರ್ ಖಾನ್, ಮಲೈಕಾ ಅರೋರಾ ಮತ್ತು ಖುಷಿ ಕಪೂರ್ ಸೇರಿದಂತೆ ಹಲವರು ಈವೆಂಟ್​ನಲ್ಲಿ ಆಕರ್ಷಣೀಯ ಉಡುಗಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.