ಚೆನ್ನೈ(ತಮಿಳುನಾಡು): ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಂದು (ಸೋಮವಾರ) ತಮ್ಮ ಅಭಿಮಾನಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಿದರು. ಬಿಳಿ ಕುರ್ತಾ ಧರಿಸಿದ್ದ ರಜನಿಕಾಂತ್ ತಮ್ಮ ನಿವಾಸದ ಮುಂದೆ ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಕೈ ಬೀಸಿ ಖುಷಿಗಳಿಗೆ ಸಾಕ್ಷಿಯಾದರು.
ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಹಿರಿಯ ತಾರೆಯ ಸರಳತೆಯನ್ನು ಶ್ಲಾಘಿಸಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಬಂದಿದ್ದ ಸಾವಿರಾರು ಅಭಿಮಾನಿಗಳು ಅವರನ್ನು ಕಾಣುತ್ತಿದ್ದಂತೆ ಕೇಕೆ ಹಾಕಿ ಸಂಭ್ರಮಪಟ್ಟರು. ಅವರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದ ಅಭಿಮಾನಿಗಳಂತೂ ಖುಷಿಯಾದರು.
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲಿ ಇಬ್ಬರಾದ ರಜನಿಕಾಂತ್ ಕನ್ನಡ ಚಿತ್ರರಂಗವಲ್ಲದೇ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿ ಪಡೆದಿದ್ದಾರೆ. ವಿವಿಧ ಪಾತ್ರ ಮತ್ತು ವಿಶಿಷ್ಟ ನಟನೆಯಿಂದ ತಮಿಳು ಚಲನಚಿತ್ರೋದ್ಯಮದಲ್ಲಿ ಅವರು ಭದ್ರಕೋಟೆ ಸ್ಥಾಪಿಸಿದ್ದಾರೆ.
-
Rajinikanth greets fans outside his residence, wishes them Happy Diwali
— ANI Digital (@ani_digital) October 24, 2022 " class="align-text-top noRightClick twitterSection" data="
Read @ANI Story | https://t.co/5jNsY497Pu#Rajnikanth #Diwali2022 #Bollywood pic.twitter.com/StH7tLK73d
">Rajinikanth greets fans outside his residence, wishes them Happy Diwali
— ANI Digital (@ani_digital) October 24, 2022
Read @ANI Story | https://t.co/5jNsY497Pu#Rajnikanth #Diwali2022 #Bollywood pic.twitter.com/StH7tLK73dRajinikanth greets fans outside his residence, wishes them Happy Diwali
— ANI Digital (@ani_digital) October 24, 2022
Read @ANI Story | https://t.co/5jNsY497Pu#Rajnikanth #Diwali2022 #Bollywood pic.twitter.com/StH7tLK73d
ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದ ಅವರು ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಸಿನಿಮಾ ರಂಗದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದ ಅವರು ಹತ್ತು ಹಲವು ಸೂಪರ್ ಹಿಟ್ಟ ಸಿನಿಮಾಗಳನ್ನು ನೀಡಿದರು. 'ಕಬಾಲಿ', 'ಶಿವಾಜಿ', 'ಅನ್ನಾತ್ತೆ', ಮತ್ತು 'ಲಿಂಗ' ಅವರು ನಟಿಸಿದ ಕೆಲವು ಬೆಸ್ಟ್ ಸಿನಿಮಾಗಳು.
ಕೊನೆಯದಾಗಿ ಶಿವಾ ನಿರ್ದೇಶನದ 'ಅನ್ನತ್ತೆ' ಚಿತ್ರದಲ್ಲಿ ಅವರು ಕಾಣಿಸಿಕೊಂಡರು. ಇದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಕಳೆದ ದೀಪಾವಳಿ (2021) ಸಂದರ್ಭದಲ್ಲಿ ಈ ಚಿತ್ರವು ಬಿಡುಗಡೆಗೊಂಡಿತ್ತು. ಸದ್ಯ ಅವರು ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಜೈಲರ್' ನಲ್ಲಿ ನಟಿಸುತ್ತಿದ್ದಾರೆ. ಮೊದಲ ಪೋಸ್ಟರ್ನಿಂದಲೇ ಸಖತ್ ಸುದ್ದಿಯಾಗುತ್ತಿರುವ 'ಜೈಲರ್' ನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಇದರ ಜೊತೆಗೆ ಐಶ್ವರ್ಯಾ ರೈ ಬಚ್ಚನ್, ರಮ್ಯಾ ಕೃಷ್ಣನ್, ಪ್ರಿಯಾಂಕಾ ಅರುಲ್ ಮೋಹನ್ ಕಾಣಿಸಿಕೊಳ್ಳಲಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ: ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬನಾರಸ್ ಅದ್ಧೂರಿ ಪ್ರೀ ರಿಲೀಸ್ ಸಮಾರಂಭ