ಬಿಕಿನಿ, ಬಿಂದಿ ಮತ್ತು ಬಳೆ: 22 ವರ್ಷದ ಹಳೆಯ ಫೋಟೋ ಹಂಚಿಕೊಂಡ ಪ್ರಿಯಾಂಕಾ - 22 ವರ್ಷದ ಹಳೆಯ ಫೋಟೋ ಪೋಸ್ಟ್
ಸಾಮಾಜಿಕ ಜಾಲತಾಣದಲ್ಲಿ 22 ವರ್ಷಗಳ ಹಿಂದಿನ ತಮ್ಮ ಬಿಕಿನಿ ಫೋಟೋ ಶೇರ್ ಮಾಡುವ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

ಮುಂಬೈ: ಬಾಲಿವುಡ್, ಹಾಲಿವುಡ್ನಲ್ಲಿ ವಿಶೇಷ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ 22 ವರ್ಷಗಳಷ್ಟು ಹಳೆಯ ಬಿಕಿನಿ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ. 2000ನೇ ಇಸವಿಯಲ್ಲಿ ಮಾಲ್ಡೀವ್ಸ್ನಲ್ಲಿ ತೆಗೆದಿರುವ ಫೋಟೋ ಇದು.
ಫೋಟೋಗೆ ಪತಿ ನಿಕ್ ಜೋನಾಸ್, ನಟರಾದ ರಣವೀರ್ ಸಿಂಗ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳಿಂದ ಲೈಕುಗಳೂ ಸಿಕ್ಕಿವೆ. ವಿಶೇಷವೆಂದರೆ, ಈ ಫೋಟೋ ತೆಗೆದ ವರ್ಷದಲ್ಲೇ (2000) ಪ್ರಿಯಾಂಕಾ 'ವಿಶ್ವ ಸುಂದರಿ' ಕಿರೀಟ ಮುಡಿಗೇರಿಸಿಕೊಂಡಿದ್ದರು.
- " class="align-text-top noRightClick twitterSection" data="
">
ಸದ್ಯ ಹಾಲಿವುಡ್ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ, ಹೊಸ ಹೊಸ ಅವತಾರಗಳಲ್ಲಿ ಮಿಂಚು ಹರಿಸುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.