ETV Bharat / entertainment

ಯುವ ನಿರ್ದೇಶಕನ ಜೊತೆ ಕೈಜೋಡಿಸಿದ ನಿರೂಪ್ ಭಂಡಾರಿ; ಹೊಸ ವರ್ಷದಿಂದ ಹೊಸ ಸಿನಿಮಾ ಆರಂಭ - nirup bhandari new movies

ಯುವ ನಿರ್ದೇಶಕನ ಜೊತೆ ಕೈಜೋಡಿಸಿರುವ ನಟ ನಿರೂಪ್ ಭಂಡಾರಿ ಹೊಸ ವರ್ಷದಿಂದ ಶೂಟಿಂಗ್ ಆರಂಭ ಮಾಡಲಿದ್ದಾರೆ.

ನಿರೂಪ್ ಭಂಡಾರಿ
ನಿರೂಪ್ ಭಂಡಾರಿ
author img

By ETV Bharat Karnataka Team

Published : Dec 14, 2023, 2:34 PM IST

ಸಹೋದರ ಮತ್ತು ನಿರ್ದೇಶಕ ಅನುಪ್ ಭಂಡಾರಿ ಅವರೊಂದಿಗೆ 'ರಂಗಿತರಂಗ' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ ನಿರೂಪ್ ಭಂಡಾರಿ, ಇದೀಗ ಮಗದೊಂದು ಹೊಸ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಂದನವನದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಸಚಿನ್ ವಾಲಿ ಅವರ ಹೆಸರಿಡದ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ರಂಗಿತರಂಗ ಚಿತ್ರದ ನಂತರ ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್‌ ಚಿತ್ರಗಳಲ್ಲಿ ನಟಿಸಿದ್ದ ನಿರೂಪ್ ಭಂಡಾರಿ ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈಜೋಡಿಸಿದ್ದಾರೆ. ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ ಇದೀಗ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಹೇಳಲು ಸಚಿನ್ ಮುಂದಾಗಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ.

ನಿರೂಪ್ ಭಂಡಾರಿ
ನಿರೂಪ್ ಭಂಡಾರಿ

ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡಿರುವ ಈ ಸಿನಿಮಾಗೆ ಅಂಕೆತ್ ಸಿನಿಮಾಸ್‌ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ‌ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜನವರಿಯಿಂದ ಶೂಟಿಂಗ್ ಹೊರಡಲು ಸಜ್ಜಾಗಿರುವ ಚಿತ್ರತಂಡ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ತುಮಕೂರು ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಸದ್ಯ ನಾಯಕನಾಗಿ ನಿರೂಪ್ ಅವರನ್ನು ಅಂತಿಮಗೊಳಿಸಲಾಗಿದ್ದು, ಸದ್ಯಕ್ಕೆ ಚಿತ್ರತಂಡ ಉಳಿದ ತಾರಾಗಣವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದೆ.

ಯುವ ನಿರ್ದೇಶಕನ ಜೊತೆ ನಿರೂಪ್ ಭಂಡಾರಿ
ಯುವ ನಿರ್ದೇಶಕನ ಜೊತೆ ನಿರೂಪ್ ಭಂಡಾರಿ

ಇದನ್ನೂ ಓದಿ: 'ಎಡಗೈಯೇ ಅಪಘಾತಕ್ಕೆ ಕಾರಣ'.. ದಿಗಂತ್ ಜೊತೆ ನಿರೂಪ್ ಭಂಡಾರಿ ಸ್ಕ್ರೀನ್​ ಶೇರ್

ಇನ್ನು 'ರಂಗಿತರಂಗ' ಚಿತ್ರದ ಮೂಲಕ ಕರ್ನಾಟಕದ ಜನಮನ ಗೆದ್ದ ನಿರೂಪ್ ಭಂಡಾರಿ, ಸ್ಯಾಂಡಲ್​​ವುಡ್​ನ ಜನಪ್ರಿಯ ನಟ ದಿಗಂತ್​ ಮಂಚಾಲೆ ಮುಖ್ಯ ಭೂಮಿಕೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ಮಾಡಿದ್ದು ದಿಗಂತ್ ಮಂಚಾಲೆ ಅವರು ಗ್ರ್ಯಾಂಡ್​ ವೆಲ್​ಕಮ್​ ನೀಡಿದ್ದಾರೆ. ದಿಗಂತ್​ ಮತ್ತು ನಿರೂಪ್​ ಭಂಡಾರಿ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವುದಕ್ಕೆ ಫ್ಯಾನ್ಸ್​ ಕೂಡ ಕಾದು ಕುಳಿತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.