ETV Bharat / entertainment

'ದಸರಾ'ಗೆ ಸೆಟ್ಟೇರಿತು ನಾನಿ 31ನೇ ಸಿನಿಮಾ; 'ಸರಿಪೋದಾ ಶನಿವಾರಂ'ಗೆ ಪ್ರಿಯಾಂಕಾ ಮೋಹನ್ ನಾಯಕಿ - etv bharat kannada

ದಸರಾ ಹಬ್ಬದ ಅಂಗವಾಗಿ ನ್ಯಾಚುರಲ್​ ಸ್ಟಾರ್​ ನಾನಿಯ 31ನೇ ಸಿನಿಮಾ 'ಸರಿಪೋದಾ ಶನಿವಾರಂ' ಸೆಟ್ಟೇರಿತು.

Natural Nani 31st movie is saripodhaa shanivaram
'ದಸರಾ'ಗೆ ಸೆಟ್ಟೇರಿತು ನಾನಿ 31ನೇ ಸಿನಿಮಾ
author img

By ETV Bharat Karnataka Team

Published : Oct 26, 2023, 3:22 PM IST

'ದಸರಾ' ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ನಂತರ ನ್ಯಾಚುರಲ್​ ಸ್ಟಾರ್​ ನಾನಿ ಸಾಲು ಸಾಲು ಚಿತ್ರಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. 'ಅಂಟೆ ಸುಂದರಾನಿಕಿ'ಯಂತಹ ಕಾಮಿಡಿ ಎಮೋಷನಲ್​ ಸಿನಿಮಾವನ್ನು ನಿರ್ದೇಶಿಸಿದ್ದ ವಿವೇಕ್​ ಆತ್ರೇಯ ಅವರು ನಾನಿಯ 31ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಚಿತ್ರವನ್ನು ಡಿವಿವಿ ಎಂಟರ್​ಟೈನ್​ಮೆಂಟ್​ ಬ್ಯಾನರ್​ ನಿರ್ಮಿಸಲಿದೆ. ದಸರಾ ಹಬ್ಬದ ಅಂಗವಾಗಿ ಹೈದರಾಬಾದ್​ನಲ್ಲಿ ಸಿನಿಮಾ ಸೆಟ್ಟೇರಿದೆ.

ಚಿತ್ರಕ್ಕೆ ಶೀರ್ಷಿಕೆ ಫೈನಲ್​: ನಾನಿಯ 31ನೇ ಸಿನಿಮಾಗೆ 'ಸರಿಪೋದಾ ಶನಿವಾರಂ' ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರವು ನವರಾತ್ರಿಯ ಶುಭ ಸಂದರ್ಭದಲ್ಲಿ ಸೆಟ್ಟೇರಿದೆ. ಈ ವೇಳೆ ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮರಾಗೆ ಚಾಲನೆ ನೀಡಿದರು. ವಿ.ವಿ.ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

'ಸರಿಪೋದಾ ಶನಿವಾರಂ' ಪಕ್ಕ ಮಾಸ್​ ಆ್ಯಕ್ಷನ್​ ಎಂಟರ್​ಟೈನ್​ಮೆಂಟ್​ ಚಿತ್ರವಾಗಿದೆ. ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್​ ಮಾಡುತ್ತಿದ್ದಾರೆ. ತಮಿಳು ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಿಯಾಂಕಾ ಮೋಹನ್​ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಡಿ.ವಿ.ವಿ.ದಾನಯ್ಯ ನಿರ್ಮಾಣದ ಮತ್ತೊಂದು ಚಿತ್ರವಾದ ಪವನ್​ ಕಲ್ಯಾಣ್​ ಅವರ 'ಓಜಿ'ಗೂ ಇವರೇ ಹೀರೋಯಿನ್​. ಒಂದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಪ್ರಿಯಾಂಕಾ ಮೋಹನ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಜೇಕ್ಸ್​ ಬಿಜಾಯ್​ ಸಂಗೀತ, ಮುರಳಿ.ಜಿ. ಛಾಯಾಗ್ರಹಣವಿರಲಿದೆ.

Natural Nani 31st movie is saripodhaa shanivaram
'ದಸರಾ'ಗೆ ಸೆಟ್ಟೇರಿತು ನಾನಿ 31ನೇ ಸಿನಿಮಾ

ಇದನ್ನೂ ಓದಿ: ನ್ಯಾಚುರಲ್ ಸ್ಟಾರ್ ನಾನಿಗೆ ಕಿಚ್ಚ ಸುದೀಪ್ ಸಾಥ್: 'ಹಾಯ್ ನಾನ್ನ' ಸಿನಿಮಾ ಸಾಂಗ್​ ರಿಲೀಸ್

'ಸರಿಪೋದಾ ಶನಿವಾರಂ' ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ಡಿವಿವಿ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್​ ದಾಸರಿ ನಿರ್ಮಾಣ ಮಾಡುತ್ತಿದ್ದಾರೆ. ಮಾಹಿತಿ ಪ್ರಕಾರ, ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಈಗಾಗಲೇ ಮುಗಿದಿದೆ. ಪ್ರೀ-ಪ್ರೊಡಕ್ಷನ್​ ಕೆಲಸ ಕೂಡ ಅಂತಿಮ ಹಂತಕ್ಕೆ ಬಂದಿದೆ.

ನಾನಿ 30ನೇ ಸಿನಿಮಾ: ನಾನಿ ನಟನೆಯ 30ನೇ ಸಿನಿಮಾ 'ಹಾಯ್​ ನಾನ್ನ'. ಎಮೋಷನಲ್ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಬ್ಜೆಕ್ಟ್​ ಒಳಗೊಂಡ ಈ ಚಿತ್ರ ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ತಂದೆ ಪಾತ್ರದಲ್ಲಿ ನಾನಿ ಹಾಗೂ ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ಹಾಗೂ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ.

ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೈರ ಎಂಟರ್ಟೈನ್​ಮೆಂಟ್ಸ್​ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್​ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಮತ್ತೊಂದೆಡೆ, ಚಿತ್ರದಲ್ಲಿ 'ಸಲಾರ್' ಬ್ಯೂಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: 'ಹಾಯ್​ ನಾನ್ನ' ಟೀಸರ್ ಔಟ್​: ಅಪ್ಪ-ಮಗಳ ಬಾಂಧವ್ಯದ ಕಥೆ ಡಿಸೆಂಬರ್‌ನಲ್ಲಿ ತೆರೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.