ETV Bharat / entertainment

ಹೊಸ ಅತಿಥಿ ಆಗಮನ... ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಶರ್ಮಾ

ಬಾಲಿವುಡ್ ನಟ ಮತ್ತು ದೂರದರ್ಶನದ 'ಮಹಾದೇವ್' ಸೀರಿಯಲ್​ನ ಶಿವಪಾತ್ರಧಾರಿ ಮೋಹಿತ್ ರೈನಾ ಮತ್ತು ಅವರ ಪತ್ನಿ ಅದಿತಿ ಶರ್ಮಾ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ನಟ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

author img

By

Published : Mar 17, 2023, 4:59 PM IST

ಮೋಹಿತ್ ರೈನಾ- ಅದಿತಿ ಶರ್ಮ ದಂಪತಿ
ಮೋಹಿತ್ ರೈನಾ- ಅದಿತಿ ಶರ್ಮ ದಂಪತಿ

ಮುಂಬೈ(ಮಹಾರಾಷ್ಟ್ರ): ನಟ ಮೋಹಿತ್ ರೈನಾ ಮತ್ತು ಅವರ ಪತ್ನಿ ಅದಿತಿ ಶರ್ಮಾ ಅವರು ಶುಕ್ರವಾರ ಟಿನ್ಸೆಲ್ ಪಟ್ಟಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 'ದೇವೋನ್ ಕೆ ದೇವ್.. ಮಹದೇವ್' ಸ್ಟಾರ್ ಮೋಹಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್​​ನಲ್ಲಿ ತಾನು ಹೆಣ್ಣು ಮಗುವಿಗೆ ತಂದೆಯಾಗಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. 'ನಾವೀಗ ಮೂವರು ಆಗಿದ್ದೇವೆ. ಪ್ರಪಂಚಕ್ಕೆ ಹೆಣ್ಣು ಮಗುವಿಗೆ ಸ್ವಾಗತ' ಎಂದು ಬರೆದುಕೊಂಡಿದ್ದಾರೆ.

ಮೋಹಿತ್ ಮತ್ತು ಅದಿತಿ ತಮ್ಮ ಪುಟ್ಟ ಮಗುವಿನ ಕೈಗಳನ್ನು ಹಿಡಿದಿರುವ ಫೋಟೋವನ್ನು ಸಹ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮತ್ತು ಉದ್ಯಮದ ಸ್ನೇಹಿತರು ರೈನಾಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ದಿಯಾ ಮಿರ್ಜಾ, ಶ್ರೇಯಾ ಧನ್ವಂತರಿ, ಅಮಿತ್ ಟಂಡನ್ ಮತ್ತು ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಇತರರು ದಂಪತಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಬಿಜಿಲಿ ಮಹಾದೇವರ ದರ್ಶನ ಪಡೆದ ಬಾಲಿವುಡ್​ ನಟಿ ಸಾರಾ ಅಲಿಖಾನ್​​

ನಟ ಮೋಹಿತ್​ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡ ತಕ್ಷಣ, ಅವರ ಪೋಸ್ಟ್‌ನಲ್ಲಿ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. "ಅಭಿನಂದನೆಗಳು ಸರ್, 'ಮಹಾದೇವ' ನಿಮ್ಮ ಕುಟುಂಬದವರನ್ನು ಆಶೀರ್ವದಿಸಲಿ" ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ವಾವ್! ಅಭಿನಂದನೆಗಳು ಮೋಹಿತ್," ಎಂದು ಮತ್ತೊಬ್ಬರು ಬರೆದಿದ್ದಾರೆ. ಮೋಹಿತ್ ಜನವರಿ 2022 ರಲ್ಲಿ ಅದಿತಿಯೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಜನವರಿ 1 2022 ರಂದು ಮೋಹಿತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವಿವಾಹದ ದಿನದ ಫೋಟೋಗಳನ್ನು ಪೋಸ್ಟ್ ಮಾಡಿದರು.

ಇದನ್ನೂ ಓದಿ : ಹೊಸ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ: ಅಭಿಮಾನಿಗಳು ಹೀಗಂದ್ರು ನೋಡಿ!

ಈ ಪೋಸ್ಟ್‌ಗೆ ಶೀರ್ಷಿಕೆಯಾಗಿ, "ಪ್ರೀತಿ ಯಾವುದೇ ಅಡೆತಡೆಗಳನ್ನು ಗಮನಿಸುವುದಿಲ್ಲ. ಅದು ಅಡೆತಡೆಗಳನ್ನು ಜಿಗಿಯುತ್ತದೆ. ಬೇಲಿಗಳನ್ನು ಹಾರಿ, ಗೋಡೆಗಳನ್ನು ಭೇದಿಸುತ್ತದೆ. ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ. ಪ್ರೀತಿ ಭರವಸೆಯಿಂದ ತುಂಬಿರುವಂತದ್ದು, ನಮ್ಮ ಹೆತ್ತವರ ಆಶೀರ್ವಾದ ಹಾಗೂ ಭರವಸೆ ಇದೆ. ನಾವು ಇನ್ನು ಮುಂದೆ ಇಬ್ಬರಲ್ಲ, ಒಂದಾಗಿದ್ದೇವೆ. ಈ ಹೊಸ ಪ್ರಯಾಣದಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು.'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಅಮೆರಿಕದಲ್ಲಿ ಅದ್ಧೂರಿ ಸಮಾರಂಭ ಮುಗಿಸಿ ಭಾರತಕ್ಕೆ ಮರಳಿದ ಆಸ್ಕರ್​​ ವಿಜೇತರು

ಮೋಹಿತ್ ಅವರ ಸಿನಿಮಾ ಕ್ಷೇತ್ರದ ಸಾಧನೆ ಬಗ್ಗೆ ಹೇಳುವುದಾದರೆ, ''ದೇವೋನ್ ಕೆ ದೇವ್...ಮಹಾದೇವ್' ಸೀರಿಯಲ್​ನ ಪಾತ್ರದೊಂದಿಗೆ ಖ್ಯಾತಿ ಪಡೆದ ನಂತರ, ಮೋಹಿತ್ ಬಾಲಿವುಡ್ ಚಿತ್ರ URI: ದಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಕಾಣಿಸಿಕೊಂಡರು. ಅವರು ವೆಬ್-ಸರಣಿ ಕಾಫಿರ್, ಬಾಹುಕಾಲ್, ಮುಂಬೈ ಡೈರೀಸ್ 26/11 ನಲ್ಲೂ ಕಾಣಿಸಿಕೊಂಡರು. ಅವರು 'ಶಿದ್ದತ್' ಚಿತ್ರದಲ್ಲಿ ರಾಧಿಕಾ ಮದನ್, ಡಯಾನಾ ಪೆಂಟಿ ಮತ್ತು ಸನ್ನಿ ಕೌಶಲ್ ಅವರೊಂದಿಗೆ ಪರದೆಯಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್ ಆರತಕ್ಷತೆ: ರಾಹುಲ್​ ಗಾಂಧಿ, ಜಯಾ ಬಚ್ಚನ್​ ಸೇರಿದಂತೆ ಗಣ್ಯರು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.