ETV Bharat / entertainment

'ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಬೇಡಿ': ಮಲೈಕಾ ಅರೋರಾ ಪೋಸ್ಟ್​ಗೆ ಅವರ ಸ್ನೇಹಿತೆ ಹೀಗಂದಿದ್ಯಾಕೆ?

ನಟಿ ಮಲೈಕಾ ಅರೋರಾ ಪೋಸ್ಟ್​ಗೆ ಅವರ ಸ್ನೇಹಿತೆ ಮಾಡಿದ ಕಮೆಂಟ್​ ಸದ್ಯ ಟ್ರೋಲ್​ ಆಗಿದೆ.

author img

By

Published : Jul 14, 2023, 7:09 PM IST

Malaika Arora
ಮಲೈಕಾ ಅರೋರಾ

ಬಾಲಿವುಡ್ ನಟಿ ಮಲೈಕಾ ಅರೋರಾ ಈ ಬಾರಿ ತಮ್ಮ ಹೊಳಪಿನ ನೋಟದಿಂದ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಆದರೆ, ಅವರ ಗೆಳತಿ ಮಾಡಿದ ಕಮೆಂಟ್​ನಿಂದ ಟ್ರೋಲ್​ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಈ ತಾರೆ ಅಜೆರ್ಬೈಜಾನ್‌ನ ಬಾಕುದಲ್ಲಿ ತಮ್ಮ ಸ್ನೇಹಿತರೊಂದಿಗೆ ಟ್ರಿಪ್​ಗಾಗಿ ತೆರಳಿದ್ದರು. ಅಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಳ್ಳಲು ಮಲೈಕಾ ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಆ ಮೂಲಕ ಅಭಿಮಾನಿಗಳಿಗೆ ಟ್ರೀಟ್​ ನೀಡಿದರು.

Malaika Arora
ಮಲೈಕಾ ಅರೋರಾ ಪೋಸ್ಟ್ ಕಮೆಂಟ್ಸ್​

ಬಾಕುದಿಂದ ಮಲೈಕಾ ಅರೋರಾ ಅವರ ಫೋಟೋ ಹಂಚಿಕೊಳ್ಳಲಾಗಿದೆ. ಲೌಂಜ್ ವೇರ್‌ನಲ್ಲಿ ಹ್ಯಾಂಡ್‌ಬ್ಯಾಗ್ ಮತ್ತು ಸೂಟ್‌ಕೇಸ್‌ನೊಂದಿಗೆ ವಿಮಾನ ನಿಲ್ದಾಣದಿಂದ ಹೊರ ನಡೆಯುತ್ತಿರುವ ಅವರ ಪರಿಪೂರ್ಣ ಚಿತ್ರ ಇದಾಗಿದೆ. ಅಷ್ಟರಲ್ಲಿ ನಟಿಯ ಆಪ್ತರೊಬ್ಬರು ಅವರನ್ನು ಚುಡಾಯಿಸುತ್ತಾ ಕೇವಲ ಒಂದು ಸೂಟ್‌ಕೇಸ್ ತೋರಿಸಿ ನಮ್ಮನ್ನು ಮೋಸಗೊಳಿಸಬೇಡಿ ಎಂದು ಹೇಳಿದರು. ಇದು ಟ್ರೋಲ್​ಗೆ ಆಹ್ವಾನ ನೀಡಿದೆ.

ಇನ್​ಸ್ಟಾದಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡ ಮಲೈಕಾ ಅರೋರಾ, ರಜಾದಿನದ ನೆನಪುಗಳು, ದೃಶ್ಯವೀಕ್ಷಣೆ, ಫುಡ್​ ಮತ್ತು ಶಾಪಿಂಗ್ ಮಾಡುವುದು ಎಂದು ಹೇಳಿದ್ದಾರೆ. "ಮೊದಲ ದಿನ. ಬಾಕು ಫೋಟೋ ಡಂಪ್ #makinmemories #sightseeing #food #shopping" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಚಿತ್ರಗಳಲ್ಲಿ ನಟಿ ಹೊಳಪಿನ ನೋಟ ನೀಡಿದ್ದಾರೆ.

ಇದನ್ನೂ ಓದಿ: 'Baby'ಯಾಗಿ ಬಂದ ವಿಜಯ್​ ದೇವರಕೊಂಡ ಸಹೋದರ: ಆನಂದ್​ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು..​

ಅವರ ಮೊದಲ ಚಿತ್ರಕ್ಕೆ ಪ್ರತಿಕ್ರಿಯಿಸಿದ ಆಕೆಯ ಫ್ಯಾಶನ್ ಡಿಸೈನರ್ ಸ್ನೇಹಿತೆ ರಿಕ್ ರಾಯ್, "ನೀವು ಒಟ್ಟು ಎಷ್ಟು ಟ್ರಂಕ್‌ಗಳನ್ನು ಒಯ್ದಿದ್ದೀರಿ. 1 ಸಣ್ಣ ಸೂಟ್ಕೇಸ್ ಅನ್ನು ತೋರಿಸುವ ಮೂಲಕ ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಬೇಡಿ. ನಿಜ ಹೇಳಿ" ಎಂದಿದ್ದಾರೆ. ಇದಕ್ಕೆ ಮಲೈಕಾ ಅರೋರಾ ಪ್ರತಿಕ್ರಿಯಿಸಿ, "ನೀವು ನನ್ನನ್ನು ತಿಳಿದಿದ್ದೀರಿ. ನಾನು ತುಂಬಾ ಹಗುರವಾಗಿ ಪ್ರಯಾಣಿಸುತ್ತೇನೆ." ಎಂದು ಉತ್ತರಿಸಿದ್ದಾರೆ. ಸದ್ಯ ಈ ಕಮೆಂಟ್​ ಟ್ರೋಲ್​ ಆಗಿದೆ.

ಮಲೈಕಾ ಅರೋರಾ ಬಗ್ಗೆ.. ಮಲೈಕಾ ಅರೋರಾ ಫಿಟ್ನೆಸ್​ ಮತ್ತು ಫ್ಯಾಷನ್​ಗೆ ಫೇಮಸ್​. ಇವರು ತಮ್ಮ ಆರೋಗ್ಯಕರ ಜೀವನಶೈಲಿ ಮತ್ತು ನಿಷ್ಪಾಪ ಫ್ಯಾಷನ್ ಆಯ್ಕೆಗಳಿಗಾಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 49 ವರ್ಷದ ಈ ನಟಿ ತಮ್ಮದೇ ಫಟ್ನೆಸ್​ ಸ್ಟುಡಿಯೋ ಹೊಂದಿದ್ದು, ಫುಡ್​ ಡೆಲಿವರ್​ ಸರ್ವಿಸ್​ ನ್ಯೂಡ್​ ಬೌಲ್​​ ಅನ್ನು ಕೂಡ ನಿರ್ವಹಿಸುತ್ತಿದ್ದಾರೆ. ಜೊತೆಗೆ ದಿ ಲೇಬಲ್​ ಲೈಫ್​​ ಕ್ಲಾತ್​​ ಬ್ರಾಂಡ್​ನ ಸ್ಟೈಲ್​ ಎಡಿಟರ್​ ಕೂಡ ಆಗಿದ್ದಾರೆ.

ಅವರು ಸೋಷಿಯಲ್​ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಹೆಚ್ಚು ಸನಿಹವಾಗಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಫ್ಯಾನ್ಸ್​ ಕೂಡ ಅವರು ಹೆಚ್ಚಿನದಕ್ಕಾಗಿ ಹಂಬಲಿಸುತ್ತಾರೆ ಮತ್ತು ಅವರ ಮನಮೋಹಕ ಜೀವನದ ಮುಂದಿನ ನೋಟಕ್ಕಾಗಿ ನಿರೀಕ್ಷಿಸುತ್ತಾರೆ. ನಟಿ ಮಲೈಕಾ- ಅರ್ಬಜ್​ ಖಾನ್​ ಅವರೊಂದಿಗೆ ವಿಚ್ಛೇದನ ಬಳಿಕ ನಟ ಅರ್ಜುನ್​ ಕಪೂರ್​​ ಜೊತೆಗೆ ಡೇಟಿಂಗ್​ನಲ್ಲಿದ್ದಾರೆ.

ಇದನ್ನೂ ಓದಿ: Dil Se Dil Tak: ರೊಮ್ಯಾಂಟಿಕ್​ ಸಿನಿಮಾದ 'ದಿಲ್ ಸೆ ದಿಲ್ ತಕ್' ಹಾಡು ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.