2018ರಲ್ಲಿ ತೆರೆಕಂಡ 'ಲಸ್ಟ್ ಸ್ಟೋರಿಸ್' ವೆಬ್ ಸೀರಿಸ್ನ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದೆ. 'ಲಸ್ಟ್ ಸ್ಟೋರೀಸ್ 2' ಶೀರ್ಷಿಕೆಯ ಸರಣಿಯು ಜೂನ್ 29ರಿಂದ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸೀರಿಸ್ ತಂಡ ಟ್ರೇಲರ್ ಬಿಡುಗಡೆ ಮಾಡಿದ್ದು ಹೆಚ್ಚು ವೀಕ್ಷಣೆ ಪಡೆಯುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಟ್ರೇಲರ್ ಶೇರ್ ಮಾಡಿದ್ದು, "ಎಷ್ಟು Lust (ಕಾಮ) ಎಂದರೆ? ನೀವೇ ತಿಳಿದುಕೊಳ್ಳಿ, #LustStories2 ಜೂನ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಪ್ರಸಾರ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ. ಈ ವೆಬ್ ಸೀರಿಸ್ 'Lust' ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ.
ನಟರಾದ ಕಾಜೋಲ್, ನೀನಾ ಗುಪ್ತಾ, ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಅಂಗದ್ ಬೇಡಿ, ಅಮೃತಾ ಶುಭಾಷ್, ತಿಲೋಟಮಾ ಶೋಮ್, ಕುಮುದ್ ಮಿಶ್ರಾ ಸೇರಿದಂತೆ ಹಲವರು ಸೀರಿಸ್‌ನಲ್ಲಿ ನಟಿಸಿದ್ದಾರೆ. ಈ ತಾರಾಗಣವನ್ನು ಹೊರತುಪಡಿಸಿ, ಇಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ತಮನ್ನಾ ಮತ್ತು ವಿಜಯ್ ಜೋಡಿಯ ಕೆಮಿಸ್ಟ್ರಿ.
ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಲವ್ ಬರ್ಡ್ಸ್ ತಮನ್ನಾ ಮತ್ತು ವಿಜಯ್ ವರ್ಮಾ ಈ ಸರಣಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದು ಸೀರಿಸ್ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ. ಈ ಸೀರಿಸ್ನ ಶೂಟಿಂಗ್ ಸೆಟ್ನಲ್ಲಿಯೇ ಈ ಜೋಡಿಯ ಪ್ರೇಮಾಂಕುರವಾಗಿದೆ ಎಂದು ಹೇಳಲಾಗಿದೆ. ಇತ್ತೀಚಿನ ಸಂದರ್ಶನಗಳಲ್ಲಿ ಪರಸ್ಪರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಯೂ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: "ಪ್ರೇಕ್ಷಕರು ಇಷ್ಟಪಡಲಿ, ಇಲ್ಲದಿರಲಿ ಕಥೆ ಇರುವುದೇ ಹಾಗೆ": ಹಸಿಬಿಸಿ ದೃಶ್ಯಗಳ ಬಗ್ಗೆ ತಮನ್ನಾ ಭಾಟಿಯಾ ಸ್ಪಷ್ಟನೆ ಹೀಗಿದೆ..
2018ರಲ್ಲಿ ಮೊದಲ ಸೀಸನ್ ಬಂದಾಗ ಒಟಿಟಿ ವೇದಿಕೆಗಳು ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಲಾಕ್‌ಡೌನ್ ನಂತರ ಎಲ್ಲವೂ ಬದಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಒಟಿಟಿಯಲ್ಲಿ ಸಿನಿಮಾ ಮತ್ತು ಧಾರಾವಾಹಿಗಳನ್ನು ನೋಡುತ್ತಿದ್ದಾರೆ. ಅದೂ ಅಲ್ಲದೇ ಈ ಸೀಸನ್ನಲ್ಲಿ ಕಾಜೋಲ್, ಮೃಣಾಲ್, ತಮನ್ನಾ, ವಿಜಯ್ ಸೇರಿದಂತೆ ಬಹುತೇಕ ತಾರೆಯರು ಇರುವುದರಿಂದ ಅಭಿಮಾನಿಗಳು ಈ ಸೀಸನ್ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 29ರಿಂದ ಲಸ್ಟ್ ಸ್ಟೋರಿಸ್ 2 ಪ್ರಸಾರಗೊಳ್ಳಲಿದೆ.
ಇದನ್ನೂ ಓದಿ: 'ಲಸ್ಟ್ ಸ್ಟೋರೀಸ್ 2' ಸೆಟ್ನಲ್ಲಿ ಅರಳಿದ ವಿಜಯ್ ವರ್ಮಾ-ತಮನ್ನಾ ಭಾಟಿಯಾ ಪ್ರೇಮ
ಕಿರಿ ವಯಸ್ಸಿಗೆ ಬಣ್ಣದ ಲೋಕ ಪ್ರವೇಶಿಸಿದ ತಮನ್ನಾ ಭಾಟಿಯಾ ಚಿತ್ರರಂಗದಲ್ಲಿ ಸುಮಾರು 18 ವರ್ಷ ಪೂರೈಸಿದ್ದಾರೆ. ಈವರೆಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ 'ಲಸ್ಟ್ ಸ್ಟೋರೀಸ್ 2' ಮತ್ತು ಜೀ ಕರ್ದಾ ಸೀರಿಸ್‌ನಲ್ಲಿ ಹುಬ್ಬೇರಿಸುವಂತಹ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳು, ವೀಕ್ಷಕರಿಂದ ಟೀಕೆಗಳನ್ನೂ ಸಹ ಸ್ವೀಕರಿಸಬೇಕಾಯಿತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ಕಥೆಗೆ ತಕ್ಕಂತೆ ನಟಿಸಿದ್ದೇನೆ. ಪ್ರೇಕ್ಷಕರು ಇಷ್ಟ ಪಡಲಿ, ಇಲ್ಲದಿರಲಿ ಕಥೆ ಇರುವುದೇ ಹಾಗೆ" ಎಂದು ಸಮರ್ಥಿಸಿಕೊಂಡಿದ್ದರು.