ETV Bharat / entertainment

ಶೀಘ್ರದಲ್ಲೇ 'ಕೌನ್ ಬನೇಗಾ ಕರೋಡ್​​​ಪತಿ ಸೀಸನ್​ 15': ಈ ಬಾರಿ ಹೊಸ ಲುಕ್​ನಲ್ಲಿ ಬಿಗ್​ ಬಿ​ ನಿಮ್ಮ ಮುಂದೆ.. - ಈಟಿವಿ ಭಾರತ ಕನ್ನಡ

'ಕೌನ್ ಬನೇಗಾ ಕರೋಡ್ಪತಿ ಸೀಸನ್​ 15' ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಈ ಬಾರಿ ನಟ ಅಮಿತಾಭ್​ ಬಚ್ಚನ್​ ಹೊಸ ಲುಕ್​ನೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ.

kaun banega crorepati season 15
ಕೌನ್ ಬನೇಗಾ ಕರೋಡ್ಪತಿ
author img

By

Published : Aug 5, 2023, 1:47 PM IST

ಬಾಲಿವುಡ್​ ಸೂಪರ್​ಸ್ಟಾರ್​, ಹಿರಿಯ ನಟ ಅಮಿತಾಭ್​ ಬಚ್ಚನ್​ 'ಕೌನ್ ಬನೇಗಾ ಕರೋಡ್​​​ಪತಿ' ಶೋ ಮೂಲಕ ಮತ್ತೊಮ್ಮೆ ನಿಮ್ಮನ್ನು ರಂಜಿಸಲು ಸಿದ್ಧರಾಗಿದ್ದಾರೆ. ಸೀಸನ್​ 15 ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಬಾರಿ ಕಾರ್ಯಕ್ರಮದ ಕೆಲವು ನಿಯಮಗಳು ಮತ್ತು ಸ್ವರೂಪಗಳನ್ನು ಬದಲಾಯಿಸಲಾಗಿದೆ. ಅಮಿತಾಭ್​ ಬಚ್ಚನ್​ ಅವರ ಲುಕ್​ನಲ್ಲಿಯೂ ಚೇಂಜಸ್​ ಮಾಡಲಾಗಿದೆ. ​ಪ್ರತಿ ಸೀಸನ್​ನಲ್ಲಿಯೂ ನಟನನ್ನು ಅದ್ಭುತವಾಗಿ ಕಾಣುವಂತೆ ಮಾಡುವಲ್ಲಿ ಫ್ಯಾಷನ್​ ಡಿಸೈನರ್​ ಪ್ರಿಯಾ ಪಾಟೀಲ್​ ಪ್ರಮುಖ ಪಾತ್ರ ವಹಿಸುತ್ತಾರೆ.

ಪ್ರಿಯಾ ಪಾಟೀಲ್​ ಅವರು ಈ ಬಾರಿ ಅಮಿತಾಭ್​ ಬಚ್ಚನ್​ ಅವರನ್ನು ಹೊಸ ಫ್ಯಾಷನ್​ ಟ್ರೆಂಡ್​ನೊಂದಿಗೆ ಪರಿಚಯಿಸಲಿದ್ದಾರೆ. 'ಕೌನ್ ಬನೇಗಾ ಕರೋಡ್​​ಪತಿ' ಬದಲಾವಣೆ ಬಗ್ಗೆ ಮಾತನಾಡಿದ ಪ್ರಿಯಾ, "KBC ಸೀಸನ್​ 15 ಗಾಗಿ ನಾವು ಹೊಸತನವನ್ನು ತರಲು ಚಿಂತಿಸಿದ್ದೇವೆ. ಕ್ಲಾಸಿಕ್​ ನೋಟವನ್ನು ಹಾಗೆಯೇ ಇರಿಸಿಕೊಂಡು, ಅದಕ್ಕೆ ಒಂದಿಷ್ಟು ಅಂಶಗಳನ್ನು ಸೇರಿಸಿದ್ದೇವೆ. ಆ ಮೂಲಕ ನಾವು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ" ಎಂದು ಹೇಳಿದ್ದಾರೆ.

ಮುಂದುವರೆದು, "ಅಮಿತಾಭ್​ ಬಚ್ಚನ್​ ಸರ್ ಅವರು ಕ್ಲಾಸಿಕ್​ ತ್ರೀ ಪೀಸ್​ ಸೂಟ್ಸ್​, ಬಂಧಗಲಾಸ್​ ಮತ್ತು ಜೋಧ್​ಪುರಿ ಸ್ಟೈಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇದರಲ್ಲಿ ನಾನು ಕಲರ್ ಪ್ಲೇ ಅನ್ನು ಪರಿಚಯಿಸುತ್ತಿದ್ದೇನೆ. ಪ್ಯಾಟರ್ನ್​ಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದೇನೆ. ನೇವಿ, ಬ್ಲಾಕ್​ ಆಂಡ್​ ವೈಟ್​, ಪೌಡರ್​ ಬ್ಯೂ ಆಂಡ್​ ನೇವಿ ಈ ರೀತಿಯ ಬಣ್ಣಗಳ ಫ್ಯಾಷನ್​ ಡ್ರೆಸ್​ಗಳನ್ನು ಈ ಬಾರಿ ಆಯ್ದುಕೊಂಡಿದ್ದೇನೆ" ಎಂದು ಪ್ರಿಯಾ ಪಾಟೀಲ್​ ತಿಳಿಸಿದರು.

ಇದನ್ನೂ ಓದಿ: 13 ವರ್ಷಗಳ ಹಿಂದಿನ ಟ್ವೀಟ್ ಈಗ ವೈರಲ್​: ಅಮಿತಾಭ್​ ಬಚ್ಚನ್​​ ಟ್ರೋಲ್​​ - ಕೌನ್​​ ಬನೇಗಾ ಕರೋಡ್​​​ಪತಿಯಲ್ಲಿ ಪ್ರಶ್ನಿಸಿ ಎಂದ ನೆಟ್ಟಿಗರು!

ಅಮಿತಾಭ್​ ಬಚ್ಚನ್​ ಅವರಿಗೆ ಫ್ಯಾಷನ್​ ಡಿಸೈನರ್​ ಆಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ಪ್ರಿಯಾ, "ಅಮಿತಾಭ್​ ಬಚ್ಚನ್​ ಸರ್ ಒಂದು ದಂತಕಥೆ. ನಾನು ಅವರನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದೇನೆ. ಅವರಿಂದ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆ ವೃತ್ತಿ ಮೇಲಿರುವ ಸಮರ್ಪಣೆ ಎಲ್ಲವನ್ನೂ ನಾನು ಗಮನಿಸಿದ್ದೇನೆ. ಸರ್​ಗೆ ಯಾವುದೇ ಸ್ಟೈಲಿಶ್​ ಅಗತ್ಯವಿಲ್ಲ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಏಕೆಂದರೆ ಅವರು ಸ್ವತಃ ಸ್ಟೈಲಿಶ್​ ಐಕಾನ್​. ಒಬ್ಬ ವ್ಯಕ್ತಿಯನ್ನು ಬಟ್ಟೆ ಟ್ರೆಂಡ್​ ಮಾಡುವುದಿಲ್ಲ. ವ್ಯಕ್ತಿಯೇ ಬಟ್ಟೆಯನ್ನು ಟ್ರೆಂಡ್​ ಆಗುವಂತೆ ಮಾಡುತ್ತಾರೆ. ಅಮಿತಾಭ್​ ಬಚ್ಚನ್​ ಯಾವ ದಿರಿಸು ಧರಿಸಿದರೂ ಅದು ಟ್ರೆಂಡ್​ ಆಗುತ್ತದೆ. ಅವರು ಯಾವಾಗಲೂ ಎಲ್ಲ ತಲೆಮಾರು ಜನರಿಗೂ ಸ್ಫೂರ್ತಿಯಾಗಿದ್ದಾರೆ" ಎಂದು ಹೇಳಿದರು. 'ಕೌನ್ ಬನೇಗಾ ಕರೋಡ್ಪತಿ ಸೀಸನ್​ 15' ಆಗಸ್ಟ್​ 14 ರಂದು ಸೋನಿ ಚಾನೆಲ್​ನಲ್ಲಿ ಪ್ರಸಾರವಾಗಲಿದೆ.

ಅಮಿತಾಭ್​​ ಬಚ್ಚನ್ ಸಿನಿಮಾ: ಬಿಗ್​ ಬಿ ಮುಂದಿನ ಸಿನಿಮಾ 'ಕಲ್ಕಿ 2898 ಎಡಿ' (ಪ್ರಾಜೆಕ್ಟ್ ಕೆ). ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ದಿಶಾ ಪಟಾನಿ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಮತ್ತು ಉತ್ತರ ಚಿತ್ರರಂಗದ ಹಿರಿಯ ನಟರು ಸೇರಿ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ಲುಕ್: 'ಬಾರ್ಬಿ'ಗೆ ಹೋಲಿಸಿದ ನೆಟ್ಟಿಗರು​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.