ETV Bharat / entertainment

'ದೇವರ' ಚಿತ್ರದ ಶೂಟಿಂಗ್​ಗಾಗಿ ಗೋವಾಗೆ ತೆರಳಲಿರುವ ಜೂ.ಎನ್​ಟಿಆರ್​, ಜಾನ್ವಿ ಕಪೂರ್​

author img

By ETV Bharat Karnataka Team

Published : Oct 21, 2023, 7:14 PM IST

2024ರ ಬಹುನಿರೀಕ್ಷಿತ ಚಿತ್ರ 'ದೇವರ' ಶೂಟಿಂಗ್​ಗಾಗಿ ಜೂ.ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಗೋವಾಕ್ಕೆ ತೆರಳಲಿದ್ದಾರೆ.

Jr NTR and Janhvi Kapoor goa trip for devara movie shooting
'ದೇವರ' ಚಿತ್ರದ ಶೂಟಿಂಗ್​ಗಾಗಿ ಗೋವಾಗೆ ತೆರಳಲಿರುವ ಜೂ.ಎನ್​ಟಿಆರ್​, ಜಾನ್ವಿ ಕಪೂರ್​

'ಆರ್​ಆರ್​ಆರ್​' ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಕ್ರೇಜ್​ ಗಿಟ್ಟಿಸಿಕೊಂಡಿರುವ ಟಾಲಿವುಡ್​ ನಟ​ ಜೂನಿಯರ್​ ಎನ್​ಟಿಆರ್​ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಇತ್ತೀಚೆಗಿನ ಮಾಹಿತಿ ಪ್ರಕಾರ, ನಟ ಕೆಲವೇ ದಿನಗಳಲ್ಲಿ ಗೋವಾಕ್ಕೆ ತೆರಳಲಿದ್ದಾರೆ.

ಜೂ.ಎನ್‌ಟಿಆರ್ ಮತ್ತು ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್​ ಕಾಂಬಿನೇಶನ್​ನ 'ದೇವರ' ಮುಂದಿನ ವರ್ಷ ತೆರೆ ಕಾಣಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈಗಾಗಲೇ 'ದೇವರ' ಕುರಿತು ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಈಗಾಗಲೇ ಹಲವು ಕಡೆಗಳಲ್ಲಿ 'ದೇವರ' ಚಿತ್ರೀಕರಣ ಮಾಡಲಾಗಿದೆ. ಹೈದರಾಬಾದ್​ನಲ್ಲಿ ವಿಶೇಷ ಸೆಟ್​ನಲ್ಲಿ ಸಾಹಸ ದೃಶ್ಯಗಳನ್ನು ಶೂಟಿಂಗ್​ ಮಾಡಲಾಗಿದೆ. ಇದೀಗ ಹೊಸ ಶೆಡ್ಯೂಲ್​ಗಾಗಿ ಚಿತ್ರತಂಡ ಗೋವಾಕ್ಕೆ ತೆರಳಲಿದ್ದಾರೆ.

ಅಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ನಡುವಿನ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂದು ತಿಳಿದುಬಂದಿದೆ. ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆಗೊಳಿಸಲು ಪ್ಲಾನ್​ ಮಾಡಿದ್ದಾರೆ. ಚಿತ್ರವನ್ನು ಕಲ್ಯಾಣ್​ ರಾಮ್​ ನಿರ್ಮಾಣ ಮಾಡುತ್ತಿದ್ದಾರೆ. ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಪ್ರಮುಖ ಪಾತ್ರದಲ್ಲಿದ್ದಾರೆ. ಯುವ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದೇವರ ಮೊದಲ ಭಾಗ ಮುಂದಿನ ವರ್ಷ ಏಪ್ರಿಲ್‌ 5ರಂದು ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಜೂ. ಎನ್​ಟಿಆರ್ 'ದೇವರ' ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ: 6ರ ಹರೆಯದ ಅಲ್ಲು ಅರ್ಹಾ ಸಂಭಾವನೆ ಕೇಳಿದ್ರೆ ತಲೆತಿರುಗುತ್ತೆ!

ಜಾನ್ವಿ ಕಪೂರ್​ ಸೆಕೆಂಡ್​ ಶೆಡ್ಯೂಲ್​ ಶುರು: 'ದೇವರ' ಸಿನಿಮಾದ ಶೂಟಿಂಗ್​ಗಾಗಿ ಚಿತ್ರತಂಡದೊಂದಿಗೆ ಗೋವಾಗೆ ತೆರಳಲಿರುವ ಜಾನ್ವಿ ಕಪೂರ್​ ಅಕ್ಟೋಬರ್​ನಿಂದ ಮುಂದಿನ ವರ್ಷ ಜನವರಿವರೆಗೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಾರೆ. ಮೂಲಗಳ ಪ್ರಕಾರ, ಬಾಲಿವುಡ್​ ತಾರೆ ಅಕ್ಟೋಬರ್​ 24ರಿಂದ ಜೂ.ಎನ್​ಟಿಆರ್​ ಜೊತೆ 'ದೇವರ' ಎರಡನೇ ಶೆಡ್ಯೂಲ್​ ಪ್ರಾರಂಭಿಸಲಿದ್ದಾರೆ. ನಟಿ ಮೊದಲ ಶೆಡ್ಯೂಲ್​ ಅನ್ನು ಕೇವಲ ಮೂರು ದಿನಗಳಲ್ಲಿ ಚಿತ್ರೀಕರಿಸಿದ್ದಾರೆ. ಮುಂದಿನ ವೇಳಾಪಟ್ಟಿಯನ್ನು ಮೂರರಿಂದ ನಾಲ್ಕು ತಿಂಗಳವರೆಗೆ ವಿಸ್ತರಿಸಲಾಗುವುದು.

ದೇವರ ಜಗತ್ತು ಒಂದು ಹೊಸ ಅನುಭವ: ನಿರ್ದೇಶಕ ಕೊರಟಾಲ ಶಿವ ಮಾಹಿತಿ ಪ್ರಕಾರ, ದೇವರ ಜಗತ್ತು ಒಂದು ಹೊಸ ಅನುಭವ. ನಿರೂಪಣೆ ಬೃಹತ್ ಪ್ರಮಾಣದಲ್ಲಿದ್ದು, ಹಲವು ಪಾತ್ರವರ್ಗಗಳನ್ನು ಆಹ್ವಾನಿಸಿತು. ಒಂದೆರಡು ಶೆಡ್ಯೂಲ್‌ಗಳ ನಂತರ, ಎಡಿಟ್ ಸೂಟ್​ನಲ್ಲಿ ಯಾವ ದೃಶ್ಯ ಕತ್ತರಿಸಬೇಕೆಂದು ನಿರ್ಧರಿಸುವುದು ಕಷ್ಟಕರವಾಗಿತ್ತು. ಚಿತ್ರೀಕರಿಸಿದ ಎಲ್ಲ ದೃಶ್ಯಗಳು ಮಹತ್ವವಾದದ್ದೇ. ಹಾಗಾಗಿ ಚಿತ್ರತಂಡ ಸಿನಿಮಾವನ್ನು ವಿಸ್ತರಿಸಲು ನಿರ್ಧಾರ ಕೈಗೊಂಡಿತು. ಈ ಹಿನ್ನೆಲೆಯಲ್ಲಿ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯೂ ಹೇರ್​ಸ್ಟೈಲ್​ನಲ್ಲಿ ತಾರಕ್​ ಹ್ಯಾಂಡ್ಸಮ್​: ಜೂನಿಯರ್​ ಎನ್​ಟಿಆರ್​ ಹೊಸ ಲುಕ್​ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.