ETV Bharat / entertainment

'ಕೆಜಿಎಫ್​ 2' ಹಿಂದಿಕ್ಕಿ ದೇಶದ 4ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ 'ಜವಾನ್​' - ಈಟಿವಿ ಭಾರತ ಕನ್ನಡ

ಜವಾನ್ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಿ ಭಾರತದ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.

Jawan
ಜವಾನ್​'
author img

By ETV Bharat Karnataka Team

Published : Sep 19, 2023, 10:47 PM IST

ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ 'ಜವಾನ್'​ ಸಿನಿಮಾ ಸೆಪ್ಟೆಂಬರ್​ ​ 7 ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್​ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಬಾದ್​ ಶಾ ಸೇರಿದಂತೆ ನಯನತಾರಾ, ವಿಜಯ್​ ಸೇತುಪತಿ ಅವರಿಗೂ 'ಜವಾನ್​' ಉತ್ತಮ ಹೆಸರು ತಂದುಕೊಟ್ಟಿದೆ. ಜೊತೆಗೆ ದಿನಕ್ಕೊಂದು ದಾಖಲೆ ಬರೆಯುತ್ತಿದೆ.

ವ್ಯಾಪಾರ ವಿಶ್ಲೇಷಕ ತರಣ್​ ಆದರ್ಶ್ ಅವರು ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಂದು ದಾಖಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾರುಖ್​ ಖಾನ್​ ಅವರ 'ಜವಾನ್'​ ಚಿತ್ರ ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ. ಬಾಹುಬಲಿ 2, ಗದರ್​ 2 ಮತ್ತು ಪಠಾಣ್​ ನಂತರ 'ಜವಾನ್'​ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿದೆ. ಭಾರಿ ಕಲೆಕ್ಷನ್​ ಮಾಡುವ ಮೂಲಕ ಯಶ್​ ಅವರ ಕೆಜಿಎಫ್​ 2 ಅನ್ನು ಹಿಂದಿಕ್ಕಿದೆ.

'ಜವಾನ್​' ಸಿನಿಮಾ ಶುಕ್ರವಾರ 18.10 ಕೋಟಿ ರೂಪಾಯಿ, ಶನಿವಾರ 30.10 ಕೋಟಿ ರೂ., ಭಾನುವಾರ 34.26 ಕೋಟಿ ರೂ., ಸೋಮವಾರ 14.25 ಕೋಟಿ ರೂಪಾಯಿ ಗಳಿಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಇದುವರೆಗೆ ಒಟ್ಟು 444.69 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ 1000 ಕೋಟಿ ರೂಪಾಯಿ ದಾಟಲು ಹೆಚ್ಚೇನು ದಿನ ದೂರವಿಲ್ಲ. ಕೆಲವೇ ದಿನಗಳಲ್ಲಿ ಜವಾನ್​ ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಲಿದೆ. ದಿನಕ್ಕೊಂದು ದಾಖಲೆಯನ್ನು ಬರೆಯುತ್ತಾ ಇತಿಹಾಸವನ್ನು ಬರೆಯುತ್ತಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ ಬರೆದ ಶಾರುಖ್​ ಖಾನ್​​ರ 'ಜವಾನ್​' ಸಿನಿಮಾ..

ಇತ್ತೀಚೆಗೆ ಜವಾನ್​​ ಸಕ್ಸಸ್ ಪ್ರೆಸ್​ ಮೀಟ್​ ನಡೆದಿತ್ತು. ಅಟ್ಲೀ ಕುಮಾರ್​ ಅಂದು ಚಿತ್ರದ ಬಜೆಟ್​​ ಬಹಿರಂಗಪಡಿಸಿದ್ದರು. 300 ಕೋಟಿ ರೂ. ಅಧಿಕ ಬಂಡವಾಳ ಹೂಡಲಾಗಿದೆ ಎಂದು ತಿಳಿಸಿದ್ದು, ಸದ್ಯ ಹಾಕಿದ ಹಣ ವಾಪಸ್​ ಬಂದಂತಾಗಿದೆ. ಶುಕ್ರವಾರ ನಡೆದ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಅನಿರುಧ್ ರವಿಂದರ್​ ಉಪಸ್ಥಿತರಿದ್ದರು. ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಯನತಾರಾ ಅವರು ಪಾರ್ಟಿಯಲ್ಲಿ ಗೈರಾಗಿದ್ದರು. ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ, ಅಭಿಮಾನಿಗಳು ಮತ್ತು ವಿಮರ್ಷಕರಿಂದ ಸಕಾರಾತ್ಮಕ ವಿಮರ್ಷೆ ಪಡೆದುಕೊಂಡಿದೆ.

ಶಾರುಖ್​ ಹಾಗೂ ಗೌರಿ ದಂಪತಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​​ ಜವಾನ್​ ಚಿತ್ರಕ್ಕೆ ಬಂಡವಾಳ ಹೂಡಿದೆ. ಸೆಪ್ಟೆಂಬರ್​ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಯಿತು. ಕಿಂಗ್​ ಖಾನ್​ ಜೊತೆ ಸೌತ್​ ಲೇಡಿ ಸೂಪರ್​ಸ್ಟಾರ್ ನಯನತಾರಾ ಮತ್ತು ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್​ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ನರ್ವಸ್​ ಆಗಿದ್ದೆ, ಮತ್ತೆ ಇಂಡಸ್ಟ್ರಿಗೆ ಮರಳುವಲ್ಲಿ ಆರ್ಯನ್​ ಖಾನ್​ ಪಾತ್ರ ಪ್ರಮುಖವಾಗಿತ್ತು': ಶಾರುಖ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.