ETV Bharat / entertainment

ಭಾರತದಲ್ಲಿ ₹300 ಕೋಟಿ ಕ್ಲಬ್​ ಸೇರಿದ 'ಜವಾನ್'​; ಐದನೇ ದಿನದ ಕಲೆಕ್ಷನ್​ ಎಷ್ಟು? - ಈಟಿವಿ ಭಾರತ ಕನ್ನಡ

Jawan box office Collection Day 5: 'ಜವಾನ್'​ ಸಿನಿಮಾ ಬಿಡುಗಡೆಯಾದ ಐದನೇ ದಿನದಂದು 30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದು, ಭಾರತದಲ್ಲಿ ಯಶಸ್ವಿಯಾಗಿ ₹300 ಕೋಟಿ ಕ್ಲಬ್​ ಪ್ರವೇಶಿಸಿದೆ.

jawan box office Collection Day 5
'ಜವಾನ್'
author img

By ETV Bharat Karnataka Team

Published : Sep 12, 2023, 10:47 AM IST

ಬಾಲಿವುಡ್​ ನಟ ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜವಾನ್​' ಸೆಪ್ಟೆಂಬರ್​ 7ರಂದು ಬಿಡುಗಡೆಯಾಗಿ ಪ್ರತಿದಿನವೂ ಹೊಸ ಹೊಸ ದಾಖಲೆ ಬರೆಯುತ್ತಿದೆ. ಮೊದಲ ದಿನವೇ 75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಭಾರತದಲ್ಲಿ ಭರ್ಜರಿ ಓಪನಿಂಗ್​ ಪಡೆದ ಮೊದಲ​ ಹಿಂದಿ ಚಿತ್ರವಿದು. ಅಲ್ಲದೇ ನಾಲ್ಕನೇ ದಿನದಂದು ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಅತ್ಯಂತ ವೇಗವಾಗಿ ಇಷ್ಟೊಂದು ಕಲೆಕ್ಷನ್​ ಮಾಡಿದ ಬಾಲಿವುಡ್​ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಐದನೇ ದಿನದ ಕಲೆಕ್ಷನ್​ ವಿವರ ಹೊರಬಿದ್ದಿದೆ.

ಐದನೇ ದಿನದ ಗಳಿಕೆ: 'ಜವಾನ್​' ಸಿನಿಮಾ ಕಳೆದ ಗುರುವಾರ ತೆರೆ ಕಂಡಿತು. ಮೊದಲ ದಿನ ದೇಶದಲ್ಲಿ 75 ಕೋಟಿ ರೂಪಾಯಿ ಕಲೆಕ್ಷನ್​ನೊಂದಿಗೆ ಭರ್ಜರಿ ಓಪನಿಂಗ್​ ಪಡೆಯಿತು. ಎರಡನೇ ದಿನ ಕೊಂಚ ಕಡಿಮೆ ಎನಿಸಿದರೂ 53 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಸಿತು. ಈವರೆಗಿನ ಅತ್ಯಧಿಕ ಕಲೆಕ್ಷನ್​ ಇದಾಗಿದೆ. ಇದೀಗ ಐದನೇ ದಿನದಂದು ಕೊಂಚ ಕುಸಿತ ಕಂಡಿದ್ದು, 28 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಆದರೆ, ನಿನ್ನೆ (ಸೋಮವಾರ) ಪಾಕಿಸ್ತಾನ ಮತ್ತು ಭಾರತ ರೋಚಕ ಪಂದ್ಯದ ನಡುವೆಯೂ ಜವಾನ್​ ಸಿನಿಮಾ ಇಷ್ಟೊಂದು ಕಲೆಕ್ಷನ್​ ಮಾಡಿರುವುದು ನಿಜಕ್ಕೂ ಗಮನಾರ್ಹ. ಐದನೇ ಕಲೆಕ್ಷನ್​ನೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್​ ಭಾರತದಲ್ಲಿ 300 ಕೋಟಿ ರೂಪಾಯಿ ದಾಟಿದೆ. ಈ ಮೂಲಕ 2023ರ ಅತಿ ದೊಡ್ಡ ಹಿಂದಿ ಬ್ಲಾಕ್​ಬಸ್ಟರ್​ಗಳಲ್ಲಿ ಜವಾನ್​ ಒಂದಾಗಿದೆ. ಈ ವರ್ಷದ ಪ್ರಾರಂಭದಲ್ಲಿ ಶಾರುಖ್​ ಖಾನ್​ ಅವರ ಪಠಾಣ್​ ಭರ್ಜರಿ ಕಲೆಕ್ಷನ್​ ಮಾಡಿತು. ಇದೀಗ ಜವಾನ್​ ಅದಕ್ಕಿಂತಲೂ ಎರಡು ಹೆಜ್ಜೆ ಮುಂದಿದೆ.

ಇದನ್ನೂ ಓದಿ: ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್​ ಖಾನ್​: ನಿರ್ದೇಶಕ ಸಂಜಯ್​ ಗುಪ್ತಾ!

ಆರನೇ ದಿನದ ಕಲೆಕ್ಷನ್​ ಲೆಕ್ಕಾಚಾರ: 'ಜವಾನ್'​ ಸಿನಿಮಾ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಚಿತ್ರವು ಈ ದಿನ 27.50 ಕೋಟಿ ರೂಪಾಯಿ ಗಳಿಸಲಿದೆ ಎಂದು ಅಂದಾಜಿಸಲಾಗಿದೆ. 6ನೇ ದಿನದ ಕಲೆಕ್ಷನ್​ನೊಂದಿಗೆ ಜವಾನ್​ ವಿಶ್ವಾದ್ಯಂತ 600 ಕೋಟಿ ರೂಪಾಯಿ ಸಮೀಪಿಸಲಿದೆ. ದೇಶದಲ್ಲಿ ಈಗಾಗಲೇ 300 ಕೋಟಿ ರೂಪಾಯಿ ದಾಟಿರುವ ಚಿತ್ರ 400 ಕೋಟಿಯತ್ತ ಯಶಸ್ವಿಯಾಗಿ ಸಾಗುತ್ತಿದೆ. ಅತ್ಯಂತ ವೇಗವಾಗಿ ಚಿತ್ರದ ಕಲೆಕ್ಷನ್​ ಸಾಗುತ್ತಿದ್ದು, ಮತ್ತಷ್ಟು ಹೊಸ ದಾಖಲೆಯನ್ನು ಬರೆಯಲು ಸಜ್ಜಾಗಿದೆ.

ಚಿತ್ರತಂಡ: ಶಾರುಖ್​ ಖಾನ್​ ಮತ್ತು ಪತ್ನಿ ಗೌರಿ ಖಾನ್​ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​ ನಿರ್ಮಿಸಿದ 'ಜವಾನ್​' ಸಿನಿಮಾಗೆ ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಟ ಮತ್ತು ನಿರ್ದೇಶಕನ ಕಾಂಬೋ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ವಿಜಯ್​ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ, ದೀಪಿಕಾ ಪಡುಕೋಣೆ, ಸಂಜಯ್​ ದತ್​, ಯೋಗಿ ಬಾಬು ಇದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ ಬರೆದ ಶಾರುಖ್​ ಖಾನ್​​ರ 'ಜವಾನ್​' ಸಿನಿಮಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.