ETV Bharat / entertainment

ಹಿಂದಿ ವಿಕ್ರಮ್ ವೇದ ಬಿಡುಗಡೆ.. ಹೃತಿಕ್, ಸೈಫ್ ಅಬ್ಬರಕ್ಕೆ ಅಭಿಮಾನಿಗಳ ಮೆಚ್ಚುಗೆ - Vikram Vedha details

ಇಂದು ಅದ್ದೂರಿಯಾಗಿ ರಿಲೀಸ್ ಆಗಿರುವ 'ವಿಕ್ರಮ್ ವೇದ' ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೃತಿಕ್, ಸೈಫ್​ ನಟನೆಗೆ ಜೈಕಾರ ಹಾಕಿದ್ದಾರೆ.

Vikram Vedha  movie released
ಹಿಂದಿ ವಿಕ್ರಮ್ ವೇದ ಬಿಡುಗಡೆ
author img

By

Published : Sep 30, 2022, 5:01 PM IST

ಹಿಂದಿ ಚಿತ್ರರಂಗ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆ ಆಗಿದ್ದು ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದೆ. ಇಂದು ಅದ್ಧೂರಿಯಾಗಿ ರಿಲೀಸ್ ಆಗಿರುವ ಈ 'ವಿಕ್ರಮ್ ವೇದ' ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೃತಿಕ್, ಸೈಫ್​ ನಟನೆಗೆ ಜೈಕಾರ ಹಾಕಿದ್ದಾರೆ.

ವಿಕ್ರಮ್ ವೇದ ತಮಿಳು ಚಿತ್ರದ ಹಿಂದಿ ರಿಮೇಕ್. ಮೂಲ ಚಿತ್ರ ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಹಿಂದಿ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. ಸೌತ್​​ ನಟರಾದ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ಕಾಲಿವುಡ್​ನ ಬ್ಲಾಕ್​ಬಸ್ಟರ್ ವಿಕ್ರಮ್ ವೇದ ಹಿಂದಿಗೆ ರಿಮೇಕ್ ಆಗಿ ಇಂದು ಥಿಯೇಟರ್​ಗಳಲ್ಲಿ ಅಬ್ಬರಿಸಿದೆ. ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆ ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ದರೋಡೆಕೋರನನ್ನು ಪತ್ತೆಹಚ್ಚಲು ಹೊರಡುವ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೈಫ್ ಅಲಿ ಖಾನ್ ನಟಿಸಿದ್ದು, ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ: 'ಪೊನ್ನಿಯಿನ್​ ಸೆಲ್ವನ್​​' ಅದ್ಧೂರಿ ಬಿಡುಗಡೆ.. ಚಿತ್ರಮಂದಿರಗಳೆದುರು ಸಿನಿಪ್ರಿಯರ ಸಂಭ್ರಮಾಚರಣೆ

  • Just finished #VikramVedha

    Saif is only good from Movie .#HrithikRoshan really need to quit Using bihari/ Up accent . He trying to be Badass but he failed in every scene .Just proving he is just mediocre actor but media made him like one of best actor

    1 star⭐
    Disappointing

    — AKKIAN_ADDU(ADESH) (@Akkian_x) September 30, 2022 " class="align-text-top noRightClick twitterSection" data=" ">

ಸಿನಿಮಾ ಕೊನೆವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಒರಿಜಿನಲ್ ಸಿನಿಮಾ ನೋಡಿದರೂ ಕೂಡ ಈ ಸಿನಿಮಾ ತುಂಬಾ ಅದ್ಭುತವಾದ ಅನುಭವ ನೀಡಿದೆ ಎಂದು ಪ್ರೇಕ್ಷಕರು ತಿಳಿಸಿದ್ದಾರೆ. ಹೃತಿಕ್ ರೋಷನ್ ಅವರ ನಟನೆ, ಹಾವಭಾವ ನೋಡಿದರೆ ಮೈ ರೋಮಾಂಚನವಾಗುತ್ತದೆ. ಸೈಫ್ ಅಲಿ ಖಾನ್ ಅವರದ್ದೂ ಅದ್ಭುತ ನಟನೆ. ಸೈಫ್, ಹೃತಿಕ್ ಮುಖಾಮುಖಿಯಾದ ಸೀನ್​ ಅತ್ಯದ್ಭುತ ಎಂದಿದ್ದಾರೆ.

  • #VikramVedha is a good remake with great 2nd half.The presence of Hrithik made it diff due to his attitude and accent.Saif was a copy of Madhavan.Ppl who haven’t watched the original will absolutely love it but for me,it was decent as I knew d twists.Can watch for HR & direction

    — sharat (@sherry1111111) September 30, 2022 " class="align-text-top noRightClick twitterSection" data=" ">

ಸೌತ್​ ಸಿನಿಮಾಗಳ ಅಬ್ಬರಕ್ಕೆ, ಬಾಯ್ಕಾಟ್ ಬಿಸಿಗೆ ನಲುಗಿದ್ದ ಬಾಲಿವುಡ್​ಗೆ ಆರ್​ಆರ್​ಆರ್​ ಸಿನಿಮಾ ಭರವಸೆ ಮೂಡಿಸಿತ್ತು. ಇದೀಗ ವಿಕ್ರಮ್ ವೇದ ಕೂಡ ಯಶಸ್ಸಿನ ಹಾದಿಯಲ್ಲಿ ಜರ್ನಿ ಆರಂಭಿಸಿದ್ದು, ಬಾಲಿವುಡ್​ ಬಣ್ಣದ ಲೋಕಕ್ಕೆ ಜೀವ ಬಂದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.