ETV Bharat / entertainment

ಬಿಗ್​ - ಬಿ ಅವರೊಂದಿಗೆ ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್​ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ - ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾ

ಬಾಲಿವುಡ್​ನ ಬಿಗ್ ​- ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಬಾಲಿವುಡ್​ನ ಚೊಚ್ಚಲ 'ಗುಡ್​ ಬೈ' ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.

Slug Goodbye: Rashmika Mandanna's Bollywood debut with Big B gets release date
ಬಿಗ್​-ಬಿ ಅವರೊಂದಿಗೆ ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್​ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
author img

By

Published : Jul 23, 2022, 5:02 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಅಭಿನಯದ 'ಗುಡ್ ಬೈ' ಸಿನಿಮಾ ಅಕ್ಟೋಬರ್ 7ರಂದು ತೆರೆಗೆ ಬರಲಿದೆ. ರಶ್ಮೀಕಾ ನಟಿಸಿದ ಮೊದಲ ಬಾಲಿವುಡ್​ ಚಲನಚಿತ್ರ ಇದಾಗಿದೆ.

ವಿಕಾಸ್​ ಬಹ್ಲ್ 'ಗುಡ್ ಬೈ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಏಕ್ತಾ ಆರ್. ಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ಹಾಗೂ ಚಲನಚಿತ್ರ ನಿರ್ಮಾಪಕ ವಿಕಾಸ್ ಬಹ್ಲ್ ಅವರ ಕಂಪನಿ 'ಗುಡ್ ಕೋ' ಸಹಯೋಗದೊಂದಿಗೆ ಚಿತ್ರವನ್ನು 'ಗುಡ್ ಬೈ' ನಿರ್ಮಿಸಿದ್ದು, ಬಿಡುಗಡೆ ದಿನಾಂಕವನ್ನು ತಯಾರಕರು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

Goodbye: Rashmika Mandanna's Bollywood debut with Big B gets release date
ಬಿಗ್​-ಬಿ ಅವರೊಂದಿಗೆ ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್​ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

'ಜೀವನ, ಕುಟುಂಬ ಮತ್ತು ಸಂಬಂಧಗಳ ಕುರಿತು ಹೃದಯಸ್ಪರ್ಶಿ ಕಥೆ ಅನುಭವಿಸಲು ಸಿದ್ಧರಾಗಿ!, 'ಗುಡ್‌ ಬೈ' ಸಿನಿಮಾ 2022ರ ಅಕ್ಟೋಬರ್ 7ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ' ಎಂದು ಚಿತ್ರದ ಪೋಸ್ಟರ್ ಜೊತೆಗೆ ಬ್ಯಾನರ್ ಸಮೇತ ಟ್ವೀಟ್ ಮಾಡಲಾಗಿದೆ.

ಇತ್ತೀಚಿನ ರಿಲೀಸ್​​ ಆದ ಚಿತ್ರದ ಸ್ಟಿಲ್‌ನಲ್ಲಿ ನೀನಾ ಗುಪ್ತಾ, ಪಾವೈಲ್ ಗುಲಾಟಿ, ಎಲ್ಲಿ ಅವ್ರ್‌ರಾಮ್, ಸುನಿಲ್ ಗ್ರೋವರ್ ಮತ್ತು ಸಾಹಿಲ್ ಮೆಹ್ತಾ ಕಾಣಿಸಿಕೊಂಡಿದ್ದು, ಬಹು ತಾರಾಗಣವನ್ನು ಈ ಸಿನಿಮಾ ಹೊಂದಿದೆ. ಇನ್ನು, ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವಾರು ಚಲನಚಿತ್ರಗಳು ಇವೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು', ರಣಬೀರ್ ಕಪೂರ್ ಜೊತೆಗೆ 'ಅನಿಮಲ್', ವಿಜಯ್ ತಲಪಟ್ಟಿ ಜೊತೆಗೆ 'ವರಿಸು' ಮತ್ತು ಅಲ್ಲು ಅರ್ಜುನ್ ಜೊತೆಗಿನ ಬಹುನಿರೀಕ್ಷಿತ 'ಪುಷ್ಪ-2' ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.

ಇದನ್ನೂ ಓದಿ: 'ಲೈಗರ್'​​ ಟ್ರೇಲರ್​ ರಿಲೀಸ್​ಗೆ ₹199 ಬೆಲೆಯ ಹವಾಯಿ ಚಪ್ಪಲಿ ಧರಿಸಿ ಬಂದ ವಿಜಯ್​ ದೇವರಕೊಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.