ETV Bharat / entertainment

ಮೆಟ್ರೋ ಸ್ಟೇಷನ್​ನಲ್ಲಿ ಕಾಣಿಸಿಕೊಂಡ ಅಮಿತಾಬ್​ ಬಚ್ಚನ್- ಫೋಟೋ ವೈರಲ್​

author img

By

Published : Jun 30, 2022, 5:44 PM IST

ಖ್ಯಾತ ನಟರನ್ನು ಕಂಡ ಕೂಡಲೇ ಜನರು ರೋಮಾಂಚನಗೊಳ್ಳುವುದು ಸಹಜ. ಹೀಗೆ ವ್ಯಕ್ತಿಯೊಬ್ಬ ಹೈದರಾಬಾದ್​ನ ಮೆಟ್ರೋ ರೈಲು ನಿಲ್ದಾಣದಲ್ಲಿ ನಟ ಅಮಿತಾಬ್​ ಬಚ್ಚನ್​ ಅವರನ್ನು ಕಂಡು ಅವರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಸಖತ್ ಸದ್ದು ಮಾಡುತ್ತಿದೆ.

big-b-amitabh-spotted-at-metro-station-in-hyderabad
ಮೆಟ್ರೋ ಸ್ಟೇಷನ್​ನಲ್ಲಿ ಕಾಣಿಸಿಕೊಂಡ ಅಮಿತಾಬ್​ ಬಚ್ಚನ್

ಹೈದರಾಬಾದ್​(ತೆಲಂಗಾಣ): ಬಾಲಿವುಡ್​ನ ಖ್ಯಾತ ನಟ ಅಮಿತಾಬ್​ ಬಚ್ಚನ್​ ಕಳೆದ ದಿನಗಳಿಂದ ಹೈದರಾಬಾದ್​ನಲ್ಲಿದ್ದಾರೆ. ಈ ನಡುವೆ ಅವರು ಇಲ್ಲಿನ ಮೆಟ್ರೋ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದ ಭಾಗವಾಗಿ ಬಿಗ್​-ಬಿ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

'ಪ್ರೊಜೆಕ್ಟ್​-ಕೆ' ಸಿನಿಮಾದಲ್ಲಿ ಅಮಿತಾಬ್​ ಬಚ್ಚನ್​ ನಟಿಸುತ್ತಿದ್ದಾರೆ. ನಟ ಪ್ರಭಾಸ್​ ಹೀರೋ ಆಗಿರುವ ಈ ಸಿನಿಮಾವನ್ನು ನಾಗ್ ಅಶ್ವಿನ್​ ನಿರ್ದೇಶಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲ ದಿನಗಳಿಂದ ಈ ಚಿತ್ರದ ಚಿತ್ರೀಕರಣ ಹೈದರಾಬಾದ್​ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದೆ. ಟ್ರೈನ್​ ಸೀಕ್ವೆನ್ಸ್​​ ಚಿತ್ರೀಕರಣಕ್ಕಾಗಿ ಬಿಗ್​-ಬಿ ರಾಯದುರ್ಗ ಮೆಟ್ರೋ ಸ್ಟೇಷನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮಿತಾಬ್​ ಬಚ್ಚನ್ ಮತ್ತು ಪ್ರಭಾಸ್
ಅಮಿತಾಬ್​ ಬಚ್ಚನ್ ಮತ್ತು ಪ್ರಭಾಸ್

ಮೆಟ್ರೋ ಸ್ಟೇಷನ್​ನಲ್ಲಿ ಅಮಿತಾಬ್​ರನ್ನು ಕಂಡ ಪ್ರಯಾಣಿಕರು ಮತ್ತು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಲ್ಲದೇ, ಚಿತ್ರೀಕರಣದಲ್ಲಿ ತೊಡಗಿರುವ ಬಿಗ್​-ಬಿ ಫೋಟೋವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ 'ಸಂಜೆ ಹೊತ್ತು ಸಾಮಾನ್ಯವಾಗಿ ಜನದಟ್ಟಣೆಯಿಂದ ಇರುತ್ತಿದ್ದ ಮೆಟ್ರೋ ಸ್ಟೇಷನ್​ ಸಂಪೂರ್ಣವಾಗಿ ಖಾಲಿಯಾಗಿತ್ತು. ಕೇವಲ ಕ್ಯಾಮರಾಮ್ಯಾನ್​ಗಳು ಹಾಗೂ ಚಿತ್ರತಂಡದವರೇ ಕಾಣಿಸುತ್ತಿದ್ದರು' ಎಂದೂ ಆ ವ್ಯಕ್ತಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ವೈಜಯಂತಿ ಮೂವೀಸ್​ನ ಹೊಸ ಕಚೇರಿ ಉದ್ಘಾಟನಾ ಸಮಾರಂಭ ಗಚ್ಚಿಬೌಲಿಯಲ್ಲಿ ನಡೆದಿತ್ತು. ಇದರಲ್ಲಿ ಅಮಿತಾಬ್​ ಬಚ್ಚನ್​, ನಿರ್ದೇಶಕರಾದ ರಾಘವೇಂದ್ರರಾವ್​, ಪ್ರಶಾಂತ್​ ನೀಲ್​, ನಟರಾದ ಪ್ರಭಾಸ್, ನಾನಿ, ದುಲ್ಕರ್​ ಸಲ್ಮಾನ್​ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೂ ಮುನ್ನ ಗಾಳಿಪಟ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.