ETV Bharat / entertainment

'ಬೇಬಿ' ಸಿನಿಮಾ ಇನ್ನೂ ನೋಡಿಲ್ವಾ? ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?

Baby OTT release date: 'ಬೇಬಿ' ಸಿನಿಮಾವು ಆಗಸ್ಟ್​ 25 ರಿಂದ ಜನಪ್ರಿಯ ತೆಲುಗು OTT ಪ್ಲಾಟ್​ಪಾರ್ಮ್​ 'ಆಹಾ'ದಲ್ಲಿ ಸ್ಟ್ರೀಮಿಂಗ್​ ಆಗಲಿದೆ.

baby movie ott release
ಬೇಬಿ
author img

By

Published : Aug 18, 2023, 7:29 PM IST

ತ್ರಿಕೋನ ಪ್ರೇಮಕಥೆಯಾದ 'ಬೇಬಿ' ತೆಲುಗು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನೇ ಗಳಿಸಿತು. ಸಾಯಿ ರಾಜೇಶ್​ ನಿರ್ದೇಶನದ ಈ ಚಿತ್ರ ಯುವಜನತೆಯನ್ನು ಅಪಾರವಾಗಿ ಆಕರ್ಷಿಸಿತು. ಆನಂದ್​ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್​ ಅಶ್ವಿನ್​ ಪ್ರಮುಖ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದರು. ಜುಲೈ 14 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾವು ಬಾಕ್ಸ್​ ಆಫೀಸ್​ನಲ್ಲಿ 80 ಕೋಟಿ ರೂ. ಗಳಿಸಿತ್ತು.

ಓಟಿಟಿಯಲ್ಲಿ ಯಾವಾಗ?: ಈ ಸಿನಿಮಾ ಓಟಿಟಿಗೆ ಬರಲು ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದರು. ಅವರಿಗೆ ಇದೀಗ ಗುಡ್​ ನ್ಯೂಸ್​ ಸಿಕ್ಕಿದೆ. 'ಬೇಬಿ' ಸಿನಿಮಾವು ಆಗಸ್ಟ್​ 25 ರಿಂದ ಜನಪ್ರಿಯ ತೆಲುಗು OTT ಪ್ಲಾಟ್​ಪಾರ್ಮ್​ 'ಆಹಾ'ದಲ್ಲಿ ಸ್ಟ್ರೀಮಿಂಗ್​ ಆಗಲಿದೆ. ನೀವು 'ಆಹಾ'ದ ಚಂದಾದಾರರಾಗಿದ್ದಲ್ಲಿ 12 ಗಂಟೆ ಮೊದಲೇ ಸಿನಿಮಾವನ್ನು ವೀಕ್ಷಿಸಬಹುದು. ಅಂದರೆ ಆಗಸ್ಟ್​ 24 ರಂದು ಸಂಜೆ 6 ಗಂಟೆಯಿಂದ ಸಬ್​ಸ್ಕ್ರೈಬರ್ಸ್​ಗೆ ಸಿನಿಮಾ ಸಿಗಲಿದೆ.

4 ಗಂಟೆ ಸಿನಿಮಾ: ಇತ್ತೀಚೆಗಷ್ಟೇ ಈ ಸಿನಿಮಾದ ಅಪ್​ಡೇಟ್​ ಮಾಹಿತಿಯೊಂದು ಹೊರಬಿದ್ದಿದೆ. ಸುಮಾರು 3 ಗಂಟೆ ಅವಧಿಯ ಈ ಚಿತ್ರವು OTT ಪ್ಲಾಟ್​ಪಾರ್ಮ್​ನಲ್ಲಿ ಬಿಡುಗಡೆಯಾಗುವಾಗ 4 ಗಂಟೆ ಕಾಲ ಇರಲಿದೆಯಂತೆ. ಈ ಚಿತ್ರಕ್ಕೆ ಇನ್ನೊಂದು ಹಾಡನ್ನು ಸೇರಿಸುವುದರೊಂದಿಗೆ, ಕೆಲವು ದೃಶ್ಯಗಳನ್ನು ಕೂಡ ಸೇರಿಸಲಾಗುತ್ತದೆ ಎಂದು ವರದಿಯಾಗಿದೆ. ಇನ್ನು ವೈಷ್ಣವಿ ಚೈತನ್ಯ ಮತ್ತು ವಿರಾಜ್​ ಅಶ್ವಿನ್​ ನಡುವೆ ಹೆಚ್ಚಿನ ದೃಶ್ಯಗಳು ಇರಲಿದೆಯಂತೆ. ಜೊತೆಗೆ ನಾಯಕ ಆನಂದ್​ ದೇವರಕೊಂಡ ಅವರಿಗೆ ಸಂಬಂಧಿಸಿದ ಕೆಲವು ಭಾವನಾತ್ಮಕ ದೃಶ್ಯಗಳು ಇರಲಿದೆಯಂತೆ. ಇದೆಲ್ಲಾ ನಿಜವೆಂದಾದರೆ ಸಿನಿಮಾವು ಓಟಿಟಿಯಲ್ಲಿ 4 ಗಂಟೆಗಳ ಕಾಲ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ Gadar 2 vs OMG 2 ಫೈಟ್​: 7ನೇ ದಿನದ ಕಲೆಕ್ಷನ್​ ಎಷ್ಟು?

ಚಿತ್ರಕಥೆ: ವೈಷ್ಣವಿ ಮತ್ತು ಆನಂದ್​ ಚಿಕ್ಕ ವಯಸ್ಸಿನಿಂದಲೇ ಪ್ರೀತಿಸಲು ಶುರು ಮಾಡುತ್ತಾರೆ. ಇವರಿಬ್ಬರ ಪ್ರೀತಿ ಶಾಲಾ ದಿನಗಳಿಂದಲೇ ಶುರುವಾಗಿ ಒಂದು ಹಂತಕ್ಕೆ ತಲುಪುತ್ತದೆ. ಆದರೆ ಹತ್ತನೇ ತರಗತಿಯಲ್ಲಿ ಆನಂದ್​ ಫೇಲ್​ ಆದ ಕಾರಣ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಲು ಆರಂಭಿಸುತ್ತಾನೆ. ವೈಷ್ಣವಿ ಖಾಸಗಿ ಇಂಜಿನಿಯರಿಂಗ್​ ಕಾಲೇಜಿಗೆ ಸೇರುತ್ತಾಳೆ. ಅಲ್ಲಿಯ ಹೊಸ ಪರಿಚಯಗಳು ವೈಶು ಆಲೋಚನಾ ವಿಧಾನವನ್ನು ಬದಲಾಯಿಸಿಬಿಡುತ್ತದೆ. ಹೀಗೆ ಆಕೆ ತನ್ನ ಸಹಪಾಠಿ ವಿರಾಜ್​ಗೆ ಹತ್ತಿರವಾಗುತ್ತಾಳೆ.

ಗೆಳೆತನದ ಹೆಸರಿನಲ್ಲಿ ಶುರುವಾದ ಈ ಸಂಬಂಧ ಪ್ರೇಮಕ್ಕೆ ತಿರುಗುತ್ತದೆ. ಅನಿರೀಕ್ಷಿತ ಸಂದರ್ಭಗಳಿಂದ ವೈಷ್ಣವಿ ವಿರಾಜ್​ಗೆ ದೈಹಿಕವಾಗಿ ಹತ್ತಿರವಾಗುತ್ತಾಳೆ. ಅದರ ನಂತರ ಏನಾಗುತ್ತದೆ? ಸತ್ಯ ತಿಳಿದಾಗ ಆನಂದ್​ ಪ್ರತಿಕ್ರಿಯೆ ಏನು? ಎಂಬುದು ಉಳಿದ ಕಥೆ. ಅಪರಿಚಿತ ವಯಸ್ಸಿನಲ್ಲಿ ಹುಟ್ಟಿಕೊಂಡ ಪ್ರೇಮಕಥೆ ಅವರು ದೊಡ್ಡವರಾದಂತೆ ಯಾವ ತಿರುವು ಪಡೆದುಕೊಂಡು ಎಲ್ಲಿಗೆ ತಲುಪುತ್ತದೆ ಅನ್ನೋದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು!.

ಇದನ್ನೂ ಓದಿ: 'Baby'ಯಾಗಿ ಬಂದ ವಿಜಯ್​ ದೇವರಕೊಂಡ ಸಹೋದರ: ಆನಂದ್​ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು..​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.