'ಕಡಲತೀರದ ಭಾರ್ಗವ' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಪನ್ನಾಗ ಹೊಸ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
ಆದಿತ್ಯ ವಿನೋದ್ ನಾಯಕನಾಗಿ ಎಂಟ್ರಿ: ಪನ್ನಾಗ ಹೊಸ ಹೆಜ್ಜೆಗೆ 'ಕೆಂದಾವರೆ' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಆದಿತ್ಯ ವಿನೋದ್ ನಾಯಕನಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ವಿನೋದ್ ಅವರು ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆ ನಟ ಎಂಟ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ವಿನೋದ್ ಅವರ ಮೇಲಿದೆ.
ನವೆಂಬರ್ ತಿಂಗಳಿಂದ ಶೂಟಿಂಗ್ ಶುರು: ನೈಜ ಘಟನೆ ಆಧಾರಿತ 'ಕೆಂದಾವರೆ' ಸಿನಿಮಾಗೆ ಆದಿತ್ಯ ವಿನೋದ್, ಹಿತಾಂಶು ಸಂಗೀತ ಒದಗಿಸುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ ನೀಡಲಿದ್ದಾರೆ. ಅಪ್ರಮೇಯ ಫಿಲ್ಮ್ಸ್ ಬ್ಯಾನರ್ ಅಡಿ ಚಿತ್ರ ತಯಾರಾಗುತ್ತಿದ್ದು, ಅನಿಲ್ ಎಂ.ಎಚ್, ಪ್ರಶಾಂತ್ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿ, ಕಾರ್ಕಳ, ಸಾಗರ ಭಾಗದಲ್ಲಿ 'ಕೆಂದಾವರೆ' ಸಿನಿಮಾದ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ನವೆಂಬರ್ ತಿಂಗಳಿನಿಂದ ಶೂಟಿಂಗ್ಗೆ ಕಿಕ್ ಸ್ಟಾರ್ಟ್ ಸಿಗಲಿದೆ.
ಇದನ್ನೂ ಓದಿ: ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಮಾಜಿ ಸಿಎಂ ಹೆಚ್ಡಿಕೆ-ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್
ಸ್ಯಾಂಡಲ್ವುಡ್ನಲ್ಲಿ ಹೊಸಬರ ಸಿನಿಮಾಗಳೇ ಹೆಚ್ಚು.. ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬರುತ್ತಿವೆ. ಹೊಸ ಪ್ರತಿಭೆಗಳಿಗೆ ಸ್ಯಾಂಡಲ್ವುಡ್ ಬಹುದೊಡ್ಡ ವೇದಿಕೆಯೆಂದೇ ಹೇಳಬಹುದು. ವಿಭಿನ್ನ ಕಥೆಗಳನ್ನು ಹೊತ್ತುಕೊಂಡು ಬರುವ ಕಲಾವಿದರನ್ನು ಕನ್ನಡಿಗರು ತಮ್ಮ ಮನೆ ಮಕ್ಕಳಂತೆ ಸ್ವಾಗತಿಸುತ್ತಾರೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡುತ್ತಾರೆ. ಕಥೆ ಕೂಡ ತುಂಬಾ ಚೆನ್ನಾಗಿದ್ದರೆ, ಅವರಾಗಿಯೇ ಪ್ರಮೋಷನ್ ಕೂಡ ಮಾಡುತ್ತಾರೆ. ಸಿನಿಮಾಗಳಿಗೆ ಹೆಚ್ಚಿನ ಪ್ರಚಾರದ ಅಗತ್ಯ ಕೂಡ ಇರುವುದಿಲ್ಲ.
ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಇಂತಹ ಅನೇಕ ಹೊಸಬರ ಸಿನಿಮಾಗಳು ಬಂದಿವೆ. ಏನಾದರೊಂದು ಹೊಸ ಕಥೆಯನ್ನು ಇಟ್ಟುಕೊಂಡು ಬಂದು ಪ್ರೇಕ್ಷಕರನ್ನು ರಂಜಿಸುತ್ತಾರೆ. ಈಗ ಇಂತಹದ್ದೇ ಒಂದು ವಿಭಿನ್ನ ಕಥೆಯೊಂದಿಗೆ 'ಕೆಂದಾವರೆ' ತಂಡ ತೆರೆ ಮೇಲೆ ಅರಳಲು ಬರುತ್ತಿದೆ. ನೈಜ ಘಟನೆಯನ್ನು ಇಟ್ಟುಕೊಂಡು ಬರುತ್ತಿರುವ ಈ ಸಿನಿಮಾ ಸಿನಿ ಪ್ರೇಮಿಗಳಿಗೆ ಹೊಸತನವನ್ನು ಉಣಬಡಿಸುವ ನಿರೀಕ್ಷೆಯಿದೆ. ಹೀಗಾಗಿ ಸಹಜವಾಗಿಯೇ ಪ್ರೇಕ್ಷರಲ್ಲಿ ಕುತೂಹಲ ಹೆಚ್ಚಿದೆ.
ಇದನ್ನೂ ಓದಿ: 'ದೇವರ ಕನಸು' ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್